ಉಡುಂಬಾ ಹಾಡುಗಳು ಬಿಡುಗಡೆ.

‘ಉಡುಂಬಾ’ ಎಂದರೆ ಉಡ+ಹುಂಬನಂತೆ ಕಾರ್ಯ ಸಾಧಿಸುತ್ತಾನೆ. ಅದಕ್ಕಾಗಿ ಇದೇ ಹೆಸರನ್ನು ಇಡಲಾಗಿದೆ.ಉಡುಂಬಾ ಎನ್ನುವ ಪ್ರಾಣಿ ಇದೆ. ಇದು ಯಾರನ್ನು ನೋಯಿಸುವುದಿಲ್ಲ. ಕೀಟಲೆ ಮಾಡಿದರೆ ಕಚ್ಚುತ್ತದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಸಿದ್ದಗೊಂಡಿದೆ. ಕತೆಯಲ್ಲಿ ನಾಯಕ ಯಾರ ತಂಟೆಗೂ ಹೋಗೋಲ್ಲ, ತನಗೆ ಅಡ್ಡಿ ಬಂದರೆ ಬಿಡುವುದಿಲ್ಲ ಎನ್ನುವ ಗುಣ ಹೊಂದಿರುತ್ತಾನೆ. ರಚನೆ, ಮೊದಲಬಾರಿ ನಿರ್ದೇಶನ ಮಾಡಿರುವ ಶಿವರಾಜ್ ಚಿತ್ರವನ್ನು ಬಣ್ಣಿಸಿದ್ದು ಈ ರೀತಿ: ನಾಯಕ ಹಠ ಹಿಡಿದು ಉಡ+ಹುಂಬನಂತೆ ಕಾರ್ಯ ಸಾಧಿಸುತ್ತಾನೆ. ಅದಕ್ಕಾಗಿ ಇದೇ ಹೆಸರನ್ನು ಇಡಲಾಗಿದೆ. ಕಡಲ ತೀರದ ಮೀನು ಮಾರುವ ಜನಾಂಗದ ಬದುಕು ಬವಣೆಗಳನ್ನು ತೋರಿಸಲಾಗಿದೆ. ಅಲ್ಲಿ ನಡೆಯುವ ಘಟನೆಗಳು, ಜೊತೆಗೊಂದು ಮಧುರವಾದ ಪ್ರೀತಿ ಹುಟ್ಟಿಕೊಂಡಾಗ ಸನ್ನಿವೇಶಗಳು ತಿರುವು ಪಡೆದುಕೊಳ್ಳುತ್ತದೆ. ಉಡುಪಿ, ಮಲ್ಪೆ, ಮಂಗಳೂರು, ಗೋಕರ್ಣ, ಪಾದರಹಳ್ಳಿ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬುದರ ಮಾಹಿತಿ ಬಿಚ್ಚಿಟ್ಟರು.

ಬೆಸ್ತರ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಒಂದು ಸನ್ನಿವೇಶಕ್ಕೆ ಸಿಕ್ಸ್ ಪಾಕ್ಸ್ ಅವಶ್ಯಕತೆ ಇರುವ ಕಾರಣ 45 ದಿನಗಳಲ್ಲಿ ದೇಹವನ್ನು ದಂಡಿಸಿ ಅದರಂತೆ ಕ್ಯಾಮಾರ ಮುಂದೆ ನಿಲ್ಲಬೇಕಾಯಿತು ಎಂದು ಪಾತ್ರದ ಪರಿಚಯ ಮಾಡಿಕೊಂಡರು ಹೀರೋ ಪವನ್‍ಸೂರ್ಯ. ನರ್ಸಿಂಗ್ ವಿದ್ಯಾರ್ಥಿಯಾಗಿ ಊರಿಗೆ ವಾಪಸ್ಸು ಬಂದಾಗ ಪ್ರೀತಿ ಹಿಂದೆ ಬೀಳುವ ಪಾತ್ರದಲ್ಲಿ ಚಿರಶ್ರೀಅಂಚನ್‍ಗೆ ನಾಯಕಿಯಾಗಿ ಮೂರನೇ ಚಿತ್ರವಂತೆ. ಖಳನಾಯಕನಾಗಿ ಇರ್ಫಾನ್ ಇದ್ದಾರೆ. ಆಂದ್ರದ ಹನುಮಂತರಾವ್-ವೆಂಕಟ್‍ರೆಡ್ಡಿ ನಿರ್ಮಾಪಕರಾದರೆ, ಮಾನಸಮಹೇಶ್ ಸಹ ನಿರ್ಮಾಪಕರು. ಸೋಮವಾರ ಕಲಾವಿದರ ಸಂಘದಲ್ಲಿ ನಡೆದ ಕಿಕ್ಕಿರಿದ ಕಾರ್ಯಕ್ರಮದಲ್ಲಿ ಹಿತೈಷಿಗಳಾದ ಓಂ ನಮ:ಶಿವಾಯ ಮತ್ತು ಜಯರಾಜಣ್ಣ ಧ್ವನಿಸಾಂದ್ರಿಕೆ ಬಿಡುಗಡೆ ಮಾಡಿ ಉಡದಂತೆ ಜನರು ಚಿತ್ರವನ್ನು ನೋಡಬೇಕೆಂದು ಹೇಳಿದರು. ಛಾಯಗ್ರಹಣ ಹಾಲೇಶ್, ಸಂಗೀತ ನಿರ್ದೇಶಕ ವಿನೀತ್‍ರಾಜ್‍ಮೆನನ್, ನೃತ್ಯ ಧನುಕುಮಾರ್ ಉಪಸ್ತಿತರಿದ್ದರು.

This Article Has 2 Comments
  1. Pingback: Devops

  2. Pingback: windshield replacement Paradise NV

Leave a Reply

Your email address will not be published. Required fields are marked *

Translate »
error: Content is protected !!