ಮದಗಜ ಟೀಸರ್‌ ನೋಡಿದ ಅಭಿಮಾನಿಗಳು ಫಿದಾ..!

ಇಂದು ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಹುಟ್ಟಹಬ್ಬ ಹಿನ್ನೆಲೆ ಬಹು ನಿರೀಕ್ಷೆಯ ಮದಗಜ ಫಸ್ಟ್‌ ಲುಕ್‌ ಟೀಸರ್‌  ಅನ್ನು ಉಡುಗೊರೆಯಾಗಿ ರಿಲೀಸ್‌ ಮಾಡಲಾಗಿದೆ. ರಿಲೀಸ್‌ ಆಗದ ಕೇವಲ 3 ಗಂಟೆಯಲ್ಲೇ 485ಕೆ ವಿವ್ಯೂಸ್‌ ಆಗಿದೆ. ಬರೀ ಟೈಟಲ್‌ ನಿಂದ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದ ಮದಗಜ ಫಸ್ಟ್‌ ಲುಕ್‌ ಟೀಸರ್‌ ಯೂಟ್ಯೂಬ್‌ ನಲ್ಲಿ ಧೂಳೆಬ್ಬಿಸಿದೆ.

ಮದಗಜ, ಶ್ರೀಮುರಳಿ ಅವರ 25ನೇ ಚಿತ್ರವಾಗಿದ್ದು, ಇದರಲ್ಲೂ ಉಗ್ರಂ ಚಿತ್ರದಂತೆ ಮಾಸ್‌ ಲುಕ್‌ ನಲ್ಲಿ ಮರಳಿದ್ದಾರೆ. ಸಿನಿಮಾದಲ್ಲಿ ಭರ್ಜರಿ ಆಕ್ಷನ್‌, ಖಡಕ್‌ ಲುಕ್‌ ಹಾಗೂ ಪಂಚಿಂಗ್‌ ಡೈಲಾಗ್ಸ್‌ ನಲ್ಲಿ ಶ್ರೀಮುರಳಿ ಮಿಂಚಿದ್ದಾರೆ.  ಈ  ಸಿನಿಮಾವನ್ನು ವಾರಣಾಸಿಯಲ್ಲಿ ಚಿತ್ರೀಕರಿಸಿದ್ದು, ಚಿತ್ರ ಸಖತ್‌ ಆಗಿ ಮೂಡಿ ಬಂದಿದೆ ಎಂಬುದು ಟೀಸರ್‌ ನಿಂದಲೇ ಹೇಳಬಹುದು.

ಉಮಾಪತಿ ಫಿಲ್ಮಂಸ್‌ ಬ್ಯಾನರ್‌ ನ ಅಡಿಯಲ್ಲಿ ಉಮಾಪತಿ ಶ್ರೀನಿವಾಸ ಗಛಡ ಮದಗಜ ಚಿತ್ರವನ್ನು  ಸುಮಾರು 20 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಶ್ರೀಮುರಳಿ ಜೋಡಿಯಾಗಿ ಆಶಿಕಾ ರಂಗನಾಥ್‌ ಅಭಿನಯಿಸಿದ್ದಾರೆ. ಚಿತ್ರದಲ್ಲಿ ನವೀನ್‌ ಕುಮಾರ್‌ ಛಾಯಾಗ್ರಹಣವಿದ್ದು, ರವಿ ಬಸ್ರೂರ್ ಸಂಗೀತ ನೀಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!