‘ಆ ಒಂದು ಕನಸು’ ಶೀರ್ಷಿಕೆ ಅನಾವರಣ

ರಂಗು ಕ್ರಿಯೇಷನ್ಸ್ ಲಾಂಛನದಲ್ಲಿ ದಿಲೀಪ ಬಿ.ಎಂ ನಿರ್ಮಿಸುತ್ತಿರುವ ನೂತನ ಚಿತ್ರ ‘ಆ ಒಂದು ಕನಸು’.

ಈ ಚಿತ್ರದ ಶೀರ್ಷಿಕೆಯನ್ನು ಹಿರಿಯ ನಟರಾದ ಎಸ್ ಉಮೇಶ್ , ಹೊನ್ನವಳ್ಳಿ ಕೃಷ್ಣ ಹಾಗೂ ಆಶಾ(ಹಿರಿಯ ಕಂಠದಾನ ಕಲಾವಿದೆ) ಬಿಡುಗಡೆ ಮಾಡಿದ್ದಾರೆ.
ಡಿಸೆಂಬರ್ 3ರಿಂದ ಚಿತ್ರೀಕರಣ ಆರಂಭ ವಾಗಲಿದೆ.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಿಷ್ಣು ನಾಚನೇಕರ್ ನಿರ್ದೇಶಿಸುತ್ತಿದ್ದಾರೆ.

‘ಆ ಒಂದು ಕನಸು’ ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳಿವೆ. ಬೆಂಗಳೂರು, ಸಾಗರ, ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಯಲಿದೆ.ಸಾ ಕಷ್ಟು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ವಿಶ್ವಾಸ್ ನಾಯಕರಾಗಿ ನಟಿಸುತ್ತಿರುವ ಎರಡನೇ ಚಿತ್ರವಿದು. ಬಾಲ ರಾಜವಾಡಿ, ಅಮಿತ್ ಗಿರೀಶ್ ಶಿವಣ್ಣ, ರಮೇಶ್ ಭಟ್ ಗಿರೀಜಾ ಲೋಕೇಶ್, ಕುರಿ ಬಾಂಡ್ ರಂಗ, ಹರ್ಷವರ್ಧನ್, ಶ್ವೇತಾ ರಾವ್  ಜಯಶ್ರೀ, ನಾರಾಯಣ ಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!