‘ಮುಖವಾಡ ಇಲ್ಲದವನು’ ಬಿಡುಗಡೆ ದಿನಾಂಕ ಫಿಕ್ಸ್​

ನವೆಂಬರ್ 27 ‘ಮುಖವಾಡ ಇಲ್ಲದವನು’ ರಿಲೀಸ್ ಓಂ ನಮಃ ಶಿವಾಯ ಮೂವೀಸ್ ಲಾಂಛನದಲ್ಲಿ ತಯಾರಾದ ಸಿನಿಮಾ ಗಣಪತಿ ಪಾಟೀಲ್ ಬೆಳಗಾವಿ ನಿರ್ಮಾಣದಲ್ಲಿ ಸಿದ್ಧವಾದ ಚಿತ್ರ ‘ಮುಖವಾಡ ಇಲ್ಲದವನು 84’. ಶೀರ್ಷಿಕೆ ಮೂಲಕವೇ ಕುತೂಹಲ ಮೂಡಿಸಿದೆ. ವಿಭಿನ್ನ ಕಥಾಹಂದರವನ್ನಿಟ್ಟುಕೊಂಡು ಈ ಹೊಸಬರ ತಂಡ ಸ್ಯಾಂಡಲ್ ವುಡ್ ನಲ್ಲಿ ಕಮಾಲ್ ಮಾಡಲು ಹೋರಟಿದೆ. ಚಿತ್ರದಲ್ಲಿ ಶಿವಕುಮಾರ್ ಕಡೂರು ನಿರ್ದೇಶನದ ಜತೆಗೆ ಮುಖ್ಯಭೂಮಿಕೆಯಲ್ಲಿಯೂ ನಟಿಸಿದ್ದಾರೆ.

ಗಣಪತಿ ಪಾಟೀಲ್​ ಬೆಳಗಾವಿ ‘ಮುಖವಾಡ ಇಲ್ಲದವನು 84’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ದೂರದ ನ್ಯೂಜಿಲೆಂಡ್​ನಲ್ಲಿ ವಾಸವಾಗಿದ್ದಾರೆ. ತುಂಬ ವರ್ಷಗಳಿಂದಲೂ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು ಎಂದೆನಿಸಿದಾಗ ‘ಮುಖವಾಡ ಇಲ್ಲದವನು 84’ ಚಿತ್ರದ ಮೂಲಕ ಆಗಮಿಸಿದ್ದಾರೆ. ಇದೀಗ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿರುವ ಇಡೀ ತಂಡ, ಬಿಡುಗಡೆಯ ಸಿದ್ಧತೆ ಮಾಡಿಕೊಂಡಿದೆ.

ಸಿನಿಮಾ ಮಾಡುವ ಬಗ್ಗೆ ನಿರ್ಧಾರ ಅಂತಿಮವಾಗುತ್ತಿದ್ದಂತೆ, ಒಂದೇ ವಾರದಲ್ಲಿ ಶೂಟಿಂಗ್​ ತಯಾರಿ ನಡೆಸಿ 40 ದಿನದಲ್ಲಿ ಚಿತ್ರೀಕರಣವನ್ನೂ ಮುಗಿಸಿದ್ದಾರೆ ಚಿತ್ರ ತಂಡ. ತುಂಬ ವಿಭಿನ್ನ ಶೈಲಿಯ ಸಿನಿಮಾ ಇದು. ಡೈಲಾಗ್​ಗಳಲ್ಲಿ ತುಂಬ ಅರ್ಥವಿದ್ದು ಅಧ್ಯಾತ್ಮಿಕವಾದ ವಿಚಾರಗಳನ್ನು ಈ ಚಿತ್ರ ಒಳಗೊಂಡಿದೆ.ಈ ಮೊದಲು ಡ್ರೆಸ್​ ಕೋಡ್​ ಚಿತ್ರ ಮಾಡಿದ ಅನುಭವ ಹೋಂದಿರುವ ಶಿವಕುಮಾರ್. ‘ನಾಲ್ಕು ವರ್ಷ ಸಾಧುಗಳ ಸಂಗ ಮಾಡಿ ಆಧ್ಯಾತ್ಮ, ವೈರಾಗ್ಯದ ಮೊರೆ ಹೋಗಿ.

ಆ ವೇಳೆಯಲ್ಲಿ ಮುಖವಾಡ ಇಲ್ಲದವನು ಎಂಬ ಪುಸ್ತಕ ವಿಷಯ ಆಧರಿಸಿ. ಸಾಧು ಸಂತರಿಂದ ಕಲಿತದ್ದನ್ನೇ ಇದೀಗ ಸಿನಿಮಾ ಮಾಡಿದ್ದಾರೆ. ಸುವರ್ಣಮುಖಿ, ಬನ್ನೇರುಘಟ್ಟ, ಚಿಕ್ಕಮಗಳೂರು, ಬೆಳಗಾವಿ, ಅಂಬೂಲಿ ಸೇರಿ ಹಲವೆಡೆ ಚಿತ್ರೀಕರಣ ಮಾಡಲಾಗಿದೆ. ಕಾವ್ಯಾ ಗೌಡ, ರಚನಾ, ಸೊನಾಲಿ ರಾಯ್​ ಮತ್ತು ಹರೀಶ್​ ಸಾರಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ದುರ್ಗಾ ಪ್ರಸಾದ್​ ಸಂಗೀತ, ಡಾ. ಮಹಾರಾಜಾ ಹಿನ್ನೆಲೆ ಸಂಗೀತ, ಮಧು ಆರ್ಯ ಕ್ಯಾಮರಾ ಜವಾಬ್ದಾರಿ ನಿಭಾಯಿಸಿದರೆ, ಕಥೆ, ಚಿತ್ರಕತೆ ಸಂಭಾಷಣೆ ಮತ್ತು ನಿರ್ದೇಶನವನ್ನು ಶಿವಕುಮಾರ್ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!