‘ಬ್ಲಾಕ್ ಬಸ್ಟರ್’ ಚಿತ್ರದ ಟೈಟಲ್ ಬಿಡುಗಡೆ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರಳಿ

ಇತ್ತೀಚೆಗೆ ಬರುತ್ತಿರುವ ಬಹುತೇಕ ಚಿತ್ರಗಳು ತಮ್ಮ ಟೈಟಲ್ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಆ ಸಾಲಿಗೆ “ಬ್ಲಾಕ್ ಬಸ್ಟರ್” ಚಿತ್ರತಂಡ ಕೂಡ ಸೇರಿಕೊಂಡಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಈ ಬ್ಲಾಕ್ ಬಸ್ಟರ್ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಶುಭವನ್ನು ಕೋರಿದ್ದಾರೆ.

ಅಕ್ಷಯ್ ಗೋಲ್ಡ್ ಕಂಪನಿ ಅರ್ಪಿಸಿ , ಎಸ್. ಜಿ. ಎಂಟರ್ಟೈನ್ಮೆಂಟ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬ್ಲಾಕ್ ಬಸ್ಟರ್ ಚಿತ್ರವನ ಸತೀಶ್ ಗೌಡ ಹಾಗೂ ಸ್ನೇಹಿತರು ನಿರ್ಮಿಸುತ್ತಿದ್ದು ಈ ಚಿತ್ರವನ್ನು ಯುವ ನಿರ್ದೇಶಕ ಉದಯ್ ಸಾರಥ್ಯ ವಹಿಸಿಕೊಂಡಿದ್ದಾರೆ.

ಸುಮಾರು ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಸಹಾಯಕ ಹಾಗೂ ಸಹ ನಿರ್ದೇಶನದ ಅನುಭವ ಹೊಂದಿರುವ ಉದಯ್ ಈ ಚಿತ್ರದ ಶೀರ್ಷಿಕೆಯನ್ನು ಬಹಳ ಆಲೋಚನೆ ಮಾಡಿ ಪ್ರಸ್ತುತ ಟ್ರೆಂಡ್ ಗೆ ತಕ್ಕಂತೆ ಇಟ್ಟಿದ್ದು , ಬಹಳಷ್ಟು ವಿಶೇಷತೆಗಳು ಈ ಚಿತ್ರದಲ್ಲಿ ಇದೆಯಂತೆ.

ಈ ಚಿತ್ರಕ್ಕಾಗಿ ಸ್ಟಾರ್ ನಟನನ್ನು ಜೊತೆ ಮಾತುಕತೆ ಕೂಡ ನಡೆದಿದ್ದು , ಅತೀ ಶೀಘ್ರದಲ್ಲಿ ಅವರ ಹೆಸರನ್ನು ಅನಾವರಣಗೊಳಿಸಲಿದ್ದಾರೆ. ಉಳಿದಂತೆ ತಾರಾಗಣ ಹಾಗೂ ತಾಂತ್ರಿಕ ವರ್ಗಗಳ ಆಯ್ಕೆಗಳನ್ನು ನಡೆಯಲಿದ್ದು , ಸದ್ಯದಲ್ಲೇ ಹೆಚ್ಚಿನ ಮಾಹಿತಿಗಳನ್ನು ಚಿತ್ರ ತಂಡ ನೀಡಲಿದೆಯಂತೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!