ಸಂಕ್ರಾಂತಿಗೆ ಪ್ರೇಮ್ ಗಿಫ್ಟ್ -ಏಕ್‌ ಲವ್‌ ಯಾ ಹೊಸ ಪೋಸ್ಟರ್ ಬಿಡುಗಡೆ

ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ ಜೋಗಿ ಪ್ರೇಮ್ ಸಾರಥ್ಯದಲ್ಲಿ ಸಿದ್ಧವಾಗುತ್ತಿರುವ ಚಿತ್ರ “ಏಕ್ ಲವ್ ಯಾ” ಸದ್ಯ ಈ ಚಿತ್ರದ ಪೋಸ್ಟರ್‌ ಜೊತೆಗೆ ಮೊದಲ ಹಾಡಿನ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದ್ದು ‘ ಫೆಬ್ರವರಿ 14 ಪ್ರೇಮಿಗಳ ದಿನದಂದು ಏಕ್ ಲವ್ ಯಾ ಮೊದಲ ಹಾಡು ರಿಲೀಸ್‌ ಆಗಲಿದ್ದು , ಈ ಚಿತ್ರವು 4ಭಾಷೆಯಲ್ಲಿ ತೆರೆಗೆ ಬರಲಿದೆ.

ಜೋಗಿ ಪ್ರೇಮ್‌ ನಿರ್ದೇಶನದಲ್ಲಿ ತಯಾರಾಗ್ತಿರೋ ಮ್ಯೂಸಿಕಲ್‌ ವಿಶ್ಯುಯಲ್‌ ಟ್ರೀಟ್‌ ಚಿತ್ರ ಇದಾಗಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ರಿಲೀಸ್‌ ಆಗಲಿರೋ ಹಾಡಿಗೆ ಅರ್ಜುನ್‌ ಜನ್ಯಾ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ.

ಸಿಕ್ಸ್‌ ಪ್ಯಾಕ್‌ ನಲ್ಲಿ ಕಾಣಿಸಿಕೊಂಡಿರೋ ಏಕ್‌ ಲವ್‌ ಯಾ ಹೀರೋ ರಾಣಾ ಪ್ರಥಮ ಬಾರಿಗೆ ನಾಯಕನಾಗಿ ಬೆಳ್ಳಿ ಪರದೆ ಮೇಲೆ ಮಿಂಚಲು ಬರ್ತಿದ್ದಾರೆ. ರಕ್ಷಿತಾ ಫಿಲಂ ಫ್ಯಾಕ್ಟರಿ ಮೂಲಕ ನಿರ್ಮಾಣ ವಾಗ್ತಿರೋ ಸಿನಿಮಾ ಈಗಾಗಲೇ ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!