ಪ್ರತಿ ಶನಿವಾರ ಮತ್ತು ಭಾನುವಾರ ಕರುನಾಡಿನಲ್ಲಿ ಹಬ್ಬದ ವಾತಾವರಣ ಸೃಷ್ಟಿದ ಪುಟ್ಟ ಬಾಲಕ ಭೀಮರಾವ್ ಈಗ ಪ್ರತಿ ಮನೆ ಮನೆಯ ʼ ಮಹಾನಾಯಕʼ.
ಇತ್ತೀಚಿಗಷ್ಟೇ ರಾಜ್ಯಾದ್ಯಂತ ಪ್ರಸಾರವಾಗುತ್ತಿರುವ ಡಾ. ಬಿ ಆರ್ ಅಂಬೇಡ್ಕರ್ ಅವರ ಜೀವನಾಧಾರಿತ ಮಹಾನಾಯಕ ಧಾರಾವಾಹಿಯನ್ನು ತೆರೆಯ ಮೇಲೆ ತೋರಿಸಿದ ಜೀ ಕನ್ನಡ ವಾಹಿನಿ ಈಗ ಕರ್ನಾಟಕದ ಮನೆ ಮನೆಗೂ ಚಿರಪರಿಚಿತವಾದ ಟಿವಿ ಚಾನಲ್ .
ಮಹಾನಾಯಕ ಧಾರವಾಹಿ ಕನ್ನಡ ಧಾರಾವಾಹಿಗಳ ಲೋಕದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಲ್ಲದೆ ಟಿ ಆರ್ ಪಿ ಯಲ್ಲೂ ಹೊಸ ದಾಖಲೆ ನಿರ್ಮಿಸಿದ್ದು, ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಶನಿವಾರ ನಡೆದ ಜೀ ಕುಟುಂಬ ಕಾರ್ಯಕ್ರಮದಲ್ಲಿ “ ಮಹಾನಾಯಕ ಧಾರಾವಾಹಿಗೆ ವರ್ಷದ ಅತ್ಯುನ್ನತ ಡಬ್ಬಿಂಗ್ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಮಹಾನಾಯಕ ಪ್ರಸಾರವಾದ ಕೆಲವೇ ಕೆಲವು ದಿನಗಳಲ್ಲಿ ಜನಮನ್ನಣೆ ಪಡೆದುಕೊಂಡ ಏಕ ಮಾತ್ರ ಧಾರವಾಹಿ ಕೂಡ ಇದಾಗದೆ.“ಮಹಾನಾಯಕ ಧಾರಾವಾಹಿಯ ಪ್ರಸಾರವನ್ನು ನಿಲ್ಲಿಸುವಂತೆ ಮಧ್ಯರಾತ್ರಿಯಲ್ಲಿ ತುಂಬಾ ಕರೆಗಳು ಮತ್ತು ಸಂದೇಶಗಳು ಬರುತ್ತಿವೆ. ಇದು ಬೆದರಿಕೆಯಂತೆ ಕಾಣುತ್ತಿದೆ. ಆದರೆ ವೈಯಕ್ತಿಕವಾಗಿ ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮಹಾನಾಯಕ ಮುಂದುವರಿಯುತ್ತದೆ. ಜೊತೆಗೆ ಇದು ನಮ್ಮ ಹೆಮ್ಮೆಯಾಗಿದ್ದು, ಇದರಲ್ಲಿ ವೈಯಕ್ತಿಕ ಪ್ರೀತಿಯೂ ಸೇರಿದೆ. ಇದನ್ನು ಒಂದು ಸಮಸ್ಯೆ ಎಂದು ನೀವು ಪರಿಗಣಿಸಿದರೆ ವಾಸ್ತವದಲ್ಲಿ ಸಮಾಜಕ್ಕೆ ನೀವೇ ಒಂದು ಸಮಸ್ಯೆ! ಜೈ ಭೀಮ್” ಎಂದು ಕನ್ನಡ ಜೀ ವಾಹಿನಿಯ ಬಿಸ್‌ನೆಸ್ ಹೆಡ್ ಟ್ವೀಟ್ ಮಾಡಿದ್ದರು.
ಆಗ ಇಡೀ ಕರ್ನಾಟಕದ ಜನತೆ ಸಾಮಾಜಿಕ ಜಾಲತಾಣದಲ್ಲಿ ರಾಘವೇಂದ್ರ ಅವರಿಗೆ “ ನಾವು ನಿಮ್ಮೊಂದಿಗೆ ಇದ್ದೇವೆ, ಯಾವುದೇ ಕಾರಣಕ್ಕೂ ಮಹಾನಾಯಕ ಧಾರಾವಾಹಿ ಮಾತ್ರ ನಿಲ್ಲಿಸಬೇಡಿ ” ಎಂದು ಧೈರ್ಯ ಕೊಟ್ಟು ಜೊತೆ ನಿಂತಿತ್ತು. ಕರ್ನಾಟಕ ಜನತೆ ಸಾಮಾಜಿಕ ಸಾಮರಸ್ಯದಿಂದ ಕೂಡಿದ ಧಾರಾವಾಹಿಗಳನ್ನು ಬೆಂಬಲಿಸುತ್ತಾರೆ ಎಂಬುದಕ್ಕೆ ಈ ʼಮಹಾನಾಯಕʼನೇ ಸಾಕ್ಷಿ.
ಕರ್ನಾಟಕದಾದ್ಯಂತ ಹಲವಾರು ಹಳ್ಳಿಗಳಲ್ಲಿ ಧಾರಾವಾಹಿ ಮತ್ತು ಅಂಬೇಡ್ಕರ್‌ರವರ ಬ್ಯಾನರ್ ಹಾಕಿ ಲಕ್ಷಾಂತರ ಜನ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ.ಕಲಬುರ್ಗಿ, ರಾಯಚೂರು, ಬಿದರ್ ಯಾದಗಿರ್, ಕೊಪ್ಪಳ, ಬಾಗಲಕೋಟೆ, ಮೈಸೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳ ಹಳ್ಳಿಗಳಲ್ಲಿ ಮಹಾನಾಯಕ ಧಾರಾವಾಹಿಯ ಬ್ಯಾನರ್ ಬಿಡುಗಡೆ ಮಾಡಿ ಅಂಬೇಡ್ಕರ್ ವಿಚಾರ, ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯೋಣ ಎಂಬ ಮಾತುಗಳನ್ನಾಡಿ ಆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದ್ದಾರೆ ನಾಡಿನ ಜನೆತೆ.
ಒಂದು ವಾರ ಕಾರಣಾಂತರಗಳಿಂದ ಮಹಾನಾಯಕ ಪ್ರಸಾರವಾಗದೇ ಇದ್ದಾಗ ನಾಡಿನ ಸಾವಿರಾರು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಜೀ ಕನ್ನಡ ಚಾನಲ್ ಗೆ ಸಾವಿರಾರು ಜನರು ಕರೆ ಮಾಡಿ ವಿಚಾರಿಸಿದ್ದಾರೆ ಎಂಬ ಮಾಹಿತಿಯನ್ನು ಜೀ ಕನ್ನಡ ವಾಹಿನಿ ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರತಿರೋಧವೂ ವ್ಯಕ್ತವಾಗಿತ್ತು. ʼಚಿಕ್ಕ ಮಗುವೊಂದು ಟಿವಿ ಮುಂದೆ ಕುಳಿತು ಭೀಮರಾವ್ ಹಚ್ಚಿʼ ಎಂದು ಅಳುತ್ತಿರುವ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಎಳೆವಯಸ್ಸಿನಿಂದ ಹಿಡಿದು ಇಳಿ ವಯಸ್ಸಿನವರಿಗೂ ಮಹಾನಾಯಕ ಈಗ ಆಪ್ತ.
Be the first to comment