ರಾಜ್ಯದಲ್ಲಿ 100 ಸೀಟ್ಸ್ ಚಿತ್ರಮಂದಿರಗಳು

ಕರೋನ ಬಂದಾಗಿನಿಂದ ಜನರು ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಚಿತ್ರಗಳು ಪ್ರದರ್ಶನಗೊಳ್ಳುವುದು ಕಷ್ಟವಾಗಿದೆ. ಪ್ರಸಕ್ತ ಸಿಂಗಲ್ ಸ್ಕ್ರೀನ್‌ದಲ್ಲಿ ಅಂದಾಜು 500 ಆಸನಗಳು, ಮಲ್ಟಿಪ್ಲೆಕ್ಸ್‌ದಲ್ಲಿ 250-300 ಸೀಟುಗಳು ಇರಲಿದೆ. ಇದು ಹೌಸ್‌ಫುಲ್ ಆಗುವುದು ಅಪರೂಪ.

ಸ್ಟಾರ‍್ಸ್ ಸಿನಿಮಾ ಬಂದರೆ ತೊಂದರೆ ಆಗುವುದಿಲ್ಲ. ಅಲ್ಲದೆ ನಿರ್ಮಾಪಕರು ತಮ್ಮ ಸಿನಿಮಾವನ್ನು ಬಿಡುಗಡೆ ಮಾಡಬೇಕಾದರೆ ಬಾಡಿಗೆ, ಮಲ್ಟಿಪ್ಲೆಕ್ಸ್‌ದಲ್ಲಿ ಶೇಕಡವಾರು ಪದ್ದತಿಯಿಂದ ಬಂಡವಾಳ ವಾಪಸ್ಸು ಬರುವುದು ಸುಲಭವಾಗಿರುವುದಿಲ್ಲ. ಇದನ್ನು ಮನಗಂಡ ಹಿರಿಯ ನಿರ್ದೇಶಕ ಮತ್ತು ನಿರ್ಮಾಪಕ ಬಿ.ಆರ್.ಕೇಶವ್, ಎಸ್‌ಎಲ್‌ಎನ್ ಇಂಟಿರಿಯರ‍್ಸ್ ಹಾಗೂ ಸ್ನೇಹಿತರು ಸೇರಿಕೊಂಡು ’100 ಸೀಟ್ಸ್ ಸಿನಿಮಾ’ ಪರಿಕಲ್ಪನೆಯೊಂದಿಗೆ ಇಡೀ ಕರ್ನಾಟಕಕ್ಕೆ ಅನುಷ್ಠಾನವಾಗುವಂತೆ ಸಮಂಜಸ ರೂಪುರೇಷೆಗಳನ್ನು ಹಾಕಿಕೊಂಡು ದಾಪುಗಾಲಿಟ್ಟು ಮುನ್ನಡೆದಿದ್ದಾರೆ.

2400 ಚದರ ಅಡಿ ಇರುವ ಜಾಗದಲ್ಲಿ ಇದನ್ನು ಸಿದ್ದಪಡಿಸಬಹುದು. ನೆಲಮಹಡಿಯಲ್ಲಿ ಪಾರ್ಕಿಂಗ್, ಮೊದಲನೆ ಮಹಡಿ ರೆಫ್ರಿಷ್‌ಮೆಂಟ್, ಶೌಚಲಯ ಇತರೆ, ಎರಡನೆ ಮಹಡಿಯಲ್ಲಿ ಚಿತ್ರಮಂದಿರ. ದಾಖಲಾತಿಗಳು ಸರಿಯಿದ್ದರೆ ಬ್ಯಾಂಕಿನಿಂದ ಸಾಲ ಸೌಲಭ್ಯ ಕೊಡಿಸಲು ತಂಡವು ಶಿಪಾರಸ್ಸು ಮಾಡುತ್ತದೆ. ಲೇಸರ್ ಪ್ರೊಜೆಕ್ಟರ್, ಎಸಿ, 7.1 ಸೌಂಡ್ ಇತರೆ ಸೇರಿಕೊಂಡು ಆಧುನಿಕ ತಂತ್ರಜ್ಘಾನವುಳ್ಳ ಅತಿ ಕಡಿಮೆ ವೆಚ್ಚದಲ್ಲಿ ಚಿತ್ರಮಂದಿರವನ್ನು ನಿರ್ಮಿಸಬಹುದು. ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಟಿಕೆಟ್ ಸಿಗಲಿದೆ. ಈಗಾಗಲೇ ೨೫ಕ್ಕೂ ಹೆಚ್ಚು ಮಂದಿ ಆಸಕ್ತರು ಟಾಕೀಸ್ ನಿರ್ಮಿಸಲು ಮುಂದೆ ಬಂದಿದ್ದಾರೆ.ಇದರಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ಚಿಕ್ಕಮಗಳೂರು, ಬಾಗೆಪಲ್ಲಿ, ದೇವನಹಳ್ಳಿ, ಚಿಕ್ಕಬಳ್ಳಾಪುರ, ಚೆನ್ನಪಟ್ಟಣ, ನಾಗಮಂಗಲ,ಗುಲ್ಬರ್ಗಾ,ಕಡೂರು, ತಿಪಟೂರು ಇನ್ನು ಹಲವು ಭಾಗಗಳಿಂದ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನೇರವಾಗಿ ಪ್ರದರ್ಶನ ಮಾಡುವುದರಿಂದ ಬಾಡಿಗೆ ಕಿರಿಕಿರಿ ಇರದೆ, ಶೇರಿಂಗ್ ವ್ಯವಸ್ಥೆಯಲ್ಲಿ ನಿರ್ಮಾಪಕರಿಗೆ ಹಣ ಬರುವಂತೆ ನೋಡಿಕೊಳ್ಳಲಾಗುವುದು.

ಸಣ್ಣ ಟಾಕೀಸ್ ಆಗಿದ್ದರಿಂದ ಕಾರ್ಮಿಕ ಅವಶ್ಯಕತೆ ಕಡಿಮೆ ಇರುತ್ತದೆ. ಅಲ್ಲದೆ ಕನ್ನಡ ಚಿತ್ರರಂಗವನ್ನು ಒಂದು ಹಂತಕ್ಕೆ ತೆಗೆದುಕೊಂಡು ಹೋಗಲು ಇಂತಹ ಪರಿಕಲ್ಪನೆ ಸಹಕಾರಿಯಾಗಿರುತ್ತದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!