ಮನರಂಜನೆಗೆ ಮತ್ತೊಂದು ಹೆಸರೇ ಜೀ಼ ಕನ್ನಡ. ಜನಪ್ರಿಯ ಧಾರಾವಾಹಿಗಳಿಂದ ಈಗಾಗಲೇ ಮನೆ ಮಾತಾಗಿರುವ ಜೀ಼ ಕನ್ನಡ, ವಾರವಿಡೀ ಅಂದ್ರೆ ಸೋಮವಾರದಿಂದ ಶುಕ್ರವಾರದವರೆಗೆ ನಿಮ್ಮ ನೆಚ್ಚಿನ ಧಾರಾವಾಹಿಗಳ ಮೂಲಕ ನಿಮಗೆ ಒಂದು ಗಂಟೆಗಳ ಮಹಾಸಂಚಿಕೆಯ ಮೆರವಣಿಗೆ ನೀಡಲು ಸಜ್ಜಾಗಿದೆ.
ಸೋಮವಾರ ಸಂಜೆ 6:30 ರಿಂದ 7:30ಕ್ಕೆ ಪುಟ್ಟಕ್ಕನ ಮಕ್ಕಳು, ಮಂಗಳವಾರ ಸಂಜೆ 7 ರಿಂದ 8 ಗಂಟೆಯವರೆಗೆ ಅಮೃತಧಾರೆ, ಬುಧವಾರ ರಾತ್ರಿ 8 ರಿಂದ 9 ಗಂಟೆಯವರೆಗೆ ಲಕ್ಷ್ಮಿ ನಿವಾಸ, ಗುರುವಾರ ರಾತ್ರಿ 9 ರಿಂದ 10 ಗಂಟೆಯವರೆಗೆ ಶ್ರಾವಣಿ ಸುಬ್ರಮಣ್ಯ, ಶುಕ್ರವಾರ ರಾತ್ರಿ 10 ರಿಂದ 11 ಗಂಟೆಯವರೆಗೆ ಬ್ರಹ್ಮಗಂಟು ಧಾರಾವಾಹಿಗಳು ಹಲವಾರು ತಿರುವುಗಳೊಂದಿಗೆ ನಿಮಗೆ ಒಂದು ಗಂಟೆಯ ಮಹಾ ಮನರಂಜನೆ ನೀಡಲಿವೆ.
ತಪ್ಪದೇ ಸೋಮವಾರದಿಂದ ಶುಕ್ರವಾರದವರೆಗೆ ಜೀ಼ ಕನ್ನಡ ವಾಹಿನಿಯನ್ನು ವೀಕ್ಷಿಸಿ ಮನರಂಜನೆಯ ರಸದೌತಣ ಸವಿಯಿರಿ.
Be the first to comment