ದಿ ಗ್ರೇಟ್ ಎಂಟರ್ಟೈನರ್ಸ್ ಲಾಂಛನದಲ್ಲಿ ಸಿದ್ಧವಾದ ಚಿತ್ರ ಲಂಕೆ. ರಾಮ್ಪ್ರಸಾದ್ ಈ ಚಿತ್ರದ ನಿರ್ದೇಶಕರು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಈ ಚಿತ್ರ ಬಿಡುಗಡೆ ಆಗಿರಬೇಕಿತ್ತು. ಕೊರೊನಾದಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ಅದೇ ಲಂಕೆ ಸಿನಿಮಾ ಮತ್ತೆ ಶೀರ್ಷಿಕೆ ಬಿಡುಗಡೆ ಮಾಡಿಕೊಂಡು ಇನ್ನೇನು ಶೀಘ್ರದಲ್ಲಿ ಪ್ರೇಕ್ಷಕರ ಮುಂದೆ ಬರುವುದಾಗಿ ಹೇಳಿಕೊಂಡಿದೆ. ಹೊಟೇಲ್ ಇಂಟರ್ನ್ಯಾಷನಲ್ನಲ್ಲಿ ಅದ್ಧೂರಿ ಶೀರ್ಷಿಕೆ ಬಿಡುಗಡೆ ಸಮಾರಂಭ ಮಾಡಿಕೊಂಡು ಚಿತ್ರದ ಬಗ್ಗೆ ಮಾಹಿತಿಯನ್ನೂ ಹಂಚಿಕೊಂಡಿದೆ ತಂಡ.
ಮೊದಲಿಗೆ ಮಾತನಾಡಿದ ನಿರ್ದೇಶಕ ರಾಮ್ಪ್ರಸಾದ್, 2019ರಂದು ಲಂಕೆ ಸಿನಿಮಾ ಶುರುವಾಯ್ತು. ಜ. 11ಕ್ಕೆ 2020ರಲ್ಲಿ ಮುಗಿಯಿತು. ಕಥೆ ಬರೆಯುತ್ತಿದ್ದಂತೆ ರಾಮಾಯಣದ ತಿರುಳಿರುವ ಹಿನ್ನೆಲೆಯಲ್ಲಿ ಲಂಕೆ ಎಂದೇ ಶೀರ್ಷಿಕೆ ಫಿಕ್ಸ್ ಆಯ್ತು. ಈ ಸಿನಿಮಾದಲ್ಲಿ. ಯಾರ್ ಹೀರೋ ಎಂದು ಯೋಚಿಸುತ್ತಿದ್ದಾಗ ನಿರ್ಮಾಪಕರೇ ಯೋಗಿ ಅವರ ಹೆಸರನ್ನು ಸೂಚಿಸಿದರು. ಇಲ್ಲಿಯವರೆಗೂ ಯೋಗಿ ಕಾಣಿಸದ ರೀತಿಯಲ್ಲಿ ಅವರನ್ನು ಲಂಕೆ ಸಿನಿಮಾ ನೋಡಬಹುದು. ಸಿನಿಮಾ ವಿಚಾರದಲ್ಲಿ ಅವರು ತುಂಬ ಡೆಡಿಕೇಟೆಡ್. ಇದೀಗ ಸಿನಿಮಾ ಚಿತ್ರ ಬಿಡುಗಡೆ ಹಂತದಲ್ಲಿದೆ ಎಂದರು ನಿರ್ದೇಶಕರು.
ಚಿತ್ರದಲ್ಲಿ ಕೃಷಿ ತಾಪಂಡ ಸಹ ಯೋಗಿ ಜತೆಗಿನ ಸ್ನೇಹದ ಬಗ್ಗೆ ಹೇಳಿಕೊಳ್ಳುತ್ತ, ಕಳೆದ ಮೂರು ವರ್ಷಗಳಿಂದ ನಾನು ಮತ್ತು ಯೋಗಿ ಸ್ನೇಹಿತರು. ಆದರೆ, ಒಟ್ಟಿಗೆ ಸಿನಿಮಾ ಮಾಡಲು ಆಗಿರಲಿಲ್ಲ. ಇದೀಗ ಅದು ಲಂಕೆ ಮೂಲಲಕ ಈಡೇರಿದೆ. ನನ್ನ ಪಾತ್ರವೂ ಅಷ್ಟೇ ಚೆನ್ನಾಗಿದೆ.ನಾಣು ಹೇಗಿದ್ದೆನೋ ಅದೇ ರೀತಿ ಪಾತ್ರ ನನಗೆ ಸಿಕ್ಕಿದೆ. ಸದ್ಯದಲ್ಲಿಯೇ ಸಿನಿಮಾ ಬಿಡುಗಡೆ ಆಗಲಿದೆ ಎಂದರು.
ಅದೇ ರೀತಿ ಮತ್ತೋರ್ವ ನಟಿ ಕಾವ್ಯಾ ಶೆಟ್ಟಿ, ಈ ಸಿನಿಮಾದಲ್ಲಿ ಮೊದಲಿಗೆ ಸಿಕ್ಕ ಪಾತ್ರವೇ ಬೇರೆ ಆಮೇಲೆ ಸಿಕ್ಕ ಪಾತ್ರವೇ ಬೇರೆ. ಆಗಲ್ಲ ಎಂದು ಹೇಳಿ.. ಕೊನೆಗೆ ಅದನ್ನೇ ಮಾಡುವಂತೆ ನಿರ್ದೇಶಕರು ಒಪ್ಪಿಸಿದರು. ಇ ಚಿತ್ರದಲ್ಲಿ ನನ್ನದು ನೆಗೆಟಿವ್ ಪಾತ್ರ. ವಿಲನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಲಂಕೆ ಸಿನಿಮಾ ಶೀರ್ಷಿಕೆಗೆ ಹೋಲಿಕೆ ಮಾಡಿದರೆ, ನಾನಿಲ್ಲಿ ರಾವಣ. ಯೋಗಿ ರಾಮನ ಪಾತ್ರ. ಈ ರೀತಿಯ ಪಾತ್ರ ಮಾಡಿದ್ದು ಇದೇ ಮೊದಲು. ಈ ಥತದ ಪಾತ್ರ ಮಾಡಿದ ಮೇಲೆ ಅಂಥದ್ದೆ ಅವಕಾಶಗಳು ಸಿಗುತ್ತಿವೆ. ಆದರೆ, ನಾನು ಸದ್ಯಕ್ಕೆ ಯಾವುದನ್ನೂ ಒಪ್ಪಿಲ್ಲ. ಈ ಸಿನಿಮಾಕ್ಕೆ ಸಿಗುವ ಪ್ರತಿಕ್ರಿಯೆ ನೋಡಿ ಮುಂದಿನ ವಿಚರಿಸುತ್ತೇನೆ. ಇನ್ನೊಂದು ವಿಶೇಷ ಏನೆಂದರೆ, ಈ ಸಿನಿಮಾದಲ್ಲಿ ನನ್ನ ಕಡೆಯಿಂದ ಆ್ಯಕ್ಷನ್ ಸನ್ನಿವೇಶಗಳನ್ನು ನಿರ್ದೇಶಕರು ಮಾಡಿಸಿದ್ದಾರೆ ಎಂಬುದು ಕಾವ್ಯಾ ಮಾತು.
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಸಹ ಮಾತನಾಡಿ, ನನ್ನ ಮತ್ತು ಯೋಗಿ ಅವರ ಮೊದಲ ಸಿನಿಮಾ ಇದು. ಒಂದೇ ಸಿನಿಮಾದಲ್ಲಿ ನಟಿಸಿದರೂ, ಈ ಚಿತ್ರದಲ್ಲಿ ಇಬ್ಬರಿಗೂ ಕಾಂಬಿನೇಷನ್ ಇಲ್ಲ. ಫ್ಲ್ಯಾಶ್ಬ್ಯಾಕ್ನಲ್ಲಿ ನಡೆಯುವ ಕಥೆಯಲ್ಲಿ ಎಸ್ತರ್ ನರೋನಾ ನನಗೆ ಜೋಡಿಯಾಗಿದ್ದಾರೆ. ಮಂಡ್ಯದಲ್ಲಿ ನಡೆದ ನೈ ಘಟನೆಯನ್ನೇ ವಿಶೇಷವಾಗಿ ತೋರಿಸಿದ್ದಾರೆ ನಿರ್ದೇಶಕರು ಎನ್ನುತ್ತಾರೆ ವಿಜಯ್.ಚಿತ್ರದಲ್ಲಿ ಪಾತ್ರದ ಬಗ್ಗೆ ಹೆಚ್ಚೇನೂ ಮಾತನಾಡದ ಲೂಸ್ ಮಾದ ಯೋಗಿ, ಲಂಕೆ ಸಿನಿಮಾ ತುಂಬ ಅದ್ಬುತವಾದ ಕಥೆ. ರೌಡಿಸಂ ಹಿನ್ನೆಲೆಯ ಕಥೆ. ಈ ಸಿನಿಮಾದಲ್ಲಿ ಸಂಚಾರಿ ವಿಜಯ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದೆ. ನಮ್ಮ ಚಿತ್ರದಲ್ಲಿ ಟವರು ನಟಿಸಿದ್ದೇ ಒಂದು ಖುಷಿ. ಮತ್ತೊಂದು ಸಿನಿಮಾ ಒಟ್ಟಿಗೆ ಮಾಡೋಣ. ಇನ್ನೇನು ಅತೀ ಶೀಘ್ರದಲ್ಲಿ ಲಂಕೆ ಹೊತ್ತು ಚಿತ್ರಮಂದಿರಕ್ಕೆ ಬರಲಿದ್ದೇವೆ ಎಂದರು ಯೋಗಿ.
ಪಟೇಲ್ ರ್ಶರೀನಿವಾಸ್ ಮತ್ತು ಶ್ರೀಮತಿ ಸುರೇಖಾ ರಾಮ್ ಪ್ರಸಾದ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾ ಅಂದುಕೊಂಡಂತೆ ಅಚ್ಚುಕಟ್ಟಾಗಿ ಮೂಡಿಬಂದಿದೆ. ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಮುಂದೂಡಲಾಯಿತು. ಇದೀಗ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಚಿತ್ರಮಂದಿರಕ್ಕೆ ಬರಲಿದ್ದೇವೆ ಎಂದರು ನಿರ್ಮಾಪಕರು. ರಮೇಶ್ ಬಾಬು ಛಾಯಾಗ್ರಹಣ, ಕಾರ್ತಿಕ್ ಶರ್ಮಾ ಸಂಗೀತ, ಸಂಕಲನ ಶಿವರಾಜ್, ಸಾಹಸ ಪಳನಿರಾಜ್, ರವಿವರ್ಮಾ, ಅಶೋಕ್ ಮಾಡಿದ್ದಾರೆ. ಧನಂಜಯ್ ಮತ್ತು ಮೋಹನ್ ನೃತ್ಯ ನಿರ್ದೇಶನ, ಕಥೆ ಚಿತ್ರಕಥೆ, ಸಂಭಾಷಣೆ, ಮತ್ತು ಸಾಹಿತ್ಯವನ್ನು ನಿರ್ದೇಶಕ ರಾಮ್ ಪ್ರಸಾದ್ ಮತ್ತು ಗುರುಪ್ರಸಾದ್ ಒದಗಿಸಿದ್ದಾರೆ. ಗೌಸ್ಪೀರ್, ಅನಿರುದ್ಧ, ರಾಮ್ಪ್ರಸಾದ್ ಅವರು ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ, ಜನ್ಮದಿನದ ನಿಮಿತ್ತ ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿಯೇ ಕೇಕ್ ಕತ್ತರಿಸಿ ಸಂಭ್ರಮಿಸಿತು ಚಿತ್ರತಂಡ.
Be the first to comment