‘4’ ದಿಕ್ಕುಗಳನ್ನು ಪ್ರತಿನಿಧಿಸುವ ಪಾತ್ರಗಳು

ವಿಷ್ಣ ಅಭಿನಯದ ವಿಷ್ಣುಸೇನಾ ಚಿತ್ರದಲ್ಲಿ ಅವರ ಮಗನ ಪಾತ್ರ ಮಾಡಿದ್ದ ಭುವನ್‍ಚಂದ್ರ ನಾಯಕನಾಗಿ ನಟಿಸುತ್ತಿರುವ ಮತ್ತೊಂದು ಚಿತ್ರ 4. ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮಗಳೆನ್ನುವ ನಾಲ್ಕು ದಿಕ್ಕುಗಳನ್ನು ಪ್ರತಿನಿಧಿಸುವ ಪಾತ್ರಗಳೇ ಈ ಚಿತ್ರದ ಹೈಲೈಟ್.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಅಭಿ ಮೊದಲಬಾರಿಗೆ ಆಕ್ಷನ್‍ಕಟ್ ಹೇಳುತ್ತಿದ್ದಾರೆ. ನಾಲ್ಕು ಪಾತ್ರಗಳ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಜಾನರ್ ಚಿತ್ರ ಇದಾಗಿದ್ದು, ವ್ಯಾಮೋಹ, ಅಧಿಕಾರ, ಸ್ನೇಹ, ಪ್ರೀತಿಯನ್ನು ಈ ನಾಲ್ಕು ಪಾತ್ರಗಳು ಪ್ರತಿಬಿಂಬಸಲಿವೆ. ಈವರೆಗೆ ಯಾರೂ ಮಾಡಿರದ ಪ್ರಯತ್ನವನ್ನು ನಾವಿಲ್ಲಿ ಮಾಡುತ್ತಿದ್ದೇವೆ. ಪ್ರೀತಿಯೇ ಪ್ರಧಾನವಾಗಿರುವ ಈ ಚಿತ್ರದಲ್ಲಿ ವ್ಯಾಮೋಹ, ಅಧಿಕಾರ ಮತ್ತು ಸ್ನೇಹದ ಪಾತ್ರಗಳೇನು ಅನ್ನೋದು ಹಂತಹಂತವಾಗಿ ತೆರೆದುಕೊಳ್ಳಲಿದೆ.

ಲವ್, ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಹೀಗೆ ಎಲ್ಲ ಬಗೆಯ ಕಂಟೆಂಟನ್ನೂ ಸೇರಿಸಿ ಈ ಚಿತ್ರದ ಕಥಾಹಂದರ ಹೆಣೆದಿದ್ದೇನೆ ಎಂದು ನಿರ್ದೇಶಕ ಅಭಿ ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ನಿರ್ದೇಶಕನಾಗಬೇಕೆಂದು ದಶಕದ ಹಿಂದೆ ಬೆಂಗಳೂರಿಗೆ ಬಂದ ಅಭಿ. ಭರತ್, ದಯಾಳ್ ಪದ್ಮನಾಭನ್, ಸುಮಂತ್ ಕ್ರಾಂತಿ ಅವರುಗಳೊಂದಿಗೆ ಸಹಾಯಕ ನಿರ್ದೇಶಕನಾಗಿ, ಗೀತರಚನೆಕಾರನಾಗಿಯೂ ಗುರುತಿಸಿಕೊಂಡಿದ್ದಾರೆ.8 ಎಂಎಂ, ತ್ರಯಂಬಕಂ, ಅರಣ್ಯಾನಿ, ಬರ್ಕಲೆ, ಕಾಲಚಕ್ರ ಮುಂತಾದ ಸಿನಿಮಾಗಳಿಗೆ ಅಭಿ ಹಾಡುಗಳನ್ನು ಬರೆದಿರುವ ಅಭಿ ಕಥೆಯೊಂದನ್ನು ಬರೆದುಕೊಂಡು ನಿರ್ಮಾಪಕರ ಹುಡುಕಾಟದಲ್ಲಿದ್ದಾಗ, ಬಿ.ಜಿ.ಹೇಮಾವತಿ ಮತ್ತು ಅವರ ಪತಿ ಸಿಕ್ಕಿದ್ದಾರೆ. ತಾವು ಬರೆದಿಟ್ಟುಕೊಂಡಿದ್ದ ಕಥೆಯ ಸಾರಾಂಶವನ್ನು ಅವರಿಗೆ ಹೇಳಿದಾಗ, ಅಭಿ ಹೇಳಿದ ಸ್ಟೋರಿಲೈನ್ ಇಷ್ಟಪಟ್ಟ ಬಿ.ಜಿ.ಹೇಮಾವತಿ ಸಿನಿಮಾ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದಾರೆ. ಹೀಗೆ ಶುರುವಾದ ಸಿನಿಮಾ 4.

ಈ ಚಿತ್ರದಲ್ಲಿ ಭುವನ್ ಚಂದ್ರ ಜೊತೆ ನಾಯಕಿಯಾಗಿ ದಿಶಾ ಪಾಂಡೆ, ಸಂಪತ್ ಕುಮಾರ್, ಅರುಣ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಜ್ಯೂಡಾ ಸ್ಯಾಂಡಿ ಅವರ ಸಂಗೀತ, ಪೌಲ್ ಮುಸಾಸಿಜಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಈಗಾಗಲೇ ಮಂಗಳೂರಿನ ಸುತ್ತಮುತ್ತ ಮೊದಲ ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಉಳಿದ ಇಪ್ಪತ್ತು ದಿನಗಳ ಚಿತ್ರೀಕರಣವನ್ನು ಬೆಂಗಳೂರಿನ ಸುತ್ತಮುತ್ತ ನಡೆಸಲಿದೆ. ಎಲ್ಲ ಅಂದುಕೊಂಡಂತೇ ಆದರೆ, 2021ರ ಜನವರಿ ಅಥವಾ ಫೆಬ್ರವರಿಯಲ್ಲಿ ತೆರೆಗೆ ತರುವ ಪ್ರಯತ್ನ ನಿರ್ಮಾಪಕಿ ಬಿ.ಜಿ. ಹೇಮಾವತಿ ಅವರದ್ದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!