ಚಂದನವನದಲ್ಲಿ ತಯಾರಾಗುತ್ತಿದೆ ಡಾನ್ಸ್ ಆಧಾರಿತ ಚಿತ್ರ: ಸುಶಾಂತ್ ಪೂಜಾರಿ ನಾಯಕ

ಸ್ಯಾಂಡಲ್ ವುಡ್ ನಲ್ಲಿ ಪ್ರಪ್ರಥಮ ಬಾರಿಗೆ ಡಾನ್ಸ್ ಆಧಾರಿತ ಚಿತ್ರವೊಂದು ನಿರ್ಮಾಣಗೊಳ್ಳುತ್ತಿದ್ದು, ABCD, Street dancer ಹಾಗೂ ಇನ್ನೂ ಹಲವಾರು ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್ ನಟ ಸುಶಾಂತ್ ಪೂಜಾರಿ ಈ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ . A.S. production ಬ್ಯಾನರ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರಕ್ಕೆ ಕಿಶೋರ್ ಕುಮಾರ್ ಮತ್ತು ಸುಜಯ್ ಎಸ್. ಕಾಮತ್ ಆಕ್ಷನ್ ಕಟ್ ಹೇಳಲಿದ್ದಾರೆ. ಕಿರಣ್ ಶೆಟ್ಟಿ, ಆಶಿಕ ಸುವರ್ಣ, ವಿನೋದ್ ಕುಮಾರ್ ಮತ್ತು ಶಿವರಾಜ್ R ಮೊಗವೀರ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಸಿನೆಮಾ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆಯನ್ನು ಎಬ್ಬಿಸಲಿದೆ. ಚಿತ್ರದ ಟೈಟಲ್ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಚಿತ್ರತಂಡ ಚಿತ್ರೀಕರಣದ ತಯಾರಿಯಲ್ಲಿ busy ಆಗಿದೆ.

ಸುಶಾಂತ್ ಪೂಜಾರಿ ನಾಯಕ

ಸುಶಾಂತ್ ಪೂಜಾರಿ

Be the first to comment

Leave a Reply

Your email address will not be published. Required fields are marked *

Translate »
error: Content is protected !!