ಮೇ 17ರಂದು ‘ಎ’ ರಿ-ರಿಲೀಸ್‌

ಉಪೇಂದ್ರ ನಟನೆಯ ‘ಎ’ ಸಿನಿಮಾ ಮೇ 17ರಂದು ರಿ-ರಿಲೀಸ್‌ ಆಗಲಿದೆ.

ಮೇ 17ರಂದು ಬೆಂಗಳೂರಿನ ‘ಪ್ರಸನ್ನ’ ಥಿಯೇಟರ್‌ ಸೇರಿದಂತೆ ರಾಜ್ಯದಾದ್ಯಂತ  ‘ಎ’  ರಿ-ರಿಲೀಸ್‌ ಆಗಲಿದೆ ಎಂದು ಉಪೇಂದ್ರ ಟ್ವೀಟ್‌ ಮಾಡಿದ್ದಾರೆ.

ಬಹುನಿರೀಕ್ಷಿತ  ‘ಯುಐ’ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ  ಉಪ್ಪಿ ‘ಯುಐ’ ಸಿನಿಮಾ ಬದಲಿಗೆ ‘ಎ’ ಸಿನಿಮಾದ ರಿಲೀಸ್ ಡೇಟ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

‘ಯುಐ’ ಸಿನಿಮಾ ವಿಎಫ್‌ಎಕ್ಸ್‌ ಕಾರಣದಿಂದಾಗಿ ವಿಳಂಬವಾಗುತ್ತಿದೆ ಎಂದು ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್‌ ತಿಳಿಸಿದ್ದರು. 2022ರ ಜೂನ್‌ನಲ್ಲಿ ಸೆಟ್ಟೇರಿದ್ದ ಈ ಸಿನಿಮಾ ಜೂನ್‌ನಲ್ಲಿ ತೆರೆಕಾಣುವ ಸಾಧ್ಯತೆ ಇದೆ.

ಈ ವರ್ಷದ ಆರಂಭದಿಂದ  ಶಿವರಾಜ್ ಕುಮಾರ್ ನಟನೆಯ ‘ಕರಟಕ ದಮನಕ’ ಹೊರತು ಪಡಿಸಿ ಬೇರೆ ಯಾವುದು ಸ್ಟಾರ್ ಸಿನಿಮಾಗಳು ತೆರೆ ಕಂಡಿಲ್ಲ.  ಇದೀಗ ‘ಎ’ ರಿ-ರಿಲೀಸ್ ಬಗ್ಗೆ ಉಪೇಂದ್ರ ಸರ್ಪ್ರೈಸ್ ಮಾಹಿತಿ ನೀಡಿದ್ದಾರೆ.

ಉಪೇಂದ್ರ, ಚಾಂದಿನಿ ನಟನೆಯ ‘ಎ’ ಚಿತ್ರದಲ್ಲಿ ಮೊದಲ ಬಾರಿಗೆ ಉಪೇಂದ್ರ ಅವರು ನಾಯಕ ನಟನಾಗಿ ನಟಿಸಿದ್ದರು. ಚಿತ್ರ ಸೂಪರ್ ಹಿಟ್ ಎನಿಸಿತು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!