ಚಿತ್ರದ ಹೆಸರು ಗಡಿಯಾರ. ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿದ್ದಾರೆ. ಚಿತ್ರದ ಹೆಸರೇ
ಪ್ರಥಮ ಆಕರ್ಷಣೆಯಾದರೆ ಇದೀಗ ಜನ ಮೆಚ್ಚುಗೆ ಪಡೆದಿರುವ ಲಿರಿಕಲ್ ಸಾಂಗ್ಸ್ ನಿಜವಾದ
ಆಮಂತ್ರಣ ಪತ್ರಿಕೆಯೆನ್ನುವಂತೆ ಚಿತ್ರದತ್ತ ಕುತೂಹಲ ಮೂಡಿಸಿವೆ. ಗಡಿಯಾರದಲ್ಲಿನ ವೇಗದ
ಮುಳ್ಳಿನಂತೆ ಈ ಚಿತ್ರದ ಹಾಡುಗಳು ಕೂಡ ಎಲ್ಲೆಡೆ ಆವರಿಸುತ್ತಾ ಜನಪ್ರಿಯವಾಗುತ್ತಿವೆ.
ಅದು ಕೂಡ ಲಿರಿಕಲ್ ಹಾಡುಗಳೇ ಈ ಮಟ್ಟಕ್ಕೆ ಸದ್ದು ಮಾಡುತ್ತಿರುವುದು ಹಾಡಿನಲ್ಲಿನ
ಸಾಹಿತ್ಯಿಕ ಗುಣ ಮತ್ತು ಗಾಯಕರ ಗಾಯನ ಶ್ರೇಷ್ಠತೆಗೆ ಸಂದಿರುವ ಗೌರವ ಎಂದೇ ಹೇಳಬೇಕು.
ಅಂದಹಾಗೆ ಚಿತ್ರ ಎಲ್ಲ ಹಾಡುಗಳಿಗೆ ರಾಘವ್ ಸುಭಾಷ್ ಸಂಗೀತ ನೀಡಿದ್ದಾರೆ.
Hookah / Party Song
ಆಕಾಶ್ ಆಡಿಯೋ ಮೂಲಕ ಹೊರಗೆ ಬಂದಿರುವ ಹಾಡುಗಳಲ್ಲಿ ಪ್ರಥಮವಾಗಿ ಗಮನ ಸೆಳೆಯುವುದೇ
‘ಸ್ಮೋಕಿಂಗು ಇಂಜುರಿಯಸ್ಸು..’ಎನ್ನುವ ಹುಕ್ಕದ ಹಾಡು.
ಗಾಯಕಿ ಅಪೂರ್ವ ಶ್ರೀಕುಮಾರ್ ಮತ್ತು ವ್ಯಾಸರಾಜ್ ಕಂಠದಲ್ಲಿ ಮೂಡಿ ಬಂದಿರುವ ಈ ಗೀತೆ
ಇಂದಿನ ಟ್ರೆಂಡ್ಗೆ ಹೊಂದಿಕೊಂಡ ಹಾಗೆ ಇದೆ. ಯೂತ್ ಮೆಚ್ಚುವ ಪಾರ್ಟಿ ಸಾಂಗ್ ಇದಾದರೂ
ಆರಂಭದ ಸಾಲುಗಳಲ್ಲೇ ಎಚ್ಚರಿಕೆಯ ವಾಕ್ಯಗಳನ್ನು ಹೇಳುವ ಕಾರಣ, ಅವರಿಗೆ ಬುದ್ಧಿ ಮಾತು
ಹೇಳಬಯಸುವವರಿಗೂ ಮೆಚ್ಚುಗೆ ಮೂಡಿಸಿದರೆ ಅಚ್ಚರಿ ಇಲ್ಲ. ಯೂಟ್ಯೂಬ್ ವಾಹಿನಿಯಲ್ಲಿ
ಹಾಡಿನ ಕೆಳಗೆ ಮೂಡಿ ಬಂದಿರುವ ಪ್ರಶಂಸೆಯ ಕಮೆಂಟ್ಗಳೇ ಶ್ರೋತೃಗಳಿಗೆ ಹಾಡು ಎಷ್ಟು
ಇಷ್ಟವಾಗಿದೆ ಎಂದು ತೋರಿಸುವಂತಿದೆ. ತೆಲುಗು ಹಾಡುಗಳ ಮಟ್ಟಕ್ಕೆ ಉತ್ಕೃಷ್ಟವಾಗಿದೆ
ಎಂದು ಕಮೆಂಟ್ ಮಾಡುವವರಿಂದ ಹಿಡಿದು, ಇದುವರೆಗೆ ಪರಭಾಷಾ ಹಾಡುಗಳನ್ನು
ಮೆಚ್ಚುವವರಿಂದಲೂ ಕನ್ನಡದ ಹಾಡಿಗೆ ಭೇಷ್ ಎಂದು ಹೇಳಿಸಿದ ಕೀರ್ತಿ ಪಡೆದುಕೊಂಡಿದೆ. ಈ
ಗೀತೆಯನ್ನು ಸುಭಾಷ್ ಬೆಟಗೆರೆಯವರು ಬರೆದು ಹಾಡಿದ್ದಾರೆ.
Romantic / Love Song
ಚಿತ್ರದಲ್ಲಿ ಖ್ಯಾತ ಗಾಯಕಿ ಅನುರಾಧಾ ಭಟ್ ಒಂದು ರೊಮ್ಯಾಂಟಿಕ್ ಗೀತೆಯನ್ನು
ಹಾಡಿದ್ದಾರೆ. ಹುಕ್ಕಾ ಹಾಡಿನ ಅಮಲು ಒಂದು ರೀತಿಯದ್ದಾದರೆ, “ಇನಿಯ ನಿನ್ನ
ಧ್ಯಾನದಲ್ಲಿ..” ಎನ್ನುವ ಹಾಡಿನ ಮೂಲಕ ಅನುರಾಧ ಭಟ್ ನಮ್ಮನ್ನು ಇನ್ನೊಂದು ಅಮಲಿನ
ಲೋಕಕ್ಕೆ ಕರೆದೊಯ್ಯುತ್ತಾರೆ. ಪ್ರೇಮದ ನಶೆಯನ್ನು ತೋರಿಸುವ ಈ ರೊಮ್ಯಂಟಿಕ್ ಗೀತೆಗೂ
ಉತ್ತಮ ಪ್ರತಿಕ್ರಿಯೆ ದೊರಕಿದೆ.
Aghori / Shiva Song
ಮೂರನೆಯ ಗೀತೆಯಲ್ಲಿ `ಓಂ ನಮಃ ಶಿವಾಯ’ ಎನ್ನುವ ಭಕ್ತಿಯ ನಶೆ ಇದೆ. ಅಘೋರಿ ಶಿವನ ಈ
ಹಾಡನ್ನು ಹೇಮಂತ್ ಕುಮಾರ್ ಹಾಡಿದ್ದಾರೆ. ಈ ಭಕ್ತಿ ಪೂರ್ಣ ಹಾಡಿನ ರಚನೆಗೆ ನಿರ್ದೇಶಕ
ಪ್ರಭೀಕ್ ಮೊಗವೀರ್ ಅವರೊಂದಿಗೆ ರಂಗನಾಥ್ ಕೂಡ ಕೈ ಜೋಡಿಸಿದ್ದಾರೆ. ಅಲ್ಲಿಗೆ ಪ್ರಭೀಕ್
ಅವರು ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿ ನಿರ್ಮಾಣ ಮಾಡಿರುವುದರ ಜೊತೆಗೆ
ಗೀತರಚನೆಯನ್ನು ಕೂಡ ಮಾಡಬಲ್ಲ ಬಹುಮುಖ ಪ್ರತಿಭೆ ಎನ್ನುವುದು ಸಾಬೀತಾದಂತಾಯಿತು.
Title / Rap Song
ನಾಲ್ಕನೆಯದು ಸಮಯ ಗಡಿಯಾರದಲ್ಲಿತ್ತು ಎನ್ನುವ ಟೈಟಲ್ ರ್ಯಾಪ್ ಸಾಂಗ್. ಈ ಲಿರಿಕಲ್
ಹಾಡನ್ನು ಕೂಡ ಪ್ರಭೀಕ್ ಮೊಗವೀರ ಅವರೇ ಬರೆದಿದ್ದು ವ್ಯಾಸ್ ರಾಜ್ ಹಾಡಿದ್ದಾರೆ.
ಇದೊಂದು ರ್ಯಾಪ್ ಶೈಲಿಯ ಹಾಡು. ಹಾಡು ಆಸ್ವಾದಿಸುತ್ತಾ ಕುಳಿತಲ್ಲೇ ಮೈಕೈ
ಅಲ್ಲಾಡಿಸುವಂತೆ ಮೈ ತುಂಬಿಕೊಳ್ಳುವ ರ್ಯಾಪ್ ಹಾಡಿನ ಆತ್ಮ ಇಲ್ಲಿಯೂ ಇದೆ! ಹಾಗಾಗಿ
ಒಟ್ಟು ಗಡಿಯಾರ ಚಿತ್ರದ ಹಾಡುಗಳನ್ನು ಸಂಗೀತದ ಅಮಲೇರಿಸುವ ಗೀತೆಗಳು ಎಂದೇ
ಹೇಳಬಹುದು.`ಆತ್ಮ’ ಸಿನೆಮಾಸ್ ಬ್ಯಾನರ್ನಲ್ಲಿ ವಿಕೆ ಆರ್ ಮೂವೀಸ್ ಸಹಯೋಗದಲ್ಲಿ
ನಿರ್ಮಾಣವಾಗಿರುವ ಈ ಚಿತ್ರದಲ್ಲಿ ರಾಜ್ ದೀಪಕ್ ಶೆಟ್ಟಿ, ಶೀತಲ್ ಶೆಟ್ಟಿ, ಶರತ್
ಲೋಹಿತಾಶ್ವ, ಸುಚೇಂದ್ರ ಪ್ರಸಾದ್ ಮೊದಲಾದವರ ತಾರಾಗಣವಿದೆ. ಹಾಡುಗಳ ಪ್ರಭಾವದಿಂದಾಗ
ಚಿತ್ರದ ಬಿಡುಗಡೆ ಬಗ್ಗೆಯೂ ಪ್ರೇಕ್ಷಕರು ನಿರೀಕ್ಷಿಸುವಂತಾಗಿದೆ.
Be the first to comment