ಅಯೋಗ್ಯ, ಬ್ರಹ್ಮಚಾರಿ ಚಿತ್ರಗಳ ಸಕ್ಸಸ್ ನಂತರ ನಟ ನೀನಾಸಂ ಸತೀಶ್ ಅವರು ಪೆಟ್ರೋಮ್ಯಾಕ್ಸ್ ನಲ್ಲಿ ನಟಿಸಲು ರೆಡಿಯಾಗಿದ್ದಾರಂತೆ. ಈ ಚಿತ್ರಕ್ಕಾಗಿಯೇ ಇತ್ತೀಚೆಗೆ ಅವರು ಜಿಮ್ನಲ್ಲಿ ಕಸರತ್ತು ಮಾಡಿ ಮೈಯನ್ನು ಉರಿಗೊಳಿಸಿದ್ದಾರೆ. ಪೆಟ್ರೋಮ್ಯಾಕ್ಸ್ ಅನ್ನು ಸಿದ್ಲಿಂಗು, ನೀರ್ದೋಸೆ ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್ಪ್ರಸಾದ್ ಅವರು ನಿರ್ದೇಶಿಸಿದ್ದು, ಈ ಹಿಂದೆ ಕಿರುತೆರೆಯಲ್ಲಿ ಜೋಡಿಯಾಗಿ ಮೋಡಿ ಮಾಡಿದ್ದ ನೀನಾಸಂ ಸತೀಶ್ ಹಾಗೂ ವಿಜಯ್ಪ್ರಸಾದ್ ಅವರು ಬೆಳ್ಳಿತೆರೆ ಮೇಲೆ ಮೋಡಿ ಮಾಡಲು ಹೊರಟಿದ್ದಾರೆ.
ನೀನಾಸಂ ಸತೀಶ್ ಅವರ ಪಿಕ್ಚರ್ ಹೌಸ್ ಬ್ಯಾನರ್ನಡಿ ನಿರ್ಮಾಣವಾಗುತ್ತಿರುವ ಮೆಟ್ರೋಮ್ಯಾಕ್ಸ್ನಲ್ಲಿ ಮತ್ತೊಬ್ಬ ನಿರ್ಮಾಪಕರು ಬಂಡವಾಳ ಹೂಡುವ ಸಾಧ್ಯತೆಗಳಿವೆ. ಈ ಚಿತ್ರದ ಶೂಟಿಂಗ್ ಅಕ್ಟೋಬರ್ ಎರಡನೇ ವಾರದಿಂದ ಆರಂಭವಾಗಲಿದ್ದು ಮೊದಲ ಹಂತದಲ್ಲಿ ಮೈಸೂರಿನಲ್ಲಿ ಚಿತ್ರೀಕರಣ ನಡೆಸಲು ಸಿದ್ಧತೆ ನಡೆಸಲಾಗಿದೆ.
ನಿರ್ದೇಶಕ ವಿಜಯಪ್ರಸಾದ್ ಮಾತನಾಡಿ, ಈ ಚಿತ್ರವನ್ನು 2013ರಲ್ಲೇ ತಯಾರು ಮಾಡಲು ಪ್ಲಾನ್ ಮಾಡಿದ್ದಾನಾದರೂ ಕಾಲ ಕೂಡಿ ಬಂದಿರಲಿಲ್ಲ, ಈಗ ನೀನಾಸಂ ಸತೀಶ್ ದೊಡ್ಡ ಸ್ಟಾರ್ ಆಗಿದ್ದು ಅವರ ನೇಟಿವಿಟಿಗೆ ತಕ್ಕಂತೆ ಕಥೆಯನ್ನು ರೂಪಾಂತರಗೊಳಿಸಿದ್ದೇನೆ. ನಾಲ್ವರು ಅನಾಥ ವ್ಯಕ್ತಿಗಳ ಸುತ್ತ ಚಿತ್ರದ ಕಥೆ ನಡೆಯುತ್ತದೆ. ನೀನಾಸಂ ಸತೀಶ್, ಅರುಣ್, ನಾಗಭೂಷಣ್ ಹಾಗೂ ಹೇಮಾದತ್ ಈ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪೆಟ್ರೋಮ್ಯಾಕ್ಸ್ ಎಂದರೆ ಬೆಳಕು ನೀಡುವ ಸಾಧನ ಎನ್ನುತ್ತಾರೆ, ನಾಲ್ವರು ನಾಯಕರ ಜೀವನದ ಸುತ್ತ ಸುತ್ತುವ ಈ ಚಿತ್ರಕ್ಕೆ ಟೈಟಲ್ ಸೂಕ್ತವಾಗಿದೆ. ನಾನು ಈ ಹಿಂದೆ ಮಾಡಿದ್ದ ಚಿತ್ರಗಳಲ್ಲಿದ್ದ ಹಾಸ್ಯ, ಭಾವನೆ, ಮಾನವೀಯ ಮೌಲ್ಯ, ಬುದ್ಧಿ ಹಾಗೂ ಸಾಮಾಜಿಕ ಅಂಶಗಳು ಈ ಚಿತ್ರದಲ್ಲೂ ಇರುತ್ತದೆ ಎಂಬ ಮಾಹಿತಿ ನೀಡಿದರು.
ನಟ ನೀನಾಸಂ ಸತೀಶ್ ಮಾತನಾಡಿ, ನಾನು ಈ ಹಿಂದೆ ವಿಜಯಪ್ರಸಾದ್ ಅವರೊಂದಿಗೆ ಕೆಲಸ ಮಾಡಿದ್ದೇನೆ, ನಾನು ನಾನು ಅವರ ಬರವಣಿಗೆಯ ದೊಡ್ಡ ಅಭಿಮಾನಿ. ಅದೇ ಕಾರಣಕ್ಕೆ ನಾನು ಈ ಪ್ರಾಜೆಕ್ಟ್ಗೆ ಸೈನ್ ಹಾಕಿದೆ. ಈ ಚಿತ್ರ ನೋಡುತ್ತಿರುವ ಪ್ರೇಕ್ಷಕರನ್ನು ಒಂದು ಫನ್ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.
ಇದರ ಜೊತೆಗೆ ಪ್ರತಿಯೊಬ್ಬರ ಜೀವನದಲ್ಲಿ ಸಂಬಂಧಗಳು ಯಾವ ರೀತಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಚಿತ್ರದ ಕಥೆಯ ಮೂಲಕ ನಿರ್ದೇಶಕರು ಹೇಳುತ್ತಿದ್ದಾರೆ ಎಂದು ಹೇಳಿದರು. ಈ ಚಿತ್ರದ ನಾಯಕಿಯಾಗಿ ಮೊದಲು ಅದಿತಿ ಪ್ರಭುದೇವಾರನ್ನು ಆಯ್ಕೆ ಮಾಡಿಕೊಂಡಿದ್ದಾರಾದರೂ ಅವರು ಬೇರೆ ಚಿತ್ರಗಳಲ್ಲಿ ಬ್ಯುಜಿಯಾಗಿರುವುದರಿಂದ ಬೇರೆ ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡ ತೊಡಗಿದೆ.
Pingback: playing cornhole