ಲವ್ ಇನ್ ಲಾಕ್ ಡೌನ್ ಚಿತ್ರಕ್ಕೆ ಮುಹೂರ್ತ

ಲಾಕ್ ಡೌನ್‍ನಲ್ಲಿ ನಡೆದ ದುರಂತ ಪ್ರೇಮಕಥೆ ಕರೋನಾ ಲಾಕ್‍ಡೌನ್ ಸಮಯದಲ್ಲಿ ಏನೆಲ್ಲ ಅಪರೂಪದ ಘಟನೆಗಳು ನಡೆದವೆಂದು ಎಲ್ಲರಿಗೂ ಗೊತ್ತಿದೆ.

ಈಗ ಆ ಸಮಯದಲ್ಲಿ ನಡೆದಂಥ ಒಂದು
ಲಾಕ್ ಡೌನ್ ಸಮಯದಲ್ಲಿ ನಡೆದ ಪ್ರೀತಿ, ಪ್ರೇಮ ಪ್ರಣಯದ ಕಥೆಯನ್ನು ತೆರೆಯ ಮೇಲೆ ತರಲು ಹೊರಟಿದ್ದಾರೆ ನಿರ್ದೇಶಕ ಮಂಜುನಾಥ್ ಬಿ.ರಾಮ್. ಶ್ರೀಕನ್ನಡಾಂಬೆ ಮೂವೀಸ್ ಬ್ಯಾನರ್ ಅಡಿಯಲ್ಲಿ ಎಂ.ನಾರಾಯಣಸ್ವಾಮಿ ಅವರು ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಹೆಸರು ಲವ್ ಇನ್ ಲಾಕ್‍ಡೌನ್. ನಿರ್ದೇಶಕ ಮಂಜುನಾಥ್ ಬಿ.ರಾಮ್ ಅವರು ತಾವು ಕಣ್ಣಾರೆ ಕಂಡ ಪ್ರೇಮಕಥೆಯೊಂದನ್ನು ಹಾಗೂ ಅದರ ದುರಂತ ಅಂತ್ಯವನ್ನು ಸಿನಿಮಾ ರೂಪಕ್ಕೆ ತಂದಿದ್ದಾರೆ.

ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಕೂಡ ಅವರೇ ಬರೆದಿದ್ದಾರೆ. ಲವ್ ಇನ್ ಲಾಕ್‍ಡೌನ್ ಚಿತ್ರಕ್ಕೆ ಚಿಕ್ಕಬಳ್ಳಾಪುರದ ರಂಗಸ್ಥಳದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಮುಹೂರ್ತ ನಡೆದಿತ್ತು. ಜೊತೆಗೆ ನಾ ಕನ್ನಡಿಗನೆಂದುಕೊಂಡು ಬಾಳುಮಗಾ ಎನ್ನುವ ಕನ್ನಡ ಹಾಗೂ ಕನ್ನಡ ನಾಡಿನ ಮಹತ್ವ ಸಾರುವ ಗೀತೆಯನ್ನು ಸುಮಾರು 40 ಮಂದಿ ನೃತ್ಯಕಲಾವಿದರನ್ನು ಬಳಸಿಕೊಂಡು ಚಿತ್ರೀಕರಿಸಲಾಯಿತು.
ಲವ್ ಇನ್ ಲಾಕ್ ಡೌನ್ ಚಿತ್ರದಲ್ಲಿ ನಾಯಕನಾಗಿ ಮಂಜುನಾಥ್ ಮತ್ತು ನಾಯಕಿಯಾಗಿ ಯಶಸ್ವಿ ನಟಿಸುತ್ತಿದ್ದಾರೆ.ಯಶಸ್ವಿ ಈ ಹಿಂದೆ ಲೆಕ್ಕಾಚಾರ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ಇದು ಇವರ ಎರಡನೇ ಚಿತ್ರವಾಗಿದೆ.

ಈ ಚಿತ್ರದಲ್ಲಿ ಕಿಲ್ಲರ್ ವೆಂಕಟೇಶ್, ಬ್ಯಾಂಕ್ ಜನಾರ್ದನ್, ಗಣೇಶ್‍ರಾವ್, ಭಲರಾಮ್ ಪಾಂಚಾಲ ಪಲ್ಲವಿ ರಾಜೇಂದ್ರ ಮೊದಲಾದವರು ನಟಿಸುತ್ತಿದ್ದು ರಮೇಶ್ ಕೊಯಿರಾ ಅವರ ಛಾಯಾಗ್ರಹಣ, ಡ್ಯಾನಿಯಲ್ ಅವರ ಸಂಗೀತ ನಿರ್ದೇಶನ, ಪ್ರಸನ್ನ ಅವರ ನೃತ್ಯ, ಶಿವು ಅವರ ಸಾಹಸ ಹಾಗೂ ರಾಜೀವ್ ಕೃಷ್ಣ ಅವರು ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ ಚಿಕ್ಕಬಳ್ಳಾಪುರ, ಕೊಲಾರ, ಗಜೇಂದ್ರಗಡ ಸುತ್ತಮುತ್ತ ಒಟ್ಟು ಮೂರು ಹಂತದಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!