ಮುತ್ತಪ್ಪ ರೈ ಜೀವನಾಧಾರಿತ ‘ಎಂಆರ್’​​ ಸಿನಿಮಾ ಮುಹೂರ್ತ

ರಾಜರಾಜೇಶ್ಚರಿ ನಗರದ ಶೃಂಗಗಿರಿ‌‌ ಮುರುಗ ಸ್ವಾಮಿ‌ ದೇವಸ್ಥಾನದಲ್ಲಿ ರವಿ ಶ್ರೀವತ್ಸ ನಿರ್ದೇಶನದ‌ ಹೊಸ‌ ಚಿತ್ರದ‌‌ ಮುಹೂರ್ತ ನೆರವೇರಿತು. ಶಾಸಕ ಮತ್ತು ನಿರ್ಮಾಪಕ ಮುನಿರತ್ನ ಚಿತ್ರಕ್ಕೆ ಕ್ಲಾಪ್‌‌ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಕೂಡ ಚಿತ್ರತಂಡಕ್ಕೆ‌ ಶುಭ ಹಾರೈಸಿದರು.

ಚಿತ್ರಕ್ಕೆ “ಎಂಆರ್‌” ಎಂದು ಹೆಸರಿಡಲಾಗಿದ್ದು, ಮಾಜಿ ಭೂಗತ ದೊರೆ ಮುತ್ತಪ್ಪ‌ ರೈ ಜೀವನ ಚರಿತ್ರೆಯನ್ನು ಚಿತ್ರದ ಮೂಲಕ ದೊಡ್ಡ ಪರದೆ ಮೇಲೆ ತರಲಿದ್ದಾರೆ. ಚೊಚ್ಚಲ‌‌ ಸಿನಿಮಾದಲ್ಲಿ ಭೂಗತ ದೊರೆ‌ಯ ಪಾತ್ರದಲ್ಲಿ ದೀಕ್ಷಿತ್ ಕಾಣಿಸಲಿದ್ದಾರೆ. ಈ‌ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದ್ದು, ಜಯರಾಜ್ ಪಾತ್ರವನ್ನು ರಾಜೇಶ್, ಆಯಿಲ್ ಕುಮಾರ್ ಪಾತ್ರವನ್ನು ಪ್ರಶಾಂತ್ ಸಂಬರ್ಗಿ ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ಶೋಭಾ ರಾಜಣ್ಣ ನಿರ್ಮಾಣದ ಹೊಣೆ‌ ಹೊತ್ತಿದ್ದು, ಜನವರಿ‌ ತಿಂಗಳಿನಿಂದ ಶೂಟಿಂಗ್‌ ಆರಂಭವಾಗಲಿದೆ.

ವಿಶೇಷ ಅಂದ್ರೆ ಎಂಆರ್ ಚಿತ್ರವನ್ನು ಮೂರು ಭಾಗಗಳಲ್ಲಿ ನಿರ್ದೇಶನ ಮಾಡಲಾಗುತ್ತಿದೆ. ಮುತ್ತಪ್ಪ ರೈ ಜೀವನ ಚರಿತ್ರೆ ಮೂರು ಅನುಕ್ರಮಗಳಲ್ಲಿ ತೆರೆ‌‌ ಮೇಲೆ ಬರಲಿದೆ. ಹರೆಯದ ವಯಸ್ಸಿನಲ್ಲಿ ಮುತ್ತಪ್ಪ ರೈ ಹೇಗಿದ್ರು, ಮತ್ತೆ ಅವರು ಭೂಗತ ಲೋಕಕ್ಕೆ ಹೇಗೆ ಎಂಟ್ರಿ ಕೊಟ್ರು ಅನ್ನೋದನ್ನು ಚಿತ್ರಿಸಲಾಗಿದೆ. ಜೊತೆಗೆ ಯಾವ ಕಾರಣಕ್ಕೆ ರೌಡಿಸಂಗೆ ಕಾಲಿಟ್ಟರು ಅಂತ ತಿಳಿಸಲಾಗಿದೆ. ಜೊತೆಗೆ ಇಪ್ಪತರ ವಯಸ್ಸಿನಲ್ಲಿ ಅವರ ಜೀವನ ಹೇಗಿತ್ತು ಅನ್ನೋದರ ಸನ್ನಿವೇಶಗಳನ್ನು ಇಲ್ಲಿ ಮರುಸೃಷ್ಟಿ ಮಾಡಲಾಗಿದೆ.

ಈ ಚಿತ್ರದ‌ ಮೂಲಕ ಯುವ‌ ಪೀಳಿಗೆಗೂ ಒಂದೊಳ್ಳೆ ಸಂದೇಶವಿದೆಯಂತೆ. ಚಿತ್ರದ ಕಥೆ ಪೂರ್ಣಗೊಳಿಸಲು ನಿವೃತ್ತ ಪೋಲಿಸ್‌ ಅಧಿಕಾರಿಯಾದ ಅಶೋಕ್‌ ಕುಮಾರ್ ಅವರು ಕೂಡ‌ ಸಾಥ್‌ ನೀಡಿದ್ದಾರೆ.‌ ಅಶೋಕ್ ಕುಮಾರ್ ಅವರು ಹೇಳಿದ ನೈಜ ಘಟನೆಗಳನ್ನು ಇಲ್ಲಿ ಮರುಸೃಷ್ಟಿ ಮಾಡಲಾಗುತ್ತಿದೆ.

ಚಿತ್ರಕ್ಕೆ ಸಂಗೀತ ನಿರ್ದೇಶನದ ಹೊಣೆಯನ್ನು ಖ್ಯಾತ ಸಂಗೀತ ನಿರ್ದೇಶಕ‌ ಗುರುಕಿರಣ್ ಹೊತ್ತಿದ್ದಾರೆ. ಎಂಬತ್ತರ‌ ದಶಕದ ಕಥೆಯಾಗಿರುವುದರಿಂದ ಎಂಬತ್ತರ ದಶಕದ‌ ಹಾಡುಗಳನ್ನು ರಚಿಸಲಾಗಿದೆ. ಇದು‌ ಕಮರ್ಷಿಯಲ್ ಚಿತ್ರವಾಗಿರುವುದರಿಂದ 80 – 90 ಬೇಸ್ಡ್ ಸಂಗೀತ ರಚಿಸಲಾಗುತ್ತಿದೆ ಅಂತಾರೆ ಸಂಗೀತ ನಿರ್ದೇಶಕ ಗುರು‌ಕಿರಣ್. ಚಿತ್ರವನ್ನು ಬೆಂಗಳೂರು, ಮಂಗಳೂರು, ಉಡುಪಿ ಹಾಗೂ ವಿದೇಶದಲ್ಲಿ‌ ಚಿತ್ರದ ಚಿತ್ರೀಕರಣ‌ ಮಾಡಲು ನಿರ್ಧರಿಸಲಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!