ಚಿತ್ರ ವಿಮರ್ಶೆ : ‘ಭ್ರಮೆ’ ಮತ್ತು ವಾಸ್ತವದ ನಡುವಿನ ಕುತೂಹಲಕಾರಿ ಚಿತ್ರ

ಚಿತ್ರ:  ‘ಭ್ರಮೆ’

ನಿರ್ದೇಶಕ :ಚರಣ ರಾಜ್

ಕುಂದಾಪುರದಲ್ಲಿ ನಡೆದ ನೈಜ ಘಟನೆ ಆಧರಿತ ಕಥೆಯನ್ನು ಸಿನಿಮಾ ರೂಪಕ್ಕೆ ತಂದು, ಈಗಾಗಲೆ ಟ್ರೈಲರ್ ಹಾಗು ಸಾಂಗ್ ಮುಖಾಂತರ ಪ್ರೇಕ್ಷಕರ ಗಮನ ಸೆಳೆದಿದ್ದ ಸಿನಿಮಾ ‘ಭ್ರಮೆ’, ಕನ್ನಡ ರಾಜ್ಯೋತ್ಸವದಂದೇ ‘ನಮ್ಮ ಪ್ಲೆಕ್ಸ್’ ಅನ್ನುವ ಓ.ಟಿ.ಟಿ ಫ್ಲಾಟ್‌ಫಾರ್ಮ್ ನಲ್ಲಿ  ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಹೊಸತಂಡವಾದರೂ ಹೊಸ ರೀತಿಯ ಮಾರ್ಕೆಟಿಂಗ್ ವಿಧಾನದ ಮೂಲಕ, ರಿಲೀಸ್‌ಗೂ ಮುನ್ನವೇ ಹತ್ತು ಸಾವಿರಕ್ಕಿಂತಲೂ ಹೆಚ್ಚು ಟಿಕೆಟ್‌ಗಳನ್ನು ಪ್ರೇಕ್ಷಕ ಪ್ರಭು ಖರೀದಿಸುವಂತೆ ಮಾಡಿ ಗೆದ್ದಿದೆ.

‘ಭ್ರಮೆ’ಯ ಕಥೆಯನ್ನು ಬಿಟ್ಟುಕೊಡುವುದು ತುಂಬಾ ನಾಜೂಕಿನ ವಿಚಾರ ಯಾಕೆಂದರೆ, ಸ್ವಲ್ಪ ಯಾಮಾರಿದರೂ ಕಥೆಯ ಎಳೆ ಬಿಟ್ಟುಕೊಟ್ಟಾಂತಾಗುತ್ತದೆ. ಆದರೆ, ಕಥೆಯೆ ಎಳೆಯ ಬಿಟ್ಟುಕೊಡದೆ ಚಿತ್ರದ ಕಥೆ ಹೇಳುವ ಪ್ರಯತ್ನ ಮಾಡ್ತೀವಿ. ನೀವು ದೂರದಲ್ಲಿ ಕಾಮಬಿಲ್ಲನ್ನು ನೋಡತ್ತೀರಿ. ಆ ಕಾಮನಬಿಲ್ಲು ನಿಜಕ್ಕೂ ಇದೆಯೆ? ಅಥವಾ ನಿಮ್ಮ ಭ್ರಮೆಯೇ? ಏಕೆಂದರೆ ನೀವು ಅದು ಕಾಣಿಸುವ ಸ್ಥಳ್ಕೆ ಹೋದರೆ ಅದು ಅಲ್ಲಿ ಇರುವುದಿಲ್ಲ! ಅಂದ ಮಾತ್ರಕೆ ನೀವು ಕಂಡ ಕಾಮನ ಬಿಲ್ಲು ಸುಳ್ಳೇ?.. ಹೀಗೆ ಭ್ರಮೆ ಮತ್ತು ವಾಸ್ತವಗಳ ನುಡವಿನ ಸೂಕ್ಷ್ಮಗೆ ಗೆರೆಯಲ್ಲಿ ನಡೆಯುವ ಕಥೆ ‘ಭ್ರಮೆ’ ಚಿತ್ರದ್ದು.

ಚಿತ್ರದ ನಾಯಕ ನವೀನ್ ರಘು ಮುಗ್ಧ-ಸ್ನಿಗ್ಧ-ಸುಂದರ. ನಿಜ ಜೀವನದಲ್ಲಿ ನವೀನ್ ಹೇಗಿದ್ದಾರೋ ಚಿತ್ರದಲ್ಲೂ ಅದೇ ರೀತಿಯ ಪಾತ್ರವನ್ನೂ ಲೀಲಾಜಾಲವಾಗಿ ಮಾಡಿದ್ದಾರೆ. ಮೇಲ್ ನರ್ಸ್ ರೋಲ್‌ನಲ್ಲಿ ಕಾಣಿಸಿಕೊಂಡಿರುವ ನವೀನ್ ಅವರ ಕುಂದಾಪರ ಕನ್ನಡ ಸೂಪರ್. ಕಥೆ ಆರಂಭ ಆಗೋದೆ ನವೀನ್ ಸುತ್ತಮುತ್ತಲಿನ ಪಾತ್ರಗಳ ಭ್ರಮೆಗಳಿಂದ. ಆ ಭ್ರಮೆಯಿಂದಾಗಿ ನವೀನ್ ಪ್ರೇಯಸಿ ದೂರಾಗ್ತಾಳಾ? ಅಷ್ಟಕ್ಕೂ ಆ ಭ್ರಮೆ ಯಾವುದು? ದೆವ್ವ-ಭೂತ ಅನ್ನೋದು ಕೇವಲ ಭ್ರಮೆಯಾ ಅಥವಾ ವಾಸ್ತವವಾ?… ಹೀಗೆ ಸಾಕಷ್ಟು ಇಂಟ್ರೆಸ್ಟಿಂಗ್ ಅಂಶಗಳನ್ನು ನೀವು ಸಿನಿಮಾದಲ್ಲಿ ನೋಡಿಯೇ ಅನಿಭವಿಸಬೇಕು.

ಇನ್ನು, ನವೀನ್‌ಗೆ ಇಲ್ಲಿ ಇಬ್ಬರು ನಾಯಕಿಯರು. ನವನಟಿಯರಾದ ಇಶಾನ ಹಾಗೂ ಅಂಜನಾ ಗೌಡ. ಇಬ್ಬರದೂ ವಿಭಿನ್ನ ಪಾತ್ರಗಳು. ಈ ಎರಡೂ ಪಾತ್ರಗಳ ಮೂಲಕ ಚರಣ್‌ರಾಜ್ ಮನುಷ್ಯನ ಮನಸ್ಸಿನೊಳಗಿನ ಪಾಸಿಟೀವ್ ಮತ್ತು ನೆಗೆಟೀವ್ ವಿಚಾರಗಳನ್ನು ಸಿನಿಮಾ ಭಾಷೆಯಲ್ಲಿ ಸಮರ್ಥವಾಗಿ ತಂದಿದ್ದಾರೆ. ಮಜಾ ಟಾಕೀಸ್‌ನ ಪವನ್ ಕುಮಾರ್, ಕಂಪೌಂಡರ್ ಪಾತ್ರದಲ್ಲಿ ಚಿತ್ರದುದ್ದಕ್ಕೂ ಕಚಗುಳಿ ಇಡುತ್ತಲೇ ಹೋಗುತ್ತಾರೆ. ಉಳಿದಂತೆ, ನಿರ್ದೇಶಕ ಚರಣ್‌ರಾಜ್ ಸಾಕಷ್ಟು ಹೊಸ ಪ್ರತಿಭೆಗಳನ್ನು ‘ಭ್ರಮೆ’ ಮೂಲಕ ಪರಿಚಿಸಿದ್ದಾರೆ.

ವಿಶೇಷ ಅಂದ್ರೆ ನಟ ನವೀನ್ ರಘು, ಹಿರಿಯ ನಿರ್ದೇಶಕ ಭಗವಾನ್ ಅವರ ವಿದ್ಯಾರ್ಥಿ. ಭಗವಾನ್ ಅವರ ಇಂಡಿಯನ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲೇ ನಟನೆಯ ಬಗ್ಗೆ ತರಬೇತಿ ಪಡೆದು ‘ಭ್ರಮೆ’ ಮೂಲಕ ಸೈ ಅನ್ನಿಸಿಕೊಂಡಿದ್ದಾರೆ. ಟ್ರೇಲರ್ ಮೂಲಕ ಹಾರರ್ ಥ್ರಿಲ್ಲರ್ ಚಿತ್ರಕತೆಯ ಸಿನಿಮಾ ಇರ್ಬಹುದಾ ಅನ್ನೋ ಕುತೂಹಲ ಮೂಡಿಸಿದ್ದ ಚಿತ್ರತಂಡ.. ಅದೇ ಕುತೂಹಲವನ್ನು ಚಿತ್ರದುದ್ದಕ್ಕೂ ಕಾಯ್ದುಕೊಂಡು ಹೋಗುತ್ತದೆ. ಚಿತ್ರದಲ್ಲಿ ಯಾವುದೇ ಅನಗತ್ಯ ಸಿಜಿ ವರ್ಕ್ಗಳನ್ನು ತುರುಕದೆ, ಬಹಳ ನೀಟ್ ಆಗಿ ಒಂದು ಸೈಕಲಾಜಿಕಲ್ ಹಾರರ್ ಕಥೆ ಇರುವ ಸಿನಿಮಾವನ್ನು ಚಿತ್ರತಂಡದ ನೀಡಿದೆ.

ಖ್ಯಾತ ಸಂಗೀತ ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ಚಿತ್ರಕ್ಕೆ ಒಂದು ಫ್ರಶ್‌ನೆಸ್ ನೀಡಿದೆ. ಎಲ್ಲಿಯೂ ಅಬ್ಬರದ ಸಂಗೀತಕ್ಕೆ ಎಡೆಮಾಡಿಕೊಡದೆ, ಇಡೀ ಚಿತ್ರದ ಕಥೆಗೆ ಬೆನ್ನೆಲುಬಾಗಿದೆ ಚಿತ್ರದ ಹಿನ್ನಲೆ ಸಂಗೀತ. ಒಟ್ಟಿನಲ್ಲಿ ಕನ್ನಡ ರಾಜ್ಯೋತ್ಸವ ದಿನದಂದು, ಕನ್ನಡಿಗರಿಗೆ ‘ಭ್ರಮೆ’ ಚಿತ್ರತಂಡ ಒಂದು ಉತ್ತಮ ಚಿತ್ರವನ್ನು ಗಿಫ್ಟ್ ಆಗಿ ನೀಡಿದೆ. ಇನ್ನೇಕೆ ತಡ, ‘ಹೊಸಬರು ಏನ್ಮಾಡ್ತರೆ ಬಿಡಿ’ ಅನ್ನೋ ಭ್ರಮೆ ಬಿಟ್ಟು ‘ಭ್ರಮೆ’ ನೋಡಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!