ಭಾರತೀಯ ಚಿತ್ರ ರಂಗದಲ್ಲಿ ಮೊದಲು ಕೋರೋನಾ ವೈರಸ್ ಸಮಯದಲ್ಲಿ ಬಿಡುಗುಡೆ ಆಗಿ 50 ದಿವಸ ಸಂಪೂರ್ಣ ಮಾಡಿದ ಸಿನಿಮಾ ಅಂದರೆ ಅದು ಕನ್ನಡದ ಸಿನಿಮಾ. ಈ ಹೆಗ್ಗಳಿಕೆಗೆ ನಿರ್ಮಾಪಕ ಹಾಗೂ ನಿರ್ದೇಶಕ ನಿತ್ಯಾನಂದ ನಂದಲಿಕೆ ಪ್ರಭು ಅವರ ‘5 ಅಡಿ 7 ಅಂಗುಲ’ ಸಿನಿಮಾಕ್ಕೆ ಸಲ್ಲುತ್ತದೆ. ಮಾರ್ಚ್ 13 ರಂದು ಕೇವಲ ಮೂರು ಪ್ರದರ್ಶನ ಆಗಿ ಕೋರೋನಾ ಇಂದ ಸ್ಥಗಿತ ಆದ ಈ ಚಿತ್ರ ಅಕ್ಟೋಬರ್ 16 ರಂದು ಬಿಡುಗಡೆ ಆಗಿ 50 ದಿವಸದ ಪ್ರದರ್ಶನವನ್ನು ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರ ಹಾಗಿ ಪಿ ವಿ ಆರ್ ಒರಿಯಾನ್ ಮಾಲ್ ರಾಜಾಜಿನಗರ ಅಲ್ಲಿ ಪೂರ್ತಿಗೊಳಿಸಿದೆ. ಕೇವಲ 10 ಪ್ರೇಕ್ಷಕರಿಂದ ಈ ಎರಡು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಬರುತ್ತಾ ಇದ್ದದ್ದು 210 ಪ್ರೇಕ್ಷಕರ ತನಕ ಬಂದು ಚಿತ್ರವನ್ನ ವೀಕ್ಷಣೆ
ಮಾಡಿ ಆನಂದ ವ್ಯಕ್ತ ಮಾಡಿದ್ದಾರೆ.
ಮೊನ್ನೆ ಗುರುವಾರ ಸಂಜೆ 50 ನೇ ದಿವಸದಂದು ನಿರ್ದೇಶಕ ಕಂ ನಿರ್ಮಾಪಕ ನಿತ್ಯಾನಂದ ನಂದಲಿಕೆ ಪ್ರಭು ಸರಳ, ಸುಂದರ ಸಮಾರಂಭವನ್ನು ಪಿ ವಿ ಆರ್ ಒರಿಯಾನ್ ಮಾಲ್ 5
ಸ್ಕ್ರೀನ್ ಅಲ್ಲಿ ಏರ್ಪಾಟು ಮಾಡಿದ್ದರು. ಹೆಸರಾಂತ ನಟಿ ಸುಧಾರಾಣಿ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮುಖ್ಯ ಅತಿಥಿಗಳಾಗಿ ಸಮಾರಂಭಕ್ಕೆ ಬಂದು ‘5 ಅಡಿ 7 ಅಂಗುಲ’ ಚಿತ್ರ ತಂಡಕ್ಕೆ ಸ್ಮರಣ ಫಲಕಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡುತ್ತಾ ನಟಿ ಸುಧಾರಾಣಿ 50 ನೇ ದಿವಸದ ಕಾರ್ಯಕ್ರಮ ಕೇಳಿಯೇ ಬಹಳ ವರ್ಷಗಳು ಆದವು, ನಾನು ಮನೆಯಿಂದ ಹೊರಟಾಗ ನನ್ನ ಮೊದಲ ಸಿನಿಮಾ ‘ಆನಂದ್’ 100 ದಿವಸದ ಸಮಾರಂಭ ಜ್ಞಾಪಕಕ್ಕೆ ಬಂದಿತು. ಈ ಸಿನಿಮಾ ಸಹ 100 ದಿವಸ, ಸಿಲ್ವರ್ ಜುಬಿಲಿ ಆಚರಿಸುವಂತೆ ಆಗಲಿ ಎಂದು ಹರಸಿದರು. ಪ್ರೇಕ್ಷಕ ಪ್ರಭುಗಳು ಈ ಸಿನಿಮಾಕ್ಕೆ ಪ್ರೋತ್ಸಾಹ ತೋರಿದ್ದಾರೆ. ಈ ಸಿನಿಮಾ ಇಂದ ಇತರ ನಿರ್ಮಾಪಕರುಗಳಿಗೆ ಧೈರ್ಯ ಬಂದಿದೆ. ಕನ್ನಡ ಚಿತ್ರಗಳು ಬೆಳಗಲಿ ಎಂದು ಶುಭ ನುಡಿದರು ಸುಧಾರಾಣಿ. ಅವರ ಕುರಿತಾದ ಒಂದು ಕಿರು ಪರಿಚಯ ಪರದೆ ಮೇಲೆ ನೋಡಿ ಇದುವರೆವಿಗೂ ನನಗೆ ಈ ರೀತಿ ಯಾರು ಅಭಿನಂದನೆ ಸಲ್ಲಿಸಿಲ್ಲ ಎಂದು ‘5 ಅಡಿ 7 ಅಂಗುಲ’ ಚಿತ್ರದ ನಿರ್ಮಕರನ್ನು ಶ್ಲಾಘಿಸಿದರು.
ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದಾಕ್ಕಾಗಿ ಕ್ಷಮೆ ಕೋರಿದ ರಾಷ್ಟ್ರ ಪ್ರಶಸ್ತಿ ವಿಜೇತ ಈ ಚಿತ್ರ 50 ನೇ ದಿವಸಕ್ಕೆ ಬಂದರು ಕನ್ನಡಿಗ ಆಗಿ ತಾವು ಈ ಸಿನಿಮಾ ನೋಡಿಲ್ಲ
ಎಂದು ವ್ಯಥೆ ಪಟ್ಟುಕೊಂಡು ಸಧ್ಯದಲ್ಲೇ ವೀಕ್ಷಿಸುವುದಾಗಿ ಹೇಳಿದರು. ನಾನು ಸಹ 5 ಅಡಿ 7 ಅಂಗುಲ ಎತ್ತರದವ ಎಂದು ಸಂಚಾರಿ ವಿಜಯ್ ಹೇಳಿಕೊಳ್ಳುತ್ತಾ ಹೊಸ ತಂಡ ಜವಾಬ್ದಾರಿ ಇಂದ
ಕೆಲಸ ಮಾಡಿರುವುದರಿಂದಲೇ ಈ ಚಿತ್ರ 50 ದಿವಸಕ್ಕೆ ಕಾಲಿಟ್ಟಿರುವುದು ಎಂದು ಚಿತ್ರ ತಂಡಕ್ಕೆ ಮೆಚ್ಚುಗೆ ಸೂಚಿಸಿದರು.
50 ನೇ ದಿವಸದ ಕಾರ್ಯಕ್ರಮದಲ್ಲಿ ವಿಸ್ತಾರವಾಗಿ ಮಾತಾಡುತ್ತಾ ಹೋದವರು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ನಿತ್ಯಾನಂದ ನಂದಲಿಕೆ ಪ್ರಭು. ಅವರು ಶೀರ್ಷಿಕೆ
ಕನ್ನಡದ್ದೇ ಆಗಿರಬೇಕು ಎಂದು ಹೇಳುತ್ತಾ ಚಿತ್ರೀಕರಣ, ಅದಕ್ಕೂ ಮುಂಚೆ ಎಂಟು ತಿಂಗಳ ಕಾರ್ಯಾಗಾರ, ಆನಂತರ ಬಿಡುಗಡೆ ಪ್ರಕ್ರಿಯೆ, ಸ್ನೇಹಿತರು, ಕುಟುಂಬದವರು, ಉಧ್ಯಮದವರ
ಸಹಕಾರ, ತ್ರಿವೇಣಿ ಚಿತ್ರಮಂದಿರ ಹಾಗೂ ಪಿ ವಿ ಆರ್ ಸಿನಿಮಾಸ್ ಅವರ ಪ್ರೋತ್ಸಾಹ, ವಿತರಕರು ಬೆನ್ನಿಗೆ ನಿಂತದ್ದು, ಪ್ರೇಕ್ಷಕರು ಹರಿಸಿದ್ದು, ಕೋವಿಡ್ ಸಮಯದಲ್ಲಿ ಧೈರ್ಯ
ಮಾಡಿ ಸಿನಿಮಾ ಬಿಡುಗಡೆ ಮಾಡಿ ಚಿತ್ರವನ್ನ ಇಲ್ಲಿಯವರೆವಿಗೂ ಕಾಪಾಡಿಕೊಂಡಿದ್ದು, ಕನ್ನಡ ಸಿನಿಮಾ ನೋಡಲು ಪ್ರೇಕ್ಷಕರು ಇದ್ದಾರೆ ಎಂಬ ನಂಬಿಕೆ ಬಂದದ್ದು ನಿತ್ಯಾನಂದ ನಂದಲಿಕೆ ಪ್ರಭು ಅವರ ಮಾತಿನಲ್ಲಿ ವ್ಯಕ್ತ ಆಗುತ್ತಾ ದಯವಿಟ್ಟು ಈ ಚಿತ್ರ ಮರು ಬಿಡುಗಡೆ ಆಗಿದ್ದು ಎಂದು ಹೇಳಬೇಡಿ ಎಂದು ವಿನಂತಿಸಿಕೊಂಡರು. ಕೇವಲ 3 ಪ್ರದರ್ಶನ ನಂತರ ಮಹಾಮಾರಿ ವಿಶ್ವಕ್ಕೆ ತೊಂದರೆ ಮಾಡಿದೆ. ಹಾಗಾಗಿ ಅಕ್ಟೋಬರ್ 16 ರಂದು ನಾವು ಹೊಸದಾಗಿ ಬಿಡುಗಡೆ ಮಾಡಿದ್ದೇವೆ. ಈ ಬೆಂಬಲ, ನೆರವು, ಹಾರೈಕೆ ನನಗೆ ಮತ್ತಷ್ಟು ಸಿನಿಮಾ ಮಾಡುವುದಕ್ಕೆ ಪ್ರೇರಣೆ ಆಗಿದೆ ಎಂದು ಅವರು ತಿಳಿಸಿದರು.
ನಿತ್ಯಾನಂದ ನಂದಲಿಕೆ ಪ್ರಭು ಒಂದು ದಿವಸ ತ್ರಿವೇಣಿ ಚಿತ್ರಮಂದಿರದಲ್ಲಿ ನಿಂತಿದ್ದಾಗ ಒಬ್ಬ ಬಿಕ್ಷುಕ 89 ರೂಪಾಯಿಯನ್ನು ಒಂದು ರೂಪಾಯಿ ನಾಣ್ಯದಲ್ಲಿ ಇತ್ತು ಟಿಕೆಟ್ ಕೇಳಿ 11 ರೂಪಾಯಿ ಕಡಿಮೆ ಇದ್ದದ್ದಕ್ಕೆ ಮತ್ತೆ ಅಣ್ಣಮ್ಮ ದೇವಸ್ಥಾನದ ಮುಂದೆ ಬಿಕ್ಷೆ ಬೇಡಿ 11 ರೂಪಾಯಿ ಗಳಿಸಿ ಆಮೇಲೆ ಸಿನಿಮಾ ನೋಡಿದ್ದು ವಿವರಿಸಿದರು. ಪರ್ವಗಿಲ್ಲ ನಾನು 11 ರೂಪಾಯಿ ಕೊಡುತ್ತೇನೆ ಹೋಗಪ್ಪ ಸಿನಿಮಾ ನೋಡು ಅಂದರೆ ಸ್ವಾಭಿಮಾನದ ಆ ಬಿಕ್ಷುಕ 11 ರೂಪಾಯಿ ಬೇಡಿ ತಂದು 100 ರೂಪಾಯಿ ಟಿಕೆಟ್ ಖರೀದಿಸಿದ್ದು ನಿರ್ದೇಶಕರ ಹೃದಯಕ್ಕೆ ಮನ
ಮಿಡಿಯುವ ಸನ್ನಿವೇಶವಾಗಿದೆಯಂತೆ.
‘5 ಅಡಿ 7 ಅಂಗುಲ’ ಸಿನಿಮಾದ 50 ನೇ ದಿವಸದ ಸಮಾರಂಭದಂದು- ಡಿಸೆಂಬರ್ 3, ಹಿರಿಯ ಪ್ರಚಾರಕರ್ತ ವಿಜಯಕುಮಾರ್ ಅವರ ಜನುಮದಿನ ಆದ್ದರಿಂದ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಪಿ ವಿ ಆರ್ ಸಂಸ್ಥೆ ಕನ್ನಡ ಸಿನಿಮಾ ಒಂದು ಈ ಸಮಯದಲ್ಲಿ 50 ದಿವಸ ಪ್ರದರ್ಶನ ಅವರ ಪರದೆಯಲ್ಲಿ ಕಂಡಿರುವುದರಿಂದ ವಿಶೇಷವಾದ ಕೇಕ್ ಅನ್ನು ತಂಡದಿಂದ ಕಟ್ ಮಾಡಿಸಿ ಸಂಭ್ರಮದಲ್ಲಿ ಭಾಗಿ ಆದರು.#bcinemas
Be the first to comment