ಚಿತ್ರ: ರಾನಿ
ನಿರ್ದೇಶನ: ಗುರುತೇಜ ಶೆಟ್ಟಿ
ತಾರಾ ಬಳಗ: ಕಿರಣ್ ರಾಜ್, ರಾಧ್ಯ, ಸಮೀಕ್ಷಾ, ರವಿಶಂಕರ್, ಉಗ್ರಂ ಮಂಜು, ಯಶ್ ಶೆಟ್ಟಿ ಇತರರು
ರೇಟಿಂಗ್: 3.5
ದೊಡ್ಡ ಸ್ಟಾರ್ ನಟ ಆಗಿ ಮಿಂಚಬೇಕು ಎನ್ನುವ ಆಸೆ ಹೊತ್ತ ನಾಯಕ ಮುಂದೆ ಪ್ರೀತಿಯಲ್ಲಿ ಸಿಲುಕಿ ಮುಂದೆ ಕೊಲೆ ಮಾಡಿ ಜೈಲಿಗೆ ಸೇರುವ ಕಥೆ ಈ ವಾರ ಬಿಡುಗಡೆ ಆದ ‘ರಾನಿ’ ಸಿನಿಮಾದ ಒನ್ ಲೈನ್ ಸ್ಟೋರಿ.
ಸಿನಿಮಾ ರಂಗದಲ್ಲಿ ದೊಡ್ಡ ಸ್ಟಾರ್ ಆಗಬೇಕೆಂಬ ನಾಯಕನ ಪಾತ್ರದಲ್ಲಿ ಕಿರಣ್ ರಾಜ್ ನಟಿಸಿದ್ದಾರೆ. ಅವನ ಗೆಳತಿಯಾಗಿ ರಾಧ್ಯ ಚಿತ್ರದಲ್ಲಿದ್ದಾರೆ. ರಾಧ್ಯ ಮೇಲೆ ಕಣ್ಣು ಹಾಕುವ ಯಶ್ ಶೆಟ್ಟಿಯ ಕುತಂತ್ರದಿಂದ ಕಿರಣ್ ರಾಜ್ ಜೈಲು ಸೇರುವ ಪರಿಸ್ಥಿತಿ ಬರುತ್ತದೆ. ಬಳಿಕ ರಾನಿ ಆದ ಕಿರಣ್ ರಾಜ್ ಯಾವ ರೀತಿ ಯಶ್ ಶೆಟ್ಟಿ ಗ್ಯಾಂಗ್ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ಚಿತ್ರದಲ್ಲಿ ಒಂದಷ್ಟು ಕ್ಲೈಮ್ಯಾಕ್ಸ್ ಇದೆ. ಚಿತ್ರಮಂದಿರದಲ್ಲಿ ಚಿತ್ರ ನೋಡಿದಾಗ ಇದಕ್ಕೆ ಉತ್ತರ ಸಿಗುತ್ತದೆ.
ನಿರ್ದೇಶಕರು ಆರಿಸಿಕೊಂಡ ಕಥಾವಸ್ತು ಭಿನ್ನವಾಗಿದೆ. ನಿರ್ಮಾಪಕರು ಚಿತ್ರದ ಮೇಲೆ ಸಾಕಷ್ಟು ಖರ್ಚು ಮಾಡಿರುವುದು ಗೊತ್ತಾಗುತ್ತದೆ. ಮಣಿಕಾಂತ್ ಕದ್ರಿ ಸಂಗೀತ, ಸಚಿನ್ ಬಸ್ರೂರ್ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ.
ನಾಯಕನಾಗಿ ಕಿರಣ್ ರಾಜ್ ಎರಡು ಶೇಡ್ ಗಳಲ್ಲಿ ಗಮನ ಸೆಳೆಯುವಂತೆ ನಟಿಸಿದ್ದಾರೆ. ಆಕ್ಷನ್ ದೃಶ್ಯಗಳನ್ನು ಭರ್ಜರಿಯಾಗಿ ನಿಭಾಯಿಸಿದ್ದಾರೆ. ಖಳ ನಾಯಕನಾಗಿ ಯಶ್ ಶೆಟ್ಟಿ, ರವಿಶಂಕರ್ ಅಬ್ಬರಿಸಿದ್ದಾರೆ.
ಆಕ್ಷನ್, ಸೆಂಟಿಮೆಂಟ್, ಥ್ರಿಲ್ಲರ್ ಚಿತ್ರವಾಗಿ ರಾನಿ ಓಕೆ ಅನಿಸುತ್ತದೆ.
Be the first to comment