ಏಳು ತಿಂಗಳ ಬಳಿಕ ಚಿತ್ರ ಮಂದಿರ ಪುನರಾರಂಭ ಆಗಿರುವ ಈ ಹೊತ್ತಿನಲ್ಲಿ ಕೆಲವು ಕನ್ನಡ ಸಿನಿಮಗಳು ಬಿಡುಗಡೆ ಆಗಿರುವ ಪೈಕಿ ‘5 ಅಡಿ 7 ಅಂಗುಲ’ ಥ್ರಿಲ್ಲರ್ ಕಥಾನಕ ಸಿನಿಮಾ
ಬಾಕ್ಸ್ ಆಫೀಸ್ ಅಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ. ಮಾಲ್ ಸ್ಕ್ರೀನ್ ಅಲ್ಲಿ 150 ಆಸನಗಳಿಗೆ ಟಿಕೆಟ್ ನೀಡಿದರೆ ಈ ಕೋರೋನಾ ಕಾಟದಿಂದ 140 ಪ್ರೇಕ್ಷಕರು ಟಿಕೆಟ್ ಖರೀದಿಸಿ ಚಿತ್ರ ವೀಕ್ಷಿಸಿರುವುದು ಚೊಚ್ಚಲ ನಿರ್ದೇಶನ ಹಾಗೂ ನಿರ್ಮಾಣ ಮಾಡಿರುವ ನಂದಳಿಕೆ ನಿತ್ಯಾನಂದ ಪ್ರಭು ಅವರಿಗೆ ಸಂತೋಷ ತಂದಿದೆ.
‘5 ಅಡಿ 7 ಅಂಗುಲ’ ಮಾರ್ಚ್ 13 ರಂದು 2020 ಬಿಡುಗಡೆ ಆದಾಗ 38 ಚಿತ್ರಮಂದಿರಗಳಲ್ಲಿ ಕೇವಲ ಮೂರು ಪ್ರದರ್ಶನ ಆಗುವ ಹೊತ್ತಿಗೆ ರಾತ್ರಿಯೇ ಕೋರೋನಾ ಕಾಟದಿಂದ ಚಿತ್ರಮಂದಿರಗಳು
ಮುಚ್ಚಿದವು. ಈಗ ಅಕ್ಟೋಬರ್ 16 ರಂದು ಏಳು ತಿಂಗಳ ಬಳಿಕ ಬಿಡುಗಡೆ ಆದ ಈ ಸಿನಿಮಾಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಏರುಗತಿಯಲ್ಲಿದೆ.
ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರ ಎರಡು ಪ್ರದರ್ಶನ ಇಂದ ಮೂರು ಪ್ರದರ್ಶನ ನೀಡಿದೆ. ಅಕ್ಟೋಬರ್ 16 ರಂದು ನಿರ್ದೇಶಕ ಕಂ ನಿರ್ಮಾಪಕ ನಿತ್ಯಾನಂದ ಪ್ರಭು ಅವರು ಚಿತ್ರಮಂದಿರದ ಗೇಟ್ ಬಳಿ ಅವರ ತಂಡದೊಂದಿಗೆ ನಿಂತಿದ್ದರು. ಮೊದಲ ಪ್ರದರ್ಶನ ನೋಡಿಕೊಂಡು ಬಂದವರಲ್ಲಿ ಒಬ್ಬ ವ್ಯಕ್ತಿ ಕಲಾವಿದರನ್ನು ಗಮನಿಸಿ ಅವರ ಅಭಿನಯಕ್ಕೆ ಶುಭಾಶಯ ತಿಳಿಸಿ ನಿರ್ದೇಶಕರನ್ನು ಪತ್ತೆ ಮಾಡಿ ಆ ಪ್ರೇಕ್ಷಕ ತನ್ನ ಜೇಬಿನಿಂದ 100 ರೂಪಾಯಿ ತೆಗೆದು ನಿಮ್ಮ ಚಿತ್ರ ‘ಡಬಲ್ ಟಿಕೆಟ್’ ಹಣಕ್ಕೆ ಅರ್ಹ ತೆಗೆದುಕೊಳ್ಳಿ ಎಂದು ಹೇಳಿದನಂತೆ.
ಇದನ್ನು ಕೇಳಿದ ನಿರ್ದೇಶಕ ಕಂ ನಿರ್ಮಾಪಕ ನಿತ್ಯಾನಂದ ಪ್ರಭು ಅವರಿಗೆ ಆನಂದ ಭಾಷ್ಪ. ಆ ಚಿತ್ರ ನೋಡುಗನಿಗೆ ಧನ್ಯವಾದ ತಿಳಿಸಿ ಆತ ನೀಡಲು ಬಂದ 100 ರೂಪಾಯಿಯನ್ನು ನಯವಾಗಿ ತಿರಸ್ಕರಿಸಿದ್ದಾರೆ. ಕೆಲವು ಪ್ರೇಕ್ಷಕರು ‘ಯು ಟರ್ನ್, ರಂಗಿ ತರಂಗ’ ಸಿನಿಮಾಕ್ಕೆ ಹೊಲಿಸಿದ್ದು ಇವರಿಗೆ ಖುಷಿಯ ವಿಚಾರ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೋರಿದ ಉತ್ಸಾಹ ಹಾಗೂ ಪ್ರೋತ್ಸಾಹಕ್ಕೂ ಸಹ ನಿರ್ದೇಶಕ ನಿತ್ಯಾನಂದ ಪ್ರಭು ಧನ್ಯವಾದ ತಿಳಿಸುತ್ತಾರೆ. ಒಂದು ಪ್ರಿಮಿಯರ್ ಶೋ ಕಳೆದ ವಾರ ಉಧ್ಯಮದವರಿಗೆ ಏರ್ಪಾಡು ಮಾಡಿದ್ದಾಗ ಒಳ್ಳೆಯ ಅಭಿಪ್ರಾಯ ಸಂಗ್ರಹ ಆಗಿದೆ. ನಂದಕೆ ನಿತ್ಯಾನಂದ ಪ್ರಭು ಅವರಿಗೆ ಕೇವಲ ಒಂದೇ ದಿವಸಕ್ಕೆ ಕೋರೋನಾ ಇಂದ ಆದ ತಾಪತ್ರಯಕ್ಕೆ ಮನೆಯಲ್ಲಿ ಅವರ ತಂದೆ ನಂದಲಿಕೆ ಚಂದ್ರಶೇಖರ ಪ್ರಭು ಅವರು ಸಮದಾನ ಮಾಡಿದ್ದು ದೊಡ್ಡ ಪ್ಲಸ್ ಆಯಿತು ಅನ್ನುತ್ತಾರೆ. ವಿಶ್ವಕ್ಕೆ ಆಗಿರುವ ಈ ತೊಂದರೆ
ನಿನಗೊಬ್ಬನಿಗೆ ಆಗಿಲ್ಲವಲ್ಲ ಎಂದು ಮಗನನ್ನು ಸಮಾದಾನ ಮಾಡಿದ್ದಾರೆ.
ಚಿತ್ರದ ಕಥಾ ನಾಯಕಿ ಅದಿತಿ, ನಾಯಕರಾದ ಭುವನ್ ಹಾಗೂ ರಾಸಿಕ್ ಕುಮಾರ್, ಸಂಗೀತ ನಿರ್ದೇಶಕ ಆರ್ ಎಸ್ ನಾರಾಯಣ್ ಮಾಧ್ಯಮ ಘೋಷ್ಟಿಯಲ್ಲಿ ಸಂತೋಷವನ್ನು ವ್ಯಕ್ತ ಮಾಡಿದ್ದಾರೆ ಅದಕ್ಕೆ ಕಾರಣ ಎರಡನೇ ವಾರಕ್ಕೆ ‘5 ಅಡಿ 7 ಅಂಗುಲ’ ಚಿತ್ರ ಕಾಲಿಟ್ಟಿದ್ದು ಅಭಿಪ್ರಾಯ ಉತ್ತಮವಾಗಿರುವುದು.
Pingback: 여우코믹스
Pingback: syarat cpns 2021/2022