ನಿರ್ದೇಶನ: ಅರುಣ್ ಅಮುಕ್ತ
ನಿರ್ಮಾಪಕ: ಸುಬ್ರಮಣ್ಯ ಕುಕ್ಕೆ, ಶಿವಲಿಂಗೇಗೌಡ
ತಾರಾಗಣ: ಚಂದನ್ ಶೆಟ್ಟಿ, ಅಮರ್, ಭಾವನ, ಮನಸ್ವಿ ವಿವಾನ್, ಕಾಕ್ರೋಚ್ ಸುಧಿ ಇತರರು
ರೇಟಿಂಗ್: 3.5/5
ವಿದ್ಯಾರ್ಥಿ ದೆಸೆಯಲ್ಲಿ ದಾರಿ ತಪ್ಪುವ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಬದುಕಿನ ಪಾಠ ಹೇಳುವ ಕಥೆ ಹೊಂದಿರುವ ಚಿತ್ರ ಈ ವಾರ ತೆರೆಗೆ ಬಂದಿರುವ ‘ ವಿದ್ಯಾರ್ಥಿ, ವಿದ್ಯಾರ್ಥಿನಿಯರೇ’.
ಚಿತ್ರದಲ್ಲಿ ಮಕ್ಕಳನ್ನು ಸರಿದಾರಿಗೆ ತರುವ, ಅವರಿಗೆ ಬುದ್ಧಿ ಹೇಳುವ ಸಂದೇಶ ಚಿತ್ರದಲ್ಲಿದೆ. ಈ ಚಿತ್ರ ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ. ಪೋಷಕರಿಗೂ ನೋಡಲು ಅಡ್ಡಿಯಿಲ್ಲ.
ಶಾಲೆ ಒಂದರಲ್ಲಿ ಶ್ರೀಮಂತ ವ್ಯಕ್ತಿಗಳ ಗ್ಯಾಂಗ್ ಕಳಂಕವಾಗಿ ವರ್ತಿಸುತ್ತಿರುತ್ತಾರೆ. ದುರಂಕಾರದಿಂದ ಮೆರೆಯುವ ವಿದ್ಯಾರ್ಥಿ ತಂಡ ಒಂದು ಹಂತದಲ್ಲಿ ಸರಿದಾರಿಗೆ ಬರುತ್ತಾರೆ. ಅವರನ್ನು ಯಾರು ಸರಿಗೆ ತರುತ್ತಾರೆ, ಹೇಗೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ಚಿತ್ರದಲ್ಲಿ ನಿರ್ದೇಶಕರು ಡ್ರಗ್ಸ್, ಆನ್ಲೈನ್ ಗೇಮ್, ರಾಗಿಂಗ್, ಮೊದಲಾದ ವಿಷಯಗಳ ಕುರಿತು ಬೆಳಕ ಚೆಲ್ಲುವ ಯತ್ನ ಮಾಡಿದ್ದಾರೆ. ಜೊತೆಗೆ ಸಂದೇಶವನ್ನು ನೀಡಿದ್ದಾರೆ.
ಚಿತ್ರ ವಿಪರೀತ ಎಳೆದಂತೆ ಭಾಸ ಆಗುತ್ತದೆ. ವಿದ್ಯಾರ್ಥಿಗಳ ಸ್ವಚ್ಛಂದ ಬದುಕು, ದುರಹಂಕಾರದ ಮಾತುಗಳು ರಿಪೀಟ್ ಆಗುತ್ತದೆ. ಇದು ನೋಡುಗರಿಗೆ ಸ್ವಲ್ಪ ಬೇಸರ ತರಿಸುತ್ತದೆ.
ನಾಯಕ ನಟನಾಗಿ ಕಾಣಿಸಿಕೊಂಡಿರುವ ಚಂದನ್ ಶೆಟ್ಟಿ ಎರಡು ಶೇಡ್ ನ ಪಾತ್ದಲ್ಣಸಿಕೊಂಡಿದ್ದಾರೆ. ಭವ್ಯ, ಅರವಿಂದ್ ರಾವ್, ಸುನಿಲ್ ಪುರಾಣಿಕ್, ಪ್ರಶಾಂತ್ ಸಂಬರ್ಗಿ ತಮ್ಮ ಪಾತ್ರಗಳನ್ನು ಉತ್ತಮವಾಗಿ ನಿಭಾಯಿಸಿದ್ದಾರೆ.
ವಿಜಿತ್ ಕೃಷ್ಣ ಸಂಗೀತ ಚಿತ್ರವನ್ನು ಕೊನೆಯವರೆಗೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
___

Be the first to comment