ಕರಾವಳಿ ತೀರಲ್ಲಿ ಶರುವಾಯ್ತು ಉಡುಂಬ ನ ಕಥೆ.
ಕನ್ನಡ ಚಿತ್ರರಂಗದಲ್ಲಿ ಒಂದು ವಿಚಿತ್ರ ಟೈಟಲ್ ಸಿನಿಮಾ ಈಗಾಗಲೇ ಸದ್ದು ಮಾಡಿದೆ . ಟೈಟಲ್ ಕೇಳಿದ ತಕ್ಷಣ ಒಂದು ಕ್ಷಣ ಇದೇನಪ್ಪಾ ಹೀಗಿದೆ ಟೈಟಲ್ ಅಂದವರೇ ಹೆಚ್ಚು . ಈಗ ಆ ಚಿತ್ರ ಆಡಿಯೋ ಬಿಡುಗಡೆ ಮಾಡಿ ರಿಲೀಸ್ ಗೆ ರೆಡಿಯಾಗುತ್ತಿದೆ.
ಶಿವರಾಜ್ ನಿರ್ದೇಶನದ ಚಿತ್ರ ಉಡುಂಬ. ಕರಾವಳಿ ತೀರದಲ್ಲಿ ನಡೆಯುವ ಕತೆಯೊಂದನ್ನು ಬೆಳ್ಳಿತೆರೆಗೆ ತರುತ್ತಿದ್ದಾರೆ. ನಟ ಪವನ್ ಸೂರ್ಯ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಬೆಸ್ತರ ಹುಡುಗನಾಗಿ ಆ್ಯಕ್ಷನ್ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ಸಿಕ್ಸ್ ಪ್ಯಾಕ್ ಬೆಳೆಸಿಕೊಂಡಿದ್ದಾರೆ.
‘ಚಿತ್ರದ ಕ್ಲೈಮಾಕ್ಸ್ನಲ್ಲಿ ನಾಯಕ ನಟನ ಸಾಮರ್ಥ್ಯ ತೋರಿಸಬೇಕಿತ್ತು. ಬೆಸ್ತರ ಹುಡುಗರು ಬಹಳ ಕಟ್ಟು ಮಸ್ತಾಗಿರುತ್ತಾರೆ. ಹಾಗಾಗಿ ಸಹಜವಾಗಿ ಮೂಡಿ ಬರಲಿ ಎಂದು ಪವನ್ ಕೂಡಾ ಸಿಕ್ಸ್ ಪ್ಯಾಕ್ ಬೆಳೆಸಿದರು’ ಎಂದಿದ್ದಾರೆ ನಿರ್ದೇಶಕ ಶಿವರಾಜ್. ಇನ್ನು ಈ ಚಿತ್ರ ಶಿವರಾಜ್ ಅವ್ರಿಗೆ ಮೊದಲ ಚಿತ್ರವಾಗಿದೆ ಹಾಗಾಗಿ ಚಿತ್ರದ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ
ಕರಾವಳಿ ತೀರದಲ್ಲಿ ಮೀನು ಮಾರಿಕೊಂಡು ಜೀವನ ನಡೆಸುವ ಜನಾಂಗದ ನಡುವಿನ ಕತೆ ಇದೆ. ಇದರ ಜತೆಯಲ್ಲಿ ಕ್ಯೂಟ್ ಲವ್ ಸ್ಟೋರಿ ಕೂಡಾ ಹೇಳಲಾಗಿದೆ ಎಂದಿದ್ದಾರೆ ಅವರು. ಗೂಳಿ ಹಟ್ಟಿ, ಹಾಲು ತುಪ್ಪ ಚಿತ್ರಗಳಲ್ಲಿ ನಟಿಸಿದ ಪವನ್ ಸೂರ್ಯ ಚಿತ್ರಕ್ಕಾಗಿ ಜಿಮ್ನಲ್ಲಿ ಸಾಕಷ್ಟು ಬೆವರು ಹರಿಸಿದ್ದಾರೆ ಸಸ್ಯಾಹಾರಿಯಾಗಿದ್ದುಕೊಂಡೇ ಬಾಡಿ ಬಿಲ್ಡ್ ಮಾಡಿದ್ದಾರೆ. ಈ ಹಿಂದೆ ಮಾಡದಂತ ಪಾತ್ರದಲ್ಲಿ ಪವನ್ ಬಣ್ಣ ಹಚ್ಚಿದ್ದಾರೆ
ಪವನ್ ಗೆ ನಾಯಕಿಯಾಗಿ ಚಿರಶ್ರೀ ಅಂಚನ್ ನಟಿಸಿದ್ದಾರೆ. ಚಿರಶ್ರೀ ಈಗಾಗಲೇ ತುಳು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಹುಲಿರಾಯ ಚಿತ್ರದಲ್ಲಿ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದರು. . ಶರತ್ಲೋಹಿತಾಶ್ವ,ಚಿತ್ರದಲ್ಲಿ ಖಡಕ್ ವಿಲನ್ ಆಗಿ ಅಬ್ಬರಿಸಿದ್ದಾರೆ
ಇನ್ನು ಮೊನ್ನೆಯಷ್ಟೇ ಚಿತ್ರದ ಆಡಿಯೋ ಬಿಡುಗಡೆಯಾಗಿದೆ . ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ರಾಜ್ ಮೆನನ್ ಸಂಗೀತ ಸಂಯೋಜಿಸಿದ್ದಾರೆ ಚಿತ್ರಕ್ಕೆ ಹನುಮಂತ್ ರಾವ್ ಹಾಗು ವೆಂಕಟ್ ರೆಡ್ಡಿ ಬಂಡವಾಳ ಹೂಡಿದ್ದಾರೆ . ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ದೊರಕಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ತೆರೆಗೆ ಬರಲಿದೆ.
Be the first to comment