ಹೊಸವರ್ಷಕ್ಕೆ’ ಬನ್ನಿ ಪಾರ್ಟಿ ಮಾಡೋಣ’ ವಿಡಿಯೋ ಸಾಂಗ್ ರಿಲೀಸ್.

2021‌ ಆರಂಭವಾಗಲೂ‌ ಕೆಲವೇ ದಿನಗಳು ಬಾಕಿಯಿದೆ.‌

ಹೊಸವರ್ಷ ಸ್ವಾಗತಿಸಲು‌ ಸುಂದರವಾದ ‘ಬನ್ನಿ ಪಾರ್ಟಿ ಮಾಡೋಣ’ ಎಂಬ ವಿಡಿಯೋ ಸಾಂಗ್ ಬಿಡುಗಡೆಯಾಗಲಿದೆ.‌

ಈ ಹಿಂದೆ ‘ಸ್ಯಾಂಡಲ್ ವುಡ್ ಗುರು’ ಎಂಬ ಚಲನಚಿತ್ರದಲ್ಲಿ ನಟಿಸಿದ್ದ ಮಾನಸ್(ಮ್ಯಾನ್) ಈ ವಿಡಿಯೋ ಸಾಂಗ್ ಬಿಗ್ ಮ್ಯಾನ್ ಸ್ಟುಡಿಯೋ ಲಾಂಛನದಲ್ಲಿ ನಿರ್ಮಿಸುವುದರೊಂದಿಗೆ, ನಿರ್ದೇಶನವನ್ನು ಮಾಡಿದ್ದಾರೆ. ಮಾನಸ್(ಮ್ಯಾನ್) ಅವರೆ ಈ ವಿಡಿಯೋ ಸಾಂಗ್ ಗೆ ಸಾಹಿತ್ಯ ಬರೆದಿದ್ದು, ಜೇಮ್ಸ್ ಅವರ ಜೊತೆಗೂಡಿ ಸಂಗೀತವನ್ನು ನೀಡಿದ್ದಾರೆ. ಮಾನಸ್(ಮ್ಯಾನ್‌) ಹಾಗೂ ಸಿರಿಶ ಅಭಿನಯಿಸಿರುವ ಈ ಹಾಡು ಮಾನಸ್ ತಮ್ಮ ಯೂಟ್ಯೂಬ್ ಚಾನಲ್ ನಲ್ಲೇ ಬಿಡುಗಡೆ ಮಾಡಲಿದ್ದಾರೆ.

ಪಾರ್ಟಿ ಪ್ರಿಯರಿಗೆ ಹೇಳಿಮಾಡಿಸಿದಂತಿರುವ ಈ ಹಾಡು ಬರೀ ನ್ಯೂಯರ್ ಗೆ ಅಷ್ಟೇ ಸೀಮಿತವಲ್ಲ. ಇದು ಎಲ್ಲಾ ಪಾರ್ಟಿಗಳಿಗೂ ಅನ್ವಯವಾಗುವ ಹಾಗಿದೆ ಎಂಬ ಅನಿಸಿಕೆ ಮಾನಸ್ (ಮ್ಯಾನ್ ) ಅವರದು. ಹೊಸವರ್ಷ ಹತ್ತಿರದಲ್ಲಿರುವುದರಿಂದ ಈ ಸಂದರ್ಭದಲ್ಲಿ ಬೊಂಬಾಟ್ ಪಾರ್ಟಿ ಸಾಂಗ್ ಬಿಡುಗಡೆ ಮಾಡುತ್ತಿರುವುದಾಗಿ ಮಾನಸ್ ತಿಳಿಸಿದ್ದಾರೆ.
ಐದು ನಿಮಿಷಗಳ ಈ ವಿಡಿಯೋ ಸಾಂಗ್ ನ‌ ತುಣುಕು ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!