ಸಂಗೀತ ಪ್ರೇಮಿಗಳು ಸದಾ ಗುನುಗುವ ಹಾಡುಗಳನ್ನು ಕೊಡುಗೆಯಾಗಿ ನೀಡಿರುವ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದು ಎ2 ಮ್ಯೂಸಿಕ್. ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ, ಅಲೆಮಾರಿ ಸಿನಿಮಾ ಸೇರಿದಂತೆ ಹಲವು ಚಿತ್ರಗಳ ಮೂಲಕ ಸಂಚಲನ ಸೃಷ್ಟಿಸಿರುವ ಅಶ್ವಿನಿ ಮೀಡಿಯಾ ನೆಟ್ವರ್ಕ್ 2020ರಲ್ಲಿ ಹೊಸ ಆಯಾಮದಲ್ಲಿ A2 ಮ್ಯೂಸಿಕ್ ಹೆಸರಿನಲ್ಲಿ ಮರು ನಾಮಕರಣವಾಯಿತು.
ಸಲಗ ಸಿನಿಮಾ ಮೂಲಕ ಗಾಂಧಿ ನಗರದಲ್ಲಿ ಹೊಸ ಹೆಜ್ಜೆ ಇಟ್ಟು ವಿಜಯೋತ್ಸವನ್ನು ಸಂಭ್ರಮಿಸಿತು. ಬಳಿಕ A2 ಸಂಸ್ಥೆ ಭತ್ತಳಿಕೆಯಿಂದ ಬಂದ ಹಾಡುಗಳೆಲ್ಲವೂ ದಾಖಲೆ ಬರೆದಿವೆ. ಇತ್ತೀಚೆಗೆ ಸೂತ್ರಧಾರ, ಹಂಟರ್, ಕೆಟಿಎಂ, ಯುದ್ಧಕಾಂಡ, ಹಾಸ್ಟೆಲ್ ಹುಡುಗರು ಸೇರಿದಂತೆ ನೂರಕ್ಕೂ ಹೆಚ್ಚು ಹೊಸ ಸಿನಿಮಾಗಳ ಆಡಿಯೋ ಖರೀದಿ ಮಾಡುವ ಮೂಲಕ ಸಂಚಲನ ಸೃಷ್ಟಿಸಿರುವ A2 ಮ್ಯೂಸಿಕ್, A2 originals, A2 entertainment, A2 ಭಕ್ತಿಸಾಗರ, A2 ಫ್ಲೋಕ್ಲೋರ್, A2 ಕ್ಲಾಸಿಕಲ್ ಸೇರಿದಂತೆ ಬೇರೆ ಬೇರೆ ಆಯಾಮಗಳಲ್ಲೂ ಹೊರಹೊಮ್ಮಿದೆ.
ಇದೇ A2 ಒರಿಜಿನಲ್ಸ್ ಫ್ಲಾಟ್ ಫಾರ್ಮ್ ಮೂಲಕ ಮತ್ತೊಂದು ಸಾಹಸಕ್ಕಿಳಿದಿದೆ. ಹೊಸ ಪ್ರತಿಭೆಗಳಿವೆ ವೇದಿಕೆ ಕಲ್ಪಿಸಿ ಕೊಡುವ ಮೂಲಕ ಮ್ಯೂಸಿಕಲ್ ಸೀರೀಸ್ ನಿರ್ಮಾಣಕ್ಕೂ ಕೈ ಹಾಕಿದೆ. A2 ಸಂಸ್ಥೆಯ ಈ ಸಾಹಸಕ್ಕೆ ಕೃಷ್ಣ ಅಜಯ್ ರಾವ್ ಸಾಥ್ ಕೊಟ್ಟಿದ್ದಾರೆ. ನಾಲ್ಕು ಭಾಷೆಯಲ್ಲಿ, ನಾಲ್ಕು ಚಾಪ್ಟರ್ ಗಳಲ್ಲಿ ಬರ್ತಿರುವ ಭಾರತದ ಪ್ರಪ್ರಥಮ ನಾನ್ ಫಿಲ್ಮಂ ಪ್ಯಾನ್ ಇಂಡಿಯಾ ನಿನಗಾಗಿ ಆಲ್ಬಂ ಇದಾಗಿದೆ. ಎ2 ಮ್ಯೂಸಿಕ್ ಡಿಜಿಟಲ್ ವೇದಿಕೆಯಲ್ಲಿ ನಾಲ್ಕು ಹಂತಗಳಲ್ಲಿ ಬಿಡುಗಡೆಯಾಗಿದ್ದು, ಮೊದಲ ಹಾಡನ್ನು ನಟ ಅಜಯ್ ರಾವ್ ಬಿಡುಗಡೆ ಮಾಡಿ ನಾಯಕಿಯೊಂದಿಗೆ ಹೆಜ್ಜೆ ಹಾಕಿದರು.
ಇದೇ ವೇಳೆ ಮಾತನಾಡಿದೆ ಅಜಯ್ ರಾವ್, ಎಕ್ಸ್ ಕ್ಯೂಸ್ ಮಿ ಸಿನಿಮಾದಿಂದಲೇ ನನ್ನ ಹಾಗೂ ಎ2 ಮ್ಯೂಸಿಕ್ ಸಂಸ್ಥೆಯ ಒಡನಾಟವಿದೆ. ವ್ಯಕ್ತಿಗಳು, ಸಂಪರ್ಕ, ಸಂಬಂಧ ಎಲ್ಲಾ ಅವರೇ. ಆ ಅಭಿಮಾನ, ಪ್ರೀತಿ ಅಲ್ಲಿಂದ ಬೆಳವಣಿಗೆ ಆಗಿದೆ. ಎಕ್ಸ್ ಕ್ಯೂಸ್ ಮಿ ಸಮಯದಲ್ಲಿಯೂ ನಾನು ಹೊಸಬ. ನನಗೂ ಯಾರು ಪರಿಚಯ ಇರಲಿಲ್ಲ. ಯಾರೋ ಒಬ್ಬರು ಅವಕಾಶ ಕೊಟ್ಟರು. ಇವತ್ತು ಈ ಹೊಸ ಪ್ರತಿಭೆಗಳ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದೇನೆ. ಆರ್ಟಿಸ್ಟ್ ಪ್ರಸೆಂಟ್ ಮಾಡಿರುವ ರೀತಿ ಚೆನ್ನಾಗಿದೆ. ನೈಜತೆಯಾಗಿ ಹಾಡು ಮೂಡಿದೆ. ನನ್ನ ಹೊಸ ಸಿನಿಮಾ ಯುದ್ಧಕಾಂಡ ಆಡಿಯೋ ಎ2 ಮ್ಯೂಸಿಕ್ ಭಾರೀ ಮೊತ್ತಕ್ಕೆ ಖರೀದಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
Be the first to comment