ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ ಶುಗರ್ ಫ್ಯಾಕ್ಟರಿ ಚಿತ್ರವನ್ನು ನಟಿ ಅಮೂಲ್ಯ ಸೋದರ ದೀಪಕ್ ಅರಸ್ ನಿರ್ದೇಶಿಸುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಈ ಚಿತ್ರದಲ್ಲಿ ಮೂವರು ನಾಯಕಿಯರು ಅಭಿನಯಿಸುತ್ತಿದ್ದು, ಬೆಡಗಿ ಸೊನಾಲ್ ಮಾಂಟೆರೊ ಹಾಗೂ ಚೆಲುವೆ ಅದ್ವಿತಿ ಶೆಟ್ಟಿ ಈಗಾಗಲೇ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ .
ಮೂರನೇ ನಾಯಕಿ ಯಾರು…? ಎಂಬ ಕುತೂಹಲಕ್ಕೆ ಈಗ ತೆರೆಬಿದಿದ್ದು, ಗ್ಲಾಮರ್ ಗೊಂಬೆ ಶಿಲ್ಪಾ ಶೆಟ್ಟಿ ಮೂರನೇ ನಾಯಕಿಯಾಗಿ ಶುಗರ್ ಫ್ಯಾಕ್ಟರಿ ಸೇರಿಕೊಂಡಿದ್ದಾರೆ.ಕನ್ನಡ, ತುಳು ಭಾಷೆಯ ಕೆಲವು ಚಿತ್ರಗಳಲ್ಲಿ ಹಾಗೂ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಅನುಭವ ಶಿಲ್ಪಾ ಶೆಟ್ಟಿ ಅವರಿಗಿದೆ.
ಜನವರಿ 28ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್. ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಚಿತ್ರದಲ್ಲಿ ಏಳು ಹಾಡುಗಳಿದ್ದು , ಚೇತನ್ ಕುಮಾರ್ , ಯೋಗರಾಜ್ ಭಟ್ ಜಯಂತ್ ಕಾಯ್ಕಿಣಿ ಮುಂತಾದವರು ಸಾಹಿತ್ಯ ಬರೆಯುತ್ತಿದ್ದಾರೆ ಕಬೀರ್ ರಫಿ ಸಂಗೀತ ನೀಡುತ್ತಿರುವ ಶುಗರ್ ಫ್ಯಾಕ್ಟರಿ ಯನ್ನು ಸಂತೋಷ್ ರೈ ಪಾತಾಜೆ ತಮ್ಮ ಛಾಯಾಗ್ರಹಣದ ಮೂಲಕ ಸೆರೆ ಹಿಡಿಯಲಿದ್ದಾರೆ.

Be the first to comment