ಹಾಟೆಸ್ಟ್ ಲೇಡಿಯ ಲೈಫ್ ಸ್ಟೋರಿ ‘ಶಕೀಲಾ’!ಡಿಸೆಂಬರ್ 25ಕ್ಕೆ ಬಿಡುಗಡೆ

ಕೊರೊನಾ ಸಮಸ್ಯೆಯಿಂದ ಜನರು ಚಿತ್ರಮಂದಿರಗಳಿಗೆ ಬರುತ್ತಿಲ್ಲ. ಈ ನಡುವೆ ಶಕೀಲಾ ಸಿನಿಮಾ ದೇಶಾದ್ಯಂತ ಸುಮಾರು 2 ಸಾವಿರ ಸ್ಕ್ರೀನ್​​​​ಗಳಲ್ಲಿ ಬಿಡುಗಡೆಯಾಗುತ್ತಿದ್ದು ಜನರನ್ನು ಚಿತ್ರಮಂದಿರಗಳಿಗೆ ಶಕೀಲಾ ಕರೆಸದಿದ್ದರೆ ಮತ್ತ್ಯಾರು ಕರೆಸುತ್ತಾರೆ ಎಂದು ಇಂದ್ರಜಿತ್ ಲಂಕೇಶ್ ಪ್ರಶ್ನಿಸಿದ್ದಾರೆ.

ಇಂದ್ರಜಿತ್ ಲಂಕೇಶ್ ನಿರ್ದೇಶನದ ಮಲಯಾಳಂ ನಟಿ ‘ಶಕೀಲಾ’ ಬಯೋಪಿಕ್ ಇದೇ ಡಿಸೆಂಬರ್ 25ರಂದು ಬಿಡುಗಡೆಯಾಗುತ್ತಿದೆ. ‘ಶಕೀಲಾ’ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದಷ್ಟೇ ಅಲ್ಲ, ಇಡೀ ದೇಶದಲ್ಲಿ 2 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎನ್ನುವುದು ವಿಶೇಷ. ಇದುವರೆಗೂ ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ಸಹ ಇಷ್ಟೊಂದು ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿಲ್ಲದಿರುವುದರಿಂದ, ಇದು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೇ ಅತೀ ದೊಡ್ಡ ಚಿತ್ರ ಎನ್ನುತ್ತಾರೆ ಇಂದ್ರಜಿತ್ ಲಂಕೇಶ್.

“ಶಕೀಲಾ ಮಲಯಾಳಂ ಮಾತ್ರವಲ್ಲ, ತಮಿಳು, ಕನ್ನಡ, ತೆಲುಗು, ಹಿಂದಿ ಚಿತ್ರರಂಗಕ್ಕೂ ಪರಿಚಯವಿರುವ ನಟಿ. ಈ ಚಿತ್ರದಲ್ಲಿ ಈ ಐದೂ ಭಾಷೆಯ ಕಲಾವಿದರು ಹಾಗೂ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ದಕ್ಷಿಣ ಭಾರತದ ನಟಿಯ ಕಥೆಯಲ್ಲಿ ಉತ್ತರ ಭಾರತದ ನಟಿಯೊಬ್ಬರು ನಟಿಸುತ್ತಿರುವುದು ವಿಶೇಷ. ಆದ್ದರಿಂದ ಈ ಚಿತ್ರವನ್ನು 5 ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ” ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಅಷ್ಟೇ ಅಲ್ಲ, “ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಸಿಗುವುದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ಕಿತ್ತಾಟವೇ ನಡೆದು ಹೋಗುತ್ತದೆ. ಆದರೆ, ಇದೀಗ ಕೊರೊನಾ ಸಮಸ್ಯೆಯಿಂದ ನಿರ್ಮಾಪಕರು ಚಿತ್ರ ಬಿಡುಗಡೆ ಮಾಡುವುದಕ್ಕೆ ಹೆದರುತ್ತಿರುವ ನಡುವೆ ಚಿತ್ರಮಂದಿರದವರೇ ನಮ್ಮನ್ನು ಕರೆದು ಚಿತ್ರ ಪ್ರದರ್ಶನ ಮಾಡಲು ಅವಕಾಶ ಮಾಡಿಕೊಡುತ್ತಿದ್ದಾರೆ. ಹಾಗಾಗಿ ಎರಡು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಾವು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಒಂದು ಕಾಲದಲ್ಲಿ ಕೇರಳದಲ್ಲಿ ಚಿತ್ರಮಂದಿರಗಳೆಲ್ಲಾ ಮುಚ್ಚುತ್ತಿದ್ದ ಸಂದರ್ಭದಲ್ಲಿ ಶಕೀಲಾ ಸಿನಿಮಾಗಳಿಂದ ಚಿತ್ರಮಂದಿರಗಳು ಮತ್ತೆ ತೆರೆಯುವಂತಾಯ್ತು. ಈಗಲೂ ಕೂಡಾ ಅದೇ ಸಮಯ ಒದಗಿಬಂದಿದೆ. ಜರನ್ನು ಚಿತ್ರಮಂದಿರಕ್ಕೆ ಶಕೀಲಾ ಕರೆಸಲಿಲ್ಲ ಎಂದರೆ ಮತ್ತ್ಯಾರು ಕರೆಸುತ್ತಾರೆ…?” ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
Be the first to comment

Leave a Reply

Your email address will not be published. Required fields are marked *

Translate »
error: Content is protected !!