ನೃತ್ಯ ನಿರ್ದೇಶಕ ಕಂ ನಿರ್ದೇಶಕ ಕಪಿಲ್ ಅವರ ಕೆಲವು ಸಿನಿಮಾಗಳು ಸೆಟ್ಟೇರಿ ಚಿತ್ರ ಸಂಪೂರ್ಣ ಆಗಿ ಬಿಡುಗಡೆಗೆ ಕಾಯುತ್ತಿದೆ. ‘ಹಳ್ಳಿ ಸೊಗಡು’ ಸಿನಿಮಾದಿಂದ ನೃತ್ಯ ನಿರ್ದೇಶಕ ಎಂ.ಆರ್. ಕಪಿಲ್ ನಿರ್ದೇಶಕನ ಪಟ್ಟ ಅಲಂಕರಿಸಿದರು. ಆಮೇಲೆ ಕಾಫಿ ಕಟ್ಟೆ, ಫಲಿತಾಂಶ, ಹಸಿವು ಮತ್ತು ಅರಿವು ನಿರ್ದೇಶನದ ಸಿನಿಮಾಗಳು ಬಿಡುಗಡೆಯ ಹಾದಿಯಲ್ಲಿವೆ. ಈಗ ಅವರು ‘ಅತ್ಯುತ್ತಮ’ ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಕಪಿಲ್ ನೂರಕ್ಕೂ ಹೆಚ್ಚು ಕನ್ನಡ ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿದವರು. ಮೊದಲ ಸಿನಿಮಾ ‘ಹಳ್ಳಿ ಸೊಗಡು’ ಚಿತ್ರದಲ್ಲಿ ಹಾಡು ಹಾಗೂ ನೃತ್ಯದ ಬಗ್ಗೆ ಕಾಳಜಿ ವಹಿಸಿ ಸಿನಿಮಾ ಮಾಡಿದ್ದರು. ಈಗ ಅವರು ಯಾರು ‘ಅತ್ಯುತ್ತಮ’ ಈ ಸಮಾಜದಲ್ಲಿ ಎಂದು ತಿಳಿಸಿಕೊಡಲಿದ್ದಾರೆ. ವಿಜಯಪುರದ ಶ್ರೀಮತಿ ಸುನೀತಾ ಎಸ್ ಜೇವರ್ಗಿ, ಚಿಕ್ಕಮಗಳೂರಿನ ಪುಷ್ಪಲತ ಕುಡಲೂರು ಮತ್ತು ವೀಣ ಶ್ರೀನಿವಾಸ್ ಹಾಸನದವರು ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ.
ಎಂ.ಆರ್. ಕಪಿಲ್ ಹೊಸ ತಂಡದೊಂದಿಗೆ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಬಿ.ಎಂ.ಎಸ್ ಸಿನಿ ಕ್ರಿಯೇಷನ್ ‘ಅತ್ಯುತ್ತಮ’ ಚಿತ್ರಕ್ಕೆ ಶಿವಕುಮಾರ್ ಜೇವರ್ಗಿ ಅವರ ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳು ಇರಲಿದೆ. ದಿನೇಶ್ ಈಶ್ವರ್ ಸಂಗೀತ, ಸಿ.ನಾರಾಯಣ್ ಛಾಯಾಗ್ರಹಣ, ಆರ್.ಡಿ ರವಿ ಸಂಕಲನ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಇನ್ನು ಕಲಾವಿದರಾಗಿ ಶಿವಪ್ಪ, ಶಿವಕುಮಾರ ಜೇವರ್ಗಿ, ಶ್ರೀನಿವಾಸ್ ಕೆ.ಎಂ ಹಾಗೂ ಇತರರು ಅಭಿನಯ ಮಾಡಲಿದ್ದಾರೆ.





Pingback: pre-construction termite treatment
Pingback: Facebook Light