ಪೈರೆಸಿ ತಡೆ ತಂತ್ರಜ್ಞಾನಕ್ಕೆ ಪುನೀತ್‌ರಾಜ್‌ಕುಮಾರ್ ಚಾಲನೆ

ಹೊಸ ತಂತ್ರಜ್ಘಾನದಲ್ಲಿ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಉಳಿಯೋದು ಒಂದು ವಾರ ಮಾತ್ರವೆಂದು ಪುನೀತ್‌ರಾಜ್‌ಕುಮಾರ್ ಅಭಿಪ್ರಾಯ ಪಟ್ಟರು. ಕಾಂಟ್ರಫೈನ್ ಸಂಸ್ಥೆಯ ದುರ್ಗಾಪ್ರಸಾದ್ ಮತ್ತು ರಾಹುಲ್‌ರೆಡ್ಡಿ ತಂಡದವರು ಸೇರಿಕೊಂಡು ಪೈರೆಸಿ ತಡೆಗಟ್ಟುವ ನೂತನ ತಂತ್ರಜ್ಘಾನ ’ಪಂಡೆ’ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಪೈರೆಸಿ ಎನ್ನುವುದು ವಿಡಿಯೋ ಬಂದಾಗಿನಿಂದಲೂ ಇದೆ. ಈಗ ಎಲ್ಲರು ಸಿನಿಮಾ ಮೇಕರ‍್ಸ್ ಆಗಿದ್ದಾರೆ. ತಮ್ಮ ಜೇಬಿನಲ್ಲಿ ರೆಕಾರ್ಡ್ ಮಾಡಿಕೊಂಡು ಅದನ್ನು ಹೊರಗೆ ಬಿಟ್ಟಾಗ ಅದು ಪೈರೆಸಿ ಆಗುತ್ತದೆ. ಟಾಕೀಸ್ ನಂತರ ಚಿತ್ರಗಳು ಓಟಿಟಿ, ಚಾನಲ್‌ಗಳಿಗೆ ಹೋಗುತ್ತದೆ.

ಯುವಕರು ಕಂಡುಹಿಡಿದಿರುವ ಸಾಫ್ಟ್‌ವೇರ್ ಎಲ್ಲರಿಗೂ ಉಪಯೋಗವಾಗಲಿ. ಚಿತ್ರೀಕರಣ ಶುರುವಾಗಿರುವುದು ಸಂತಸದ ವಿಷಯ. ಚಿತ್ರಮಂದಿರಗಳಲ್ಲಿ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆದಷ್ಟು ಬೇಗನೆ ಎಲ್ಲಾ ಚಿತ್ರಗಳು ಹೊರಗೆ ಬರುವಂತಾಗಲಿ. ಭಾರತೀಯ ಎಲ್ಲಾ ಸಿನಿಮಾಗಳು ಶುರುವಾಗಲಿ ಎಂದು ಪವರ್ ಸ್ಟಾರ್ ಹೇಳಿದರು.

ದೇಶದ ಬೆನ್ನಲುಬು ರೈತ ಅಂತಾರೆ. ಆತನ ಉಳಿವಿಗಾಗಿ ನಾವೆಲ್ಲಾ ಪ್ರಯತ್ನ ಮಾಡುತ್ತೇವೆ. ಅದರಂತೆ ಚಿತ್ರರಂಗದ ಅನ್ನದಾತ ನಿರ್ಮಾಪಕ. ಅವರ ಉಳುವಿಗಾಗಿ ಈ ತರಹದ ತಂತ್ರಜ್ಘಾನವು ಅವಶ್ಯಕವಾಗಿದೆ. ನಿಜಕ್ಕೂ ಚಿತ್ರರಂಗದ ಕಲಾವಿದೆ, ಕನ್ನಡತಿಯಾಗಿ ತುಂಬಾ ಖುಷಿಯಾಗುತ್ತದೆ.

ನೀವುಗಳು ಕನಸುಗಳನ್ನು ಕಟ್ಟಿಕೊಂಡು ಕಷ್ಟಪಟ್ಟು ಪೈರೆಸಿ ನಿರ್ಮೂಲನ ಮಾಡಲು ಪಣ ತೊಟ್ಟಿದ್ದೀರಾ. ಭಾರತದಲ್ಲಿ ಎಲ್ಲೂ ಸಾದ್ಯವಾಗದ ಸಾಧನೆಯನ್ನು ಮಾಡಿದ್ದೀರಾ. ಅದರಲ್ಲೂ ನಮ್ಮ ಕನ್ನಡಿಗರು ಸಿದ್ದಪಡಿಸಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಚಿತ್ರರಂಗ ಗೆಲ್ಗೆ, ಚಿತ್ರಗಳು ಗೆಲ್ಗೆ, ಕನ್ನಡ ಚಿತ್ರರಂಗ ಬಾಳ್ಗೆ ಎಂದು ನಟಿ ಮತ್ತು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷೆ ಶೃತಿ ಮಾತಿಗೆ ವಿರಾಮ ಹಾಕಿದರು.

’ಪಂಡೆ’ ಇದೊಂದು ಪೈರೆಸಿ ತಡೆಯುವ ತಂತ್ರಜ್ಘಾನವಾಗಿದೆ. ಇದನ್ನು ಚಿತ್ರಮಂದಿರದಲ್ಲಿ ಅಳವಡಿಸಿದಲ್ಲಿ, ಪ್ರೇಕ್ಷಕ ಮೊಬೈಲ್‌ನಿಂದ ಸೆರೆಹಿಡಿಯುವ ದೃಶ್ಯಗಳು ರೆಕಾರ್ಡ್ ಆಗುತ್ತದೆ. ಆದರೆ ಧ್ವನಿಯು ಆಗುವುದಿಲ್ಲ. ಆತ ಯಾವ ಸೀಟ್‌ದಲ್ಲಿ ಕುಳಿತುಕೊಂಡಿದ್ದಾನೆ ಎಂಬುದನ್ನು ತಿಳಿಸುತ್ತದೆ.

ಪ್ರದರ್ಶನ ನಡೆಯುವಾಗ ಕಾನೂನುಬಾಹಿರ ಚಟುವಟಿಕೆ ನಡೆದರೆ ತಕ್ಷಣವೇ ಮಾಲೀಕ ಮತ್ತು ಆಯಾ ಪೋಲೀಸ್ ಠಾಣೆಗೆ ಸಂಸ್ಥೆಯು ಮಾಹಿತಿ ನೀಡುತ್ತದೆ. ವಿಡಿಯೋ ತೆಗೆಯಲು ಆಗದಿರುವ ಸಾಫ್ಟ್‌ವೇರ್ ಮುಂದಿನ ತಿಂಗಳುಗಳಲ್ಲಿ ಹೊರಗೆ ಬರುತ್ತದೆಂದು ಸಂಸ್ಥೆಯ ಪ್ರತಿನಿಧಿಗಳು ಒಂದಷ್ಟು ವಿಷಯಗಳನ್ನು ಹಂಚಿಕೊಂಡರು.

ರಾಜೇಂದ್ರಸಿಂಗ್‌ಬಾಬು, ದಿನಕರತೂಗದೀಪ ಮತ್ತು ಶೃತಿ ಮೊಬೈಲ್‌ದಲ್ಲಿ ರೆಕಾರ್ಡ್ ಮಾಡಿ ನೋಡಿದಾಗ ಕೇವಲ ವಿಡಿಯೋ ಕಂಡುಬಂದು, ಆಡಿಯೋದಲ್ಲಿ ಕರ್ಕಶ ಧ್ವನಿ ಕೇಳಿಸಿತು. ಇದರಿಂದ ’ಪೆಂಡಿ’ ತಂತ್ರಜ್ಘಾನ ಪ್ರಯೋಗವು ಯಶಸ್ವಿ ಅಂತ ಖಾತರಿ ಆಯಿತು.

ಸಮಾರಂಭದಲ್ಲಿ ನಿರ್ಮಾಪಕ ಸಂಘದ ಅಧ್ಯಕ್ಷ ಡಿ.ಕೆ.ರಾಮಕೃಷ್ಣ, ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರು ಕೆ.ಸಿ.ಎನ್.ಚಂದ್ರಶೇಖರ್, ನಿರ್ಮಾಪಕರುಗಳಾದ ಬಾ.ಮ.ಹರೀಶ್, ಆರ್.ಎಸ್.ಗೌಡ, ಬಿ.ಆರ್. ಕೇಶವ , ಎನ್.ಎಂ.ಸುರೇಶ್, ನವರಸನ್ ಮುಂತಾದವರ ಉಪಸ್ತಿತಿ ಇತ್ತು

Be the first to comment

Leave a Reply

Your email address will not be published. Required fields are marked *

Translate »
error: Content is protected !!