‘ಧರಣಿ ಮಂಡಲ ಮಧ್ಯದೊಳಗೆ’ವಿಭಿನ್ನ ಕಥಾಹಂದರ

ಧರಣಿ ಮಂಡಲ ಮಧ್ಯದೊಳಗೆ’ ಎಂಬ ಪುಣ್ಯಕೋಟಿಯ ಪದ್ಯ ಯಾರಿಗೆ ತಾನೇ ತಿಳಿದಿಲ್ಲ ಹೇಳಿ ಇದೀಗ ಈ ಹಾಡಿನ ಸಾಲಿನ ಸಿನಿಮಾ ಬಂದಿದೆ. ಬಾಕ್ಸ್ ಆಫಿಸ್ ಸಿನಿ ಕ್ರಿಯೇಷನ್ಸ್ ನ ಅಡಿಯಲ್ಲಿ ಓಂಕಾರ್ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಚಿತ್ರ ‘ಧರಣಿ ಮಂಡಲ ಮಧ್ಯೆದೊಳಗೆ’

ಈ ವಿಶೇಷ ಶೀರ್ಷಿಕೆಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅನಾವರಣಗೊಳಿಸಿದ್ದಾರೆ. ಸಿನಿಮಾ ಪೋಸ್ಟರ್ ನೋಡಿ ಇಷ್ಟಪಟ್ಟ ಪುನೀತ್ ಪ್ರೀತಿಯಿಂದ ಅದನ್ನು ಲಾಂಚ್ ಮಾಡಿದ್ದಾರೆ. ಹೊಸ ಪ್ರಯೋಗಕ್ಕೆ ಕೈ ಹಾಕಿರುವ ಹೊಸ ಹುಡುಗರ ಬೆನ್ನು ತಟ್ಟಿದ್ದಾರೆ. ಪುನೀತ್ ಬೆಂಬಲ ಚಿತ್ರತಂಡದ ಬಲ ಹೆಚ್ಚಾಗಿದೆ. ಪುನೀತ್ ಗೆ ಚಿತ್ರತಂಡ ಫೋಟೋ ಒಂದನ್ನು ಗಿಫ್ಟ್ ಆಗಿ ನೀಡಿದೆ.

‘ಗುಳ್ಟು’ ಖ್ಯಾತಿಯ ನವೀನ್ ಈ ಸಿನಿಮಾದ ನಾಯಕನಾಗಿದ್ದಾರೆ. ಸ್ಯಾಂಡಲ್ ವುಡ್ ಶಾಕುಂತಲೆ ಐಶಾನಿ ಶೆಟ್ಟಿ ನಾಯಕಿಯಾಗಿದ್ದಾರೆ. ಶ್ರೀಧರ್ ಷಣ್ಮುಖ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕ  ಪೂರಿ ಜಗನ್ನಾಥ್ ಜೊತೆಗೆ ಕೆಲಸ  ಮಾಡಿದ ಅನುಭವ ಹೊಂದಿರೋ ಶ್ರೀಧರ್ ಶಿಕಾರಿಪುರ ಅವರು ಈ ಚಿತ್ರಕ್ಕೆ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತಿದ್ದು  ಸದ್ಯ, ಬಿಡುಗಡೆಯಾಗಿರುವ ಪೋಸ್ಟರ್ ಹೊಸತನದಿಂದ ಕೂಡಿದೆ. ಡಿಫರೆಂಟ್ ಆಗಿರುವ ಪೋಸ್ಟರ್ ಸಿನಿಮಾದ ಕಥೆ ಮೇಲೆ ನಿರೀಕ್ಷೆ ಹುಟ್ಟಿಸಿದೆ. ಇಡೀ ಸಿನಿಮಾದ ಕಥೆಯನ್ನು ಪೋಸ್ಟರ್ ನಲ್ಲಿ ಹೇಳಿದ್ದು, ಕ್ರಿಯೇಟವ್ ಆಗಿದೆ.ಚಿತ್ರದ ಒಂದಿಷ್ಟು ಪಾತ್ರಗಳ ನಡುವೆ ಇಂಟರ್ ಕನೆಕ್ಟ್ ಇದ್ದು, ಅಲ್ಲಿ ನಡೆಯೋ ಕತೆಯ ಜೊತೆಗೆ ಮುಖ್ಯವಾಗಿ ಸಿನಿಮಾದಲ್ಲಿ ಬಂಚ್ ಆಫ್ ಎಮೋಶನ್ಸ್ ಹೇಳೋಕೆ ನಿರ್ದೇಶಕರು ಹೊರಟಿದ್ದಾರಂತೆ. ಇದೊಂದು ಹೈಪರ್ ಲಿಂಕ್ ಶೈಲಿಯ ಸಿನಿಮಾ ಆಗಿದೆಯಂತೆ.

‘ಟಗರು’ಸಿನಿಮಾದ ಡಾನ್ ಅಂಕಲ್ :

ಧರಣಿ ಮಂಡಲ ಮಧ್ಯೆದೊಳಗೆ ನಿಂತ ಡಾನ್ ಅಂಕಲ್ ಕೇವಲ ಒಂದೆ ಚಿತ್ರ ದಿಂದ ಪ್ರೇಕ್ಷಕರ ಮನದಲ್ಲಿ ಕಾಯಂ ಸೀಟ್ ಹಿಡಿದಿಟ್ಟಿರುವ ಸಚ್ಚು ರವರು ಟಗರು ಚಿತ್ರದ ನಂತರ ಮತ್ತೊಂದು ದೊಡ್ಡ ಚಿತ್ರದಲ್ಲಿ ಬೆಂಗಳೂರು ಅಂಡರ್ವರ್ಡ್ ನ ದೊಡ್ಡ ಡಾನ್ ಆಗಿ ಮಿಂಚಲಿದ್ದಾರೆ ಇಗಾಗಲೆ ಸೈಲೆಂಟ್ಆಗಿ ಮಾತಿನ ಭಾಗದ ಚಿತ್ರಿಕರಣ ಮುಗಿಸಿರುವ ಬಹು ಬರವಸೆಯ ಹೋಸಬರ ತಂಡ ಬಹುತಾರಾಂಗಣ ಹೊಂದಿರುವ ವಿಷಯ ಹೊರಬಿದ್ದಿದೆ.ಹಾಡಿನ ಭಾಗದ ಚಿತ್ರೀಕರಣ ಉಳಿದಿದ್ದು ಸಧ್ಯದಲ್ಲೇ ಚಿತ್ರಿಕರಣ ಮಾಡು ಪ್ಲ್ಯಾನ್ ನಲ್ಲಿ ಇದ್ದೇವೆ ಎಂದು ನಿರ್ಮಾಪರಾದ ಓಂಕಾರ ಅವರು ‘ಬಿಸಿನಿಮಾಸ್’ಹೇಳಿದ್ದಾರೆ.

ನನಸಾದ ಚಿತ್ರದ ನಿರ್ಮಾಪಕರಾದ ಓಂಕಾರ್ ಭಹು ದಿನಗಳ ಕನಸು

ಓಂಕಾರ್ ಹಿಂದಿನಿಂದಲೂ ಸಿನಿಮಾದ ಮೇಲೆ ಅಭಿಮಾನ.ಪ್ರೀತಿ ಒಂದು ರೀತಿಯ ಸೆಳೆತ.ಹಾಗಾಗಿ ಚಿತ್ರರಂಗಕ್ಕೆ ಬರಬೇಕು  ಎಂಬ ಆಸೆ ಅವರಿಗಿತ್ತು. ಹೀಗಿರುವಾಗಲೇ ಕಿಚ್ಚ್ ಸುದೀಪ್ ನಟನೇಯ ಗೂಳಿ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು.ಕಿಚ್ಚನ ಜತೆ ಆತ್ಮಿಯರಾಗಿದ್ದ ಓಂಕಾರಗೆ  ನಿರ್ದೇಶಕ ಪಿ,.ಎನ್ ಸತ್ಯ ಅವರ ಜತೆಗೆ ಗೆಳೆತನಯೂ ಬೆಳೆಯಿತು.ಅದರಿಂದ ಚಿತ್ರದ ಬಗೆಗಿನ ವಿಚಾರ ತಿಳಿದುಕೊಂಡರು.ಸಿನಿಮಾ ಮಾಡಬೇಕೆಂಬ ಹಂಬಲಕ್ಕೆ ಇದು ಪೂರಕವಾಗಿತ್ತು.ಅದರಂತೆ ಧರಣಿ ಮಂಡಲ ಮಧ್ಯದೋಳಗೆ ಚಿತ್ರ ಸಿದ್ದವಾಯಿತು.

ಈ ಚಿತ್ರದಲ್ಲಿ ಕೀರ್ತನ್ ಪೂಜಾರಿ ಛಾಯಗ್ರಹಣ ಮಾಡುತ್ತಿದ್ದಾರೆ.ರೋಣದ ಬಕ್ಕೇಶ್ & ಕಾರ್ತಿಕ್ ಚೆನ್ನೊಜಿರಾವ್ (Ronada Bakkesh & Karthik Chennojirao) ಸಂಗೀತ ನೀಡುತ್ತಿದ್ದಾರೆ. ಗೌಸ್ ಪೀರ್ ,ಶಿವಕುಮಾರ್ ಶೆಟ್ಟಿ ಮತ್ತು ಅಭಿನಂದನ್ ದೇಶ್ ಪ್ರಿಯಾ ಹಾಡುಗಳು ಬರುತ್ತಿದ್ದಾರೆ. ಉಜ್ವಲ್ ಗೌಡ (Ujwal Gowda) ಸಂಕಲನ ಈ ಚಿತ್ರಕ್ಕಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!