ಜೀ ಕನ್ನಡದಲ್ಲಿ ಹೊಸ ಧಾರಾವಾಹಿ“ರಾಮಭಕ್ತ ಹನುಮಂತ”

ಜನಪ್ರಿಯ ಪೌರಾಣಿಕ ಧಾರಾವಾಹಿಗಳನ್ನು ಆನಂದಿಸುತ್ತಿರುವ ಜೀ ಕನ್ನಡ ವೀಕ್ಷಕರಿಗೆ ಇದೀಗ ಮತ್ತೊಂದು ಮಹೋನ್ನತ ಧಾರಾವಾಹಿ “ರಾಮಭಕ್ತ ಹನುಮಂತ” ವೀಕ್ಷಿಸುವ ಅವಕಾಶ ಲಭಿಸಿದೆ.

ಅಕ್ಟೋಬರ್ 5, 2020ರಂದು ಸೋಮವಾರ ಸಂಜೆ 5.30ರಿಂದ 6.00 ಗಂಟೆವರೆಗೆ ಪ್ರಸಾರವಾಗಲಿರುವ ಈ ಧಾರಾವಾಹಿಯು ಬಾಲ ಹನುಮಂತನು ಹೇಗೆ ರಾಮಭಕ್ತನಾಗಿ ಪರಿವರ್ತನೆಯಾಗುತ್ತಾನೆ ಎಂದು ನಿರೂಪಿಸುತ್ತದೆ. ಹನುಮಂತ ತನ್ನ ಅಪಾರ ಶಕ್ತಿ, ರಾಮನ ಭಕ್ತಿಯಿಂದ ಭಾರತೀಯರ ಮನೆ ಮನೆಯಲ್ಲೂ ಪೂಜಿಸುವ ದೇವರು. ಹನುಮನು ಹಲವು ಜನರಿಗೆ ಸ್ಫೂರ್ತಿದಾಯಕ ದೇವರು. ಹನುಮನ ಲೀಲೆಗಳು ಹೊಸ ಸಾಹಸಗಳಿಗೆ ಪ್ರೇರಣೆ.

ಬಾಲ ಹನುಮಂತನು ಬಹಳ ಮುಗ್ಧ, ಆಕರ್ಷಕ ವ್ಯಕ್ತಿತ್ವ, ಕುತೂಹಲದ ಗಾಳಿಯಷ್ಟು ವೇಗವಾಗಿ ಹಾರಬಲ್ಲ ವ್ಯಕ್ತಿತ್ವ ಹೊಂದಿರುತ್ತಾನೆ. ಬಾಲ ಹನುಮಂತನ ಮೇಲೆ ಆತನ ತಾಯಿ ಅಂಜನಿ ಅತ್ಯಂತ ಪ್ರಭಾವ ಬೀರುತ್ತಾಳೆ. ಹನುಮಂತನ ವ್ಯಕ್ತಿತ್ವ ರೂಪಿಸುವಲ್ಲಿ ತಾಯಿಯ ಪಾತ್ರ ಮುಖ್ಯವಾದುದು.

ಹನುಮಂತನ ಎಲ್ಲ ಲೀಲೆಗಳನ್ನೂ, ವಾಲಿ ಸುಗ್ರೀವ, ರಾಮರೊಂದಿಗೆ ಹನುಮಂತನ ಜೀವನ ಪ್ರಯಾಣವನ್ನೂ ಈ ಧಾರಾವಾಹಿ ಶಕ್ತಿಯುತವಾಗಿ ಬಿಂಬಿಸುತ್ತದೆ. ಹಲವು ಐತಿಹಾಸಿಕ ಮತ್ತು ಪೌರಾಣಿಕ ಧಾರಾವಾಹಿಗಳನ್ನು ಆನಂದಿಸುತ್ತಿರುವ ಜೀ ಕನ್ನಡ ವೀಕ್ಷಕರಿಗೆ ಇದೀಗ ಈ ಧಾರಾವಾಹಿ ಮತ್ತಷ್ಟು ಮನರಂಜನೆ ನೀಡುವುದರಲ್ಲಿ ಸಂಶಯವಿಲ್ಲ.

ರಾಮಭಕ್ತ ಹನುಮಂತ ಧಾರಾವಾಹಿ ಪ್ರಾರಂಭ ಕುರಿತು ಜೀ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, “ಜೀ ಕನ್ನಡ ಕಿರುತೆರೆಯಲ್ಲಿ ಹಲವು ಪ್ರಥಮಗಳನ್ನು ಸಾಧಿಸಿದೆ. ಜನರ ಅಭಿರುಚಿಗೆ ಅನುಗುಣವಾಗಿ ಫಿಕ್ಷನ್ ಹಾಗೂ ನಾನ್-ಫಿಕ್ಷನ್ ಕಾರ್ಯಕ್ರಮಗಳನ್ನು ರೂಪಿಸಿದ್ದು ಹಲವು ದಾಖಲೆಗಳನ್ನು ನಿರ್ಮಿಸಿದೆ. ಈ ನಿಟ್ಟಿನಲ್ಲಿ ರಾಮಭಕ್ತ ಹನುಮಂತ ಧಾರಾವಾಹಿ ಕೂಡಾ ಜನರನ್ನು ರಂಜಿಸುತ್ತದೆ ಎಂಬ ಭರವಸೆ ನಮ್ಮದು” ಎಂದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!