ನಾಗರಹಾವು ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ರಾಮಾಚಾರಿಯಾಗಿ ಖ್ಯಾತಿಗೊಂಡಿದ್ದರು. ನಂತರ ರವಿಚಂದ್ರನ್, ಯಶ್ ಇದೇ ಹೆಸರಿನೊಂದಿಗೆ ನಟಿಸಿ ಹೆಸರು ಮಾಡಿದ್ದರು. ಈಗ ಇದರ ಸಾಲಿಗೆ ‘ರಾಮಾಚಾರಿ 2.0’ ಚಿತ್ರವು ಸೇರ್ಪಡೆಯಾಗಿದೆ. ರಜನಿಕಾಂತ್ ನಟಿಸಿರುವ 2.0, ಯಶಸ್ಸು ಗಳಿಸಿದ್ದರಿಂದ ಇದನ್ನು ಹೆಸರಿನೊಂದಿಗೆ ಸೇರಿಸಲಾಗಿದೆ.ಚಿತ್ರಕ್ಕೆ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ‘ರಾಮಾಚಾರಿ 2.0’ ಮುಹೂರ್ತವಾಯಿತು
ಕತೆ ಹೊಸ ಜಾನರ್‍ದಲ್ಲಿರುವುದರಿಂದ ಇಂತಹುದೆ ಅಂಥ ಹೇಳಲು ಬರುವುದಿಲ್ಲವಂತೆ. ‘ಮೀಸೆ ಚಿಗುರಿದಾಗ’ ಚಿತ್ರದ ನಂತರ ಇಂಜನಿಯಿರಿಂಗ್ ಮುಗಿಸಿ, ವಿದೇಶದಲ್ಲಿ ಉನ್ನತ ವ್ಯಾಸಾಂಗ ಮಾಡಿ, ಸದ್ಯ ವಿಜ್ಘಾನಿಯಾಗಿರುವ ಕನ್ನಡಿಗ ತೇಜ್ ಕಾಲಿವುಡ್‍ದಲ್ಲಿ ಗುರುತಿಸಿಕೊಂಡಿದ್ದರು. ನಂತರ ‘ರಿವೈಂಡ್’ ಕನ್ನಡ ಸಿನಿಮಾಕ್ಕೆ ನಟನೆ, ನಿರ್ದೇಶನ ಮಾಡಿದ್ದು, ಅದು ಸದ್ಯದಲ್ಲೆ ತೆರೆಗೆ ಬರುವ ಸಾದ್ಯತೆ ಇದೆ.
ರಾಮಾಚಾರಿ 2.0′ ಚಿತ್ರವನ್ನು ತೇಜ್ ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ.
ಎರಡನೆ ಅನುಭವ ಎನ್ನುವಂತೆ ಕತೆ,ನಿರ್ದೆಶನ ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಮೂಲ ಸಿನಿಮಾದ ರಾಮಾಚಾರಿ ಹೋಲಿಕೆ ಇರುತ್ತದೆ. ಧೈರ್ಯವಂತ, ಗುರುಗಳ ಮೇಲೆ ಭಕ್ತಿ, ಸ್ವಾಭಿಮಾನಿ. ಸ್ವಲ್ಪ ಬದಲಾವಣೆÉ ಎಂದರೆ, ಈ ಕಾಲದ ಬುದ್ದಿವಂತ ಹಳ್ಳಿ ಹುಡುಗ ಅಪ್‍ಡೇಟೆಡ್ ಆಗಿರುವುದರಿಂದ 2.0 ಎಂದು ಹೇಳಿಕೊಂಡಿದೆ. ಆಲ್ಬರ್ಟ್‍ಐನ್‍ಸ್ಟೈನ್‍ದಂತೆ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತಾನೆಂದು ಇತ್ಯಾಹ್ಮಕವಾಗಿ ತೋರಿಸಲಾಗುವುದು.
ತೇಜ್ ಅವರ ಕೋಪ, ನೋವು ಎರಡು ಕಾಣುವಂತೆ ಪೋಸ್ಟರ್‍ದಲ್ಲಿ ಕಾಣಿಸಿಕೊಂಡಿತ್ತು. ಸಂದೀಪ್‍ಮಲಾನಿ ಒಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಮೇಘನಾ ಕ್ರಿಯೇಶನ್ಸ್ ಮೂಲಕ ಸಿದ್ದಗೊಳ್ಳುತ್ತಿರುವ ಸಿನಿಮಾಕ್ಕೆ ಯುಎಸ್‍ದಲ್ಲಿರುವ ಟೆಕ್ಕಿ ಪ್ರಭಾಕರ್ ಸಹ ನಿರ್ಮಾಪಕರಾಗಿ ಬಂಡವಾಳ ಹೂಡುತ್ತಿದ್ದಾರೆ. ಕ್ಲಾಸ್ ಮೀಟ್ಸ್ ಮಾಸ್ ಅಂತ ಅಡಿಬರಹದಲ್ಲಿರುವ ಸಿನಿಮಾದ ಕೆಲಸಕಾರ್ಯಗಳು ಮುಂದಿನ ದಿನಗಳಲ್ಲಿ ಶುರುವಾಗಲಿದೆ.
ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದ ನಿರ್ದೇಶಕ ಮಹೇಶ್ ಕುಮಾರ್ ,ಕೊರಿಯೋಗ್ರಾಫರ್ ಫೈವ್ ಸ್ಟಾರ್ ಗಣೇಶ್,ಸಂದೀಪ್ ಮಲಾನಿ, ,ಗೀತ ರಚನೆಗಾರ ವಿನಯ್ ಪಾಂಡವಪುರ, ವಿಜಯ್ ಚೆಂಡೂರ್, ನಟ ಅಶ್ವಿನ್ ಹಾಸನ್ಹರಿ ಸಂತು,ನಟ ಪ್ರಭು ಸೂರ್ಯ,ರಾಮಾಚಾರಿ 2.0′ ನಾಯಕಿ ಶಿಲ್ಪಾ ಶೆಟ್ಟಿ ಜೊತೆಯಿದ್ದರು.
Be the first to comment