ಚಲನಚಿತ್ರ ಭಂಡಾರ ಸ್ಥಾಪನೆ

ಕರ್ನಾಟಕ ಸರ್ಕಾರವು ಚಲನಚಿತ್ರರಂಗದ ವಿವಿಧ ವಲಯಗಳಲ್ಲಿ ಪರಿಣಿತಿ ಹೆಚ್ಚಿಸಲು ತರಬೇತಿ, ಕಾರ್ಯಾಗಾರ, ವಿಚಾರ ಸಂಕಿರಣ ನಡೆಸಲು ಹಾಗೂ ಕನ್ನಡ ಚಲನಚಿತ್ರಗಳ ಸಂಶೋಧನೆ ಅಧ್ಯಯನ ಚಟುವಟಿಕೆಗಳನ್ನು ನಡೆಸುವುದು ಮತ್ತು ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನವನ್ನು ಒಳಗೊಂಡ ಚಲನಚಿತ್ರ ಭಂಡಾರವನ್ನು ಸ್ಥಾಪಿಸುವುದು, ಹೀಗೆ ಇನ್ನಿತರ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು 2009ರ ಫೆಬ್ರವರಿ ಮಾಹೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯನ್ನು ಹೊಸದಾಗಿ ಸ್ಥಾಪಿಸಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿಯು ಸಹ ಈ ನಿಟ್ಟಿನಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಾ ಬಂದಿದೆ. ಅಕಾಡೆಮಿಯ ಧ್ಯೇಯೋದ್ದೇಶಗಳಲ್ಲಿ ಒಂದಾದ ಚಲನಚಿತ್ರ ಭಂಡಾರವನ್ನು ಸ್ಥಾಪಿಸುವ ಸಲುವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಆರ್ಥಿಕನೆರವು ಕೋರಲಾಯಿತು.

ಇದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಚಲನಚಿತ್ರ ಭಂಡಾರ ಸ್ಥಾಪನೆಗೆ ಒಪ್ಪಿ, ರೂ.1.00 ಕೋಟಿ ಅನುದಾನವನ್ನು ದಿನಾಂಕ : 22.06.2011 ರಂದು ಅಕಾಡೆಮಿಗೆ ನೀಡಿ ರೂ.1.00 ಕೋಟಿಯನ್ನು ನಿಶ್ಚಿತ ಠೇವಣಿಯಲ್ಲಿ ತೊಡಗಿಸಿ ಇದರಿಂದ ಬರುವ ಬಡ್ಡಿ ಹಣದಿಂದ ಚಲನಚಿತ್ರ ಭಂಡಾರದ ನಿರ್ವಹಣೆ ಮಾಡಲು ಕರಾರು ಮಾಡಿಕೊಂಡಿದೆ.

ಪ್ರಸ್ತುತ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸುನೀಲ್ ಪುರಾಣಿಕ್‍ರವರು ”ಕರ್ನಾಟಕ ಚಲನಚಿತ್ರ ಅಕಾಡೆಮಿ-ಬಿ.ಡಿ.ಎ ಚಲನಚಿತ್ರ ಭಂಡಾರ” ಸ್ಥಾಪಿಸಲು ಚಾಲನೆ ನೀಡಿರುತ್ತಾರೆ.

ಈ ಚಲನಚಿತ್ರ ಭಂಡಾರವನ್ನು ನಂದಿನಿ ಲೇಔಟ್‍ನ ಕರ್ನಾಟಕ ಚಲನಚಿತ್ರ ಅಕಾಡೆಮಿ ಕಛೇರಿ ಇರುವ ಕನ್ನಡ ಚಲನಚಿತ್ರ ಅಮೃತೋತ್ಸವ ಭವನದ ನೆಲ ಮಹಡಿಯಲ್ಲಿ ಸ್ಥಾಪಿಸಲಾಗುತ್ತಿದೆ. ಇದಕ್ಕೆ ಸರ್ಕಾರ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಒಪ್ಪಿಗೆ ನೀಡಿದೆ.

ಹಾಗೆಯೇ ಚಲನಚಿತ್ರ ಭಂಡಾರವನ್ನು ಯಾವ ರೀತಿ ಸಜ್ಜುಗೊಳಿಸಬೇಕೆಂಬ ಬಗ್ಗೆ ಸಲಹೆ ಅಭಿಪ್ರಾಯಕ್ಕಾಗಿ ಈ ಕ್ಷೇತ್ರದಲ್ಲಿ ಪರಿಣಿತರಿರುವ ಶ್ರೀ ಎನ್.ವಿದ್ಯಾಶಂಕರ್, ಅಂತರರಾಷ್ಟ್ರೀಯ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರು, ಶ್ರೀ ಮುರುಳಿಧರ ಖಜಾನೆ, ಹಿರಿಯ ಪತ್ರಕರ್ತರು, ಶ್ರೀ ಸುರೇಶ್ ಮೂನ, ಬೆಂಗಳೂರು ನಗರ ಇತಿಹಾಸಕಾರರು, ಶ್ರೀ ಅರುಣ್ ಸಾಗರ್, ಕಲಾ ನಿರ್ದೇಶಕರು, ಶ್ರೀ ಅಶೋಕ್ ಕಶ್ಶಪ್, ಚಲನಚಿತ್ರ ನಿರ್ದೇಶಕರು ಹಾಗೂ ಸಿನಿಮೊಟೋಗ್ರಾಫರ್ ಇವರನ್ನು ಒಳಗೊಂಡ “ಕರ್ನಾಟಕ ಚಲನಚಿತ್ರ ಅಕಾಡೆಮಿ-ಬಿ.ಡಿ.ಎ ಚಲನಚಿತ್ರ ಭಂಡಾರ” ಸಲಹಾ ಸಮಿತಿಯನ್ನು ರಚಿಸಲಾಗಿದೆ. ಸದರಿ ಸಲಹಾ ಸಮಿತಿಯು ಈಗಾಗಲೇ ಎರಡು ಬಾರಿ ಸಭೆ ಸೇರಿ ಹಲವಾರು ಸಲಹೆ ಅಭಿಪ್ರಾಯಗಳನ್ನು ನೀಡಿದೆ.

ಅದರನ್ವಯ ಪೂನಾದಲ್ಲಿರುವ ಭಾರತದ ರಾಷ್ಟ್ರೀಯ ಚಲನಚಿತ್ರ ಪ್ರಾಚ್ಯಾಗಾರ ಮತ್ತು ಮುಂಬೈಯಲ್ಲಿರುವ ಭಾರತೀಯ ಚಲನಚಿತ್ರಗಳ ರಾಷ್ಟ್ರೀಯ ಸಂಗ್ರಹಾಲಯ ಮಾದರಿಯಲ್ಲಿ “ಕರ್ನಾಟಕ ಚಲನಚಿತ್ರ ಅಕಾಡೆಮಿ-ಬಿ.ಡಿ.ಎ ಚಲನಚಿತ್ರ ಭಂಡಾರ” ಸ್ಥಾಪಿಸಲು ಉದ್ದೇಶಿಸಿದ್ದು, ಅತ್ಯಂತ ತ್ವರಿತಗತಿಯಲ್ಲಿ ಈ ಚಲನಚಿತ್ರ ಭಂಡಾರ ಸ್ಥಾಪಿಸಿ, ಕನ್ನಡದ ಹಾಗೂ ಜಗತ್ತಿನ ಎಲ್ಲಾ ಭಾಷೆಗಳ ಶ್ರೇಷ್ಠ ಚಲನಚಿತ್ರಗಳನ್ನು ಸಂಗ್ರಹಿಸಿ ಇದನ್ನು ಡಿಜಿಟಲ್ ಮಾಡಿಸಿ ಆಸಕ್ತರು, ಸಂಶೋಧಕರು ಇದನ್ನು ವೀಕ್ಷಿಸಲು ಅನುಕೂಲ ಮಾಡಿಕೊಡಬೇಕಾಗಿದ್ದು, ಇದಕ್ಕಾಗಿ ಚಲನಚಿತ್ರ ಪ್ರಿಂಟ್‍ಗಳು, ಬೀಟಾ ಪ್ರತಿಗಳು, ಪ್ರಚಾರದ ಸ್ಥಿರಚಿತ್ರಗಳು, ಹಾಡುಗಳ ಪುಸ್ತಕಗಳು, ಕರಪತ್ರಗಳು, ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟ ಪುಸ್ತಕಗಳು, ಸ್ಥಿರಚಿತ್ರಗಳು sಲಾಬಿ ಕಾಡ್ರ್ಸ್, ಒಟ್ಟಿನಲ್ಲಿ ರಾಜ್ಯದ ಚಲನಚಿತ್ರ ಸಂಸ್ಕೃತಿಗೆ ಸಂಬಂಧಿಸಿದಂತೆ ಸಿಗುವ ಎಲ್ಲವನ್ನು ಪಡೆಯಬೇಕಾಗಿದೆ.

ಆದ್ದರಿಂದ ಚಲನಚಿತ್ರ ಸಂಬಂಧಿತ ಎಲ್ಲ ಸಂಗ್ರಹಯೋಗ್ಯ ವಸ್ತುಗಳನ್ನು ಸಂಗ್ರಹಿಸಲು ಅಕಾಡೆಮಿ ಉದ್ದೇಶಿಸಿದೆ. ತಮ್ಮಲ್ಲಿ ಸಂಗ್ರಹಯೋಗ್ಯವಾದ ಅಪರೂಪದ ಕನ್ನಡ ಚಲನಚಿತ್ರಗಳ ಪ್ರಿಂಟ್‍ಗಳು, ಭಿತ್ತಿಪತ್ರಗಳು, ಹಾಡು ಮತ್ತು ಗೀತೆಗಳು, ಅಪ್ರಕಟಿತ ಪುಸ್ತಕಗಳು, ಚಿತ್ರಕಥೆ ಮತ್ತು ಸಂಭಾಷಣೆಗಳು, ಚಲನಚಿತ್ರ ಸಂಬಂಧಿತ ಪುಸ್ತಕಗಳು, ಕೊಡವ, ಕೊಂಕಣಿ, ಬಂಜಾರ, ತುಳು ಮತ್ತು ಬ್ಯಾರಿ ಸೇರಿದಂತೆ ಕರ್ನಾಟಕದ ಇತರ ಭಾಷೆ ಗಳಲ್ಲಿ ತಯಾರಾದ ಚಲನಚಿತ್ರಗಳಿಗೆ ಸಂಬಂಧಿಸಿದ ಪುಸ್ತಕಗಳು ಸೇರಿದಂತೆ೬ ತಮ್ಮಲ್ಲಿರುವ ಸಂಗ್ರಹಯೋಗ್ಯ ವಸ್ತುಗಳನ್ನು, ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ಥಾಪಿಸಲು ಉದ್ದೇಶಿಸಿರುವ “ಕರ್ನಾಟಕ ಚಲನಚಿತ್ರ ಅಕಾಡೆಮಿ-ಬಿ.ಡಿ.ಎ ಚಲನಚಿತ್ರ ಭಂಡಾರ”ಕ್ಕಾಗಿ ನೀಡಲು ಕೋರಿದೆ.

ಇದರಿಂದ ರಾಜ್ಯದ ಚಲನಚಿತ್ರ ಸಂಸ್ಕøತಿಯನ್ನು ಸಂರಕ್ಷಿಸಲು ಹಾಗೂ ವಿಶೇಷವಾಗಿ ಕನ್ನಡ ಚಿತ್ರರಂಗದ ಬಗ್ಗೆ ಸಂಶೋಧನೆ ಮಾಡಲು, ಉತ್ತೇಜಿಸಲು ದಾಖಲೀಕರಣಕ್ಕೆ ನೆರವಾಗಲು ಬಯಸುವವರು ತಮ್ಮಲ್ಲಿರುವ ಚಲನಚಿತ್ರಕ್ಕೆ ಸಂಬಂಧಿಸಿದ ಅಪರೂಪದ ಸಂಗ್ರಹಯೋಗ್ಯ ವಸ್ತುಗಳನ್ನು, ದಾಖಲೆಗಳನ್ನು ನೀಡಲು ಕೆಳಕಂಡ ವಿಳಾಸದಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಕಛೇರಿಯನ್ನು ವೈಯಕ್ತಿಕವಾಗಿ ಅಥವಾ ಇಮೇಲ್, ದೂರವಾಣಿ ಮೂಲಕ ಸಂಪರ್ಕಿಸಬಹುದು.
ಕಛೇರಿ ವಿಳಾಸ:

Be the first to comment

Leave a Reply

Your email address will not be published. Required fields are marked *

Translate »
error: Content is protected !!