ನವೆಂಬರ್ 24ರಂದು ಬಿಡುಗಡೆಯಾಗಲಿದೆ ಮಂಗಳವಾರ ರಜಾದಿನ ಚಿತ್ರದ ಶೀರ್ಷಿಕೆ ಹಾಡು..

ಶೀರ್ಷಿಕೆಯಲ್ಲೇ ವಿಭಿನ್ನತೆಯಿರುವ ಮಂಗಳವಾರ ರಜಾದಿನ ಚಿತ್ರದ ಶೀರ್ಷಿಕೆ ಹಾಡು ನವೆಂಬರ್ 24ರಂದು ಬಿಡುಗಡೆಯಾಗಲಿದೆ.

ನಿರ್ದೇಶಕ ಯೋಗರಾಜ್ ಭಟ್ ಬರೆದಿರುವ ಈ ಚಿತ್ರದ ಶೀರ್ಷಿಕೆ ಹಾಡನ್ನು ವಿಜಯಪ್ರಕಾಶ್ ಹಾಡಿದ್ದಾರೆ. ಪ್ರಜೋತ್ ಡೇಸಾ ಸಂಗೀತ ನೀಡಿರುವ ಈ ಹಾಡು ಲಹರಿ‌ ಮ್ಯೂಸಿಕ್ ಮೂಲಕ ಬಿಡುಗಡೆಯಾಗಲಿದೆ.

ಕ್ಷೌರಿಕನ ಸುತ್ತ ಹೆಣೆಯಲಾಗಿರುವ ಕಥಾಹಂದರ ಹೊಂದಿದೆ ಈ ಸಿನಿಮಾ. ಈ ಚಿತ್ರದ ಶೀರ್ಷಿಕೆ ಗೀತೆ ಕೂಡ ಸವಿತಾ ಸಮಾಜದವರ ಕೀರ್ತಿ ಸಾರುವ ಹಾಗಿದೆ ಎನ್ನುತ್ತಾರೆ ನಿರ್ದೇಶಕ ಯುವಿನ್.
ತ್ರಿವರ್ಗ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಚಿತ್ರೀಕರಣ ‌ಮುಕ್ತಾಯವಾಗಿದೆ.

ಬೆಂಗಳೂರಿನಲ್ಲೇ ಬಹುತೇಕ ಭಾಗದ ಚಿತ್ರೀಕರಣ ನಡೆದಿದೆ. ಯವಿನ್ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ನಾಯಕನಾಗಿ ಬಿಗ್ ಬಾಸ್ ಖ್ಯಾತಿಯ ಚಂದನ್ ಆಚಾರ್ ನಟಿಸಿದ್ದಾರೆ. ಚಂದನ್ ಆಚಾರ್ ಈ ಚಿತ್ರದಲ್ಲಿ ಕ್ಷೌರಿಕನ ಪಾತ್ರ ನಿರ್ವಹಣೆ ಮಾಡಿದ್ದಾರೆ. ಲಾಸ್ಯ ನಾಗರಾಜ್ ಈ ಚಿತ್ರದ ನಾಯಕಿ. ‌ ಜಹಂಗೀರ್, ರಜನಿಕಾಂತ್, ಗೋಪಾಲ್ ದೇಶಪಾಂಡೆ, ನಂದನ್ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಾಲ್ಕು ಹಾಡುಗಳಿದ್ದು ಪ್ರಜೋತ್ ಡೇಸಾ ಸಂಗೀತ ನೀಡಿದ್ದಾರೆ. ಋತ್ವಿಕ್‌ ಮುರಳೀಧರ್ ಹಿನ್ನೆಲೆ ಸಂಗೀತ, ಉದಯ್ ಲೀಲಾ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ ಹಾಗೂ ಭೂಷಣ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಯಾಗಿರುವ ಮಂಗಳವಾರ ರಜಾದಿನ ಚಿತ್ರದ ಟ್ರೇಲರ್ ಜನಮನಸೂರೆಗೊಂಡಿದೆ‌.

ಡಿಸೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!