‘ಬಿಂದಾಸ್ ಗೂಗ್ಲಿ’ ಹಾಡುಗಳ ಬಿಡುಗಡೆ
ಡ್ಯಾನ್ಸ್ ಆಧಾರಿತ ಕಾಲೇಜು ಅಂಗಳದಲ್ಲಿ ನಡೆಯುವ ಕತೆ ಇರುವ ‘ಬಿಂದಾಸ್ ಗೂಗ್ಲಿ’ ಸಿನಿಮಾದ ಚಿತ್ರೀಕರಣ ಬೆಳಗಾಂ, ದಾಂಡೇಲಿ ತಟಗಳಲ್ಲಿ ನಡೆದಿದೆ. ಪ್ರಚಾರದ ಮೊದಲ ಹಂತವಾಗಿ ಹನ್ನೊಂದು ಗೀತೆಗಳ ಪೈಕಿ, ಐದು ಹಾಡುಗಳ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ನಿರ್ಮಾಪಕ ವಿಜಯ್ಅನ್ವೇಕರ್ ಮಾತನಾಡಿ ಚಿತ್ರದಲ್ಲಿ ಡಬ್ಬಲ್ ಮೀನಿಂಗ್ ಸಂಭಾಷಣೆಗಳು ಇಲ್ಲ. ಪ್ರತಿಯೊಂದು ಹಾಡಿನಲ್ಲಿ ಸಂದೇಶವನ್ನು ಹೇಳಲಾಗಿದೆ. ಬಾಕಿ ಹಾಡುಗಳನ್ನು ಬೆಳಗಾಂದಲ್ಲಿ ಅನಾವರಣಗೊಳಿಸಲಾಗುವುದು. ಮುಂಗಾರು ಮಳೆ, ಗಿರಿಕನ್ಯೆ ರೀತಿಯಂತೆ ಹಾಡುಗಳು ಸುಂದರವಾಗಿ ಮೂಡಿಬಂದಿದೆ. ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ. ಮುಂದೆ ಅವಕಾಶಗಳು ಒದಗಿಬಂದಲ್ಲಿ ನಟಿಸಲು ಚಿಂತೆಯಿಲ್ಲ. ಕನ್ನಡ ಜನತೆಯು ಪ್ರೋತ್ಸಾಹ ನೀಡಿದಲ್ಲಿ ಮುಂದೆಯೂ ನಿರ್ಮಾಣ ಮಾಡುವುದಾಗಿ ಹೇಳಿದರು.
ಜೀವನದಲ್ಲಿ ಶಿಕ್ಷಣ ಎಷ್ಟು ಮುಖ್ಯವಾಗಿರುತ್ತೋ, ಅಷ್ಟೇ ಪ್ರಾಮುಖ್ಯತೆಯನ್ನು ಕಲೆಯ ಮೇಲೂ ನೀಡಬೇಕು. ಅದನ್ನು ಕಲಿತಲ್ಲಿ ನಮ್ಮನ್ನು ಎಲ್ಲಿಗೋ ಕರೆದುಕೊಂಡು ಹೋಗುತ್ತದೆ. ವಿದ್ಯಾರ್ಥಿಗಳು ಡ್ಯಾನ್ಸ್ ಮಾಡುವದನ್ನು ನೋಡಿದ ಪ್ರಾಂಶುಪಾಲರು ಕೋಚ್ ಮೂಲಕ ಅವರಿಗೆ ಸೂಕ್ತ ತರಭೇತಿ ಕೊಡಿಸಿ, ಚಾಂಪಿಯನ್ ಆಗುವಂತೆ ಮಾಡುವುದು ಒಂದು ಏಳೆಯ ಸಾರಾಂಶವಾಗಿದೆ. ಇದರ ಜೊತೆಗೆ ಗೆಳತನ, ಪ್ರೀತಿಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ ಎಂಬುದರ ವ್ಯಾಖ್ಯಾನವನ್ನು ನಿರ್ದೇಶಕ ಸಂತೋಷ್ಕುಮಾರ್ ಬಿಚ್ಚಿಟ್ಟರು.
ನಿರ್ಮಾಪಕರ ಎರಡನೆ ಪುತ್ರ ನಾಯಕ ಆಕಾಶ್ವಿಜಯ್ಅನ್ವೆಕರ್ ಓದುತ್ತಾ ಡ್ಯಾನ್ಸ್ ಸ್ಫರ್ಧೆಯಲ್ಲಿ ಭಾಗವಹಿಸಿ ಗೆಲವುವನ್ನು ಕಾಣುವ ಪಾತ್ರವೆಂದು ಎಂದು ಮುಗ್ದವಾಗಿ ಮಾತನಾಡಿದರು. ನಾಯಕಿ ಶಿಲ್ಷಾ ಹುಟ್ಟುಹಬ್ಬದಂದು ಸಿಡಿ ಬಿಡುಗಡೆ ಮಾಡಿದ್ದು ಖುಷಿ ಅಂತಾರೆ. ಕೋಚ್ ಪಾತ್ರಕ್ಕೆ ಬಣ್ಣ ಹಚ್ಚಿರುವ ಧರ್ಮಕೀರ್ತಿರಾಜ್, ಜೋಡಿಯಾಗಿರುವ ನಿಮಿತಾರತ್ನಾಕರ್ ಮತ್ತು ಮಮತಾರಾವುತ್ ಉಪಸ್ತಿತರಿದ್ದರು.
ಡಾ.ರಾಜ್ಕುಮಾರ್ ಪುತ್ರಿ ಲಕ್ಷೀ,ಗೋವಿಂದರಾಜ್ ಮತ್ತು ವಿಜಯರಾಘವೇಂದ್ರ, ದೊಡ್ಡಣ್ಣ, ವಿ.ಮನೋಃರ್ ಆಡಿಯೋ ಸಿಡಿ ಬಇಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಸಂಗೀತ ವಿನುಮನಸು, ಛಾಯಗ್ರಾಹಕ ಮಾಥ್ಯೂರಾಜ ಉಪಸ್ತಿತರಿದ್ದರು. ಬೆಳಗಾಂ ಸಂಸದ ಸುರೇಶ್ಅಂಗಡಿ ಗೆಳತನದ ಸಲುವಾಗಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರಂತೆ. ಅಪ್ಪನ ಸಹಾಯಕ್ಕೆ ಹಿರಿ ಪುತ್ರ ಭೂಷಣ್ವಿಜಯ್ಅನ್ವೆಕರ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
Be the first to comment