ಮಕ್ಕಳ ಚಿತ್ರದ ಟೀಸರ್ ರಿಲೀಸ್ ಮಾಡಿ ಶುಭಕೋರಿದ ನಾದಬ್ರಹ್ಮ ಹಂಸಲೇಖ.
ಕೊರೋನ ಹಾವಳಿಯಿಂದ ನೂತನ ಚಿತ್ರಗಳು ತೆರೆಗೆ ಬಂದು ಬಹಳ ದಿನಗಳಾಗಿದ್ದವು. ಈಗಷ್ಟೇ ಕೆಲವು ನಿರ್ಮಾಪಕರು ಚಿತ್ರ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಅದರಲ್ಲೂ ಮಕ್ಕಳ ಚಿತ್ರವಂತೂ ಬಿಡುಗಡೆಯಾಗಿ ತುಂಬಾ ಸಮಯವಾಗಿದೆ.
ವಿಭಿನ್ನ ಕಥಾಹಂದರ ಹೊಂದಿರುವ ಪಾರು ಚಿತ್ರವನ್ನು ವೀಕ್ಷಸಿರುವ ಸೆನ್ಸಾರ್ ಮಂಡಳಿ ಯು/ಎ ಪತ್ರವನ್ನು ನೀಡಿದೆ. ಜನವರಿಯಲ್ಲಿ ಈ ಮಕ್ಕಳ ಚಿತ್ರ ತೆರೆಗೆ ಬರಲಿದೆ.
ಇತ್ತೀಚೆಗೆ ಈ ಚಿತ್ರದ ಟೀಸರ್ ನಾದ ಬ್ರಹ್ಮ ಹಂಸಲೇಖ ಅವರು ಬಿಡುಗಡೆ ಮಾಡಿ ಶುಭಕೋರಿದ್ದಾರೆ.
ನಾಲ್ಕು ಜನ ಚಿಂದಿ ಆಯುವ ಮಕ್ಕಳಲ್ಲಿ ಒಬ್ಬಳು ಚೆನ್ನಾಗಿ ಓದಿ ಡಿ.ಸಿ ಆಗುತ್ತಾಳೆ. ಇದೇ ಚಿತ್ರದ ಕಥಾಸಾರಾಂಶ. ಮೂಲತಃ ದಾವಣಗೆರೆಯವರಾದ ಹನ್ಮಂತ್ ಪೂಜಾರ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಹಾಗೂ ಛಾಯಾಗ್ರಹಣ ಕೂಡ ಹನ್ಮಂತ್ ಪೂಜಾರ್ ಅವರದೆ. ನೀನಾಸಂನ ಕಲಾವಿದರಾಗೂ ಅನುಭವ ಹೊಂದಿರುವ ಇವರು ಬುದ್ದಿವಂತ, ಅಯೋಗ್ಯ, ದೋಬಿಘಾಟ್ ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಇದು ಅವರಿಗೆ ಚೊಚ್ಚಲ ನಿರ್ದೇಶನದ ಚಿತ್ರ. ದುರ್ಗ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಹನ್ಮಂತ್ ಪೂಜಾರ್ ಅವರೆ ನಿರ್ಮಿಸಿರುವ ಈ ಚಿತ್ರದ ಸಹ ನಿರ್ಮಾಪಕರು ಸಿ.ಎನ್.ಗೌರಮ್ಮ .
ಮೂರು ಹಾಡುಗಳಿದ್ದು, ಎ.ಟಿ.ರವೀಶ್ ಸಂಗೀತ ನೀಡಿದ್ದಾರೆ. ಶಿವಕುಮಾರ್ ಸ್ವಾಮಿ ಸಂಕಲನ ‘ಪಾರು ‘ಗಿದೆ.
ಬೇಬಿ ಹಿತೈಶಿ ಪೂಜಾರ್, ಮಾಸ್ಟರ್ ಮೈಲಾರಿ ಪೂಜಾರ್, ಮಾಸ್ಟರ್ ಅಚ್ಯುತ್, ಮಾಸ್ಟರ್ ಪ್ರಸಾದ್, ಶಿವಕಾರ್ತಿಕ್, ರಾಂಜಿ, ನಿಜಗುಣ ಶಿವಯೋಗಿ, ಹಾಲೇಶ್, ಪ್ರೇಂಕುಮಾರ್ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ. ದಾವಣಗೆರೆ, ಬೆಂಗಳೂರು, ಹಾವೇರಿ ಮುಂತಾದ ಕಡೆ 31 ದಿನಗಳ ಚಿತ್ರೀಕರಣ ನಡೆದಿದೆ.
Be the first to comment