ಭಾರತದ ಹಲವು ರಾಜ್ಯಗಳಲ್ಲಿ ನೂರಾರು ತೂಗು ಸೇತುವೆಗಳನ್ನು ನಿರ್ಮಿಸಿ, ಲಕ್ಷಾಂತರ ಜನರಿಗೆ ಸಂಪರ್ಕಕಲ್ಪಿಸಿದ “ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್ ಬಗ್ಗೆ ಅನೇಕರಿಗೆ ಗೊತ್ತಿರಬಹುದು.ಕರ್ನಾಟಕದ ಸುಳ್ಯ ಮೂಲದ ಹೆಮ್ಮೆಯ ಈ ಸಾಧಕನ ಜೀವನ ಈಗ ಸಿನಿಮಾ ರೂಪದಲ್ಲಿ ತೆರೆಮೇಲೆ ಬರುತ್ತಿದೆ.
ಹೌದು, ಗಿರೀಶ್ ಭಾರದ್ವಾಜ್ ಅವರ ಜೀವನ ಮತ್ತು ಸಾಧನೆಯನ್ನು ನಿರ್ದೇಶಕ ಸಂತೋಷ್‌ಕೊಡೆಂಕೇರಿ ತೆರೆಮೇಲೆ ಸಿನಿಮಾ ರೂಪದಲ್ಲಿ ತರುತ್ತಿದ್ದಾರೆ. ಅಂದಹಾಗೆ, ಈ ಸಿನಿಮಾಕ್ಕೆ ” ದಿ ಬ್ರಿಡ್ಜ್ ಮ್ಯಾನ್’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಚಿತ್ರತಂಡ ಈ ಚಿತ್ರದ ಟೈಟಲ್ ಮತ್ತು ಪೋಸ್ಟರ್ ಬಿಡುಗಡೆಗೊಳಿಸಿದೆ.
ಇದೇ ವೇಳೆ ” ದಿ ಬ್ರಿಡ್ಜ್ ಮ್ಯಾನ್’ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಸಂತೋಷ್‌ಕೊಡೆಂಕೇರಿ, “ಕರ್ನಾಟಕದಲ್ಲಿ ಹುಟ್ಟಿ ಬೆಳೆದು, ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಅಪರೂಪದ ಸಾಧಕ ಗಿರೀಶ್ ಭಾರದ್ವಾಜ್ ಅವರ ಜೀವನ – ಸಾಧನೆ ಮೇಲೆ ಈ ಸಿನಿಮಾವಾಗುತ್ತಿದೆ. ಸುಮಾರು ನಾಲ್ಕೈದು ವರ್ಷಗಳಿಂದ ಇವರ ಜೀವನ ಸಿನಿಮಾ ಮಾಡಬೇಕೆಂಬ ಕನಸು ಈಗ ನನಸಾಗುತ್ತಿದೆ. ಇದೊಂದು ಬಯೋಪಿಕ್ ಆಗಿರುವುದರಿಂದ, ಚಿತ್ರ ಆದಷ್ಟು ನೈಜವಾಗಿ ಮೂಡಿಬರಲಿದೆ.ಕನ್ನಡ ಮತ್ತು ಹಿಂದಿ ಸೇರಿದಂತೆ ಏಕಕಾಲಕ್ಕೆ ಎರಡು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ’ ಎಂದಿದ್ದಾರೆ.ಈಗಾಗಲೇ” ದಿ ಬ್ರಿಡ್ಜ್ ಮ್ಯಾನ್’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಜನವರಿ ವೇಳೆಗೆ ಚಿತ್ರದ ಚಿತ್ರೀಕರಣಆರಂಭಿಸುವ ಯೋಜನೆಯಲ್ಲಿದೆ. ಕರ್ನಾಟಕ,ಕೇರಳ, ಒಡಿಸ್ಸಾ ಮೊದಲಾದಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಸದ್ಯ ಚಿತ್ರದಕಲಾವಿದರ ಆಯ್ಕೆಯಲ್ಲಿರುವ ಚಿತ್ರತಂಡ, ಇದೇ ತಿಂಗಳಕೊನೆಗೆ ಚಿತ್ರದ ತಾರಾಬಳಗವನ್ನು ಅಂತಿಮಗೊಳಿಸಲಿದೆ. ” ದಿ ಬ್ರಿಡ್ಜ್ ಮ್ಯಾನ್’ ಚಿತ್ರದ ಹಾಡುಗಳಿಗೆ ವಿನಯ್ ಶರ್ಮ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಧನ್ವಿಕ್ ಗೌಡ ಛಾಯಾಗ್ರಹಣ, ರಘು ಎಸ್. ಸಂಕಲನವಿದೆ.
Be the first to comment