ಭಗತ್ ಸಿಂಗ್ ಜೀವನಾಧಾರಿತ ಸಿನಿಮಾ

ಸ್ಯಾಂಡಲ್ ವುಡ್​ನಲ್ಲಿ ಗಮನ ಸೆಳೆದಿದ್ದ ನಿರ್ದೇಶಕ ಆದತ್ ಕನ್ನಡ, ತೆಲುಗು ಹಾಗು ತಮಿಳಿನಲ್ಲಿ ಭಗತ್ ಸಿಂಗ್ ಬಗ್ಗೆ ಕಥೆ ಹೇಳೋದಿಕ್ಕೆ ಹೊರಟ್ಟಿದ್ದಾರೆ.ಸದ್ಯ ಭಗತ್ ಸಿಂಗ್ ಅವತಾರದಲ್ಲಿ ಇರುವ ಕ್ರಾಂತಿ ವೀರ ಸಿನಿಮಾದ ಪೋಸ್ಟರ್​ನನ್ನ ಚಿತ್ರತಂಡ ರಿವೀಲ್ ಮಾಡಿದೆ.

ಕೆಚ್ಚೆದೆಯ ವೀರ ಭಗತ್ ಸಿಂಗ್ ಅವರ ಹುಟ್ಟು ಹಬ್ಬಕ್ಕೆ.  ‘ಕ್ರಾಂತಿ ವೀರ’ ಸಿನಿಮಾದ ಶೀರ್ಷಿಕೆ ಅನಾವರಣ ಆಗಿದ್ದು, ಈ ಚಿತ್ರ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕಥೆಯನ್ನು ಒಳಗೊಂಡಿದೆಯಂತೆ.

ಭಗತ್ ಸಿಂಗ್ ಪಾತ್ರದಲ್ಲಿ ಅಜಿತ್

ಭಗತ್ ಸಿಂಗ್ ಪಾತ್ರದಲ್ಲಿ ಅಜಿತ್ ಜಯರಾಜ್ ಕಾಣಿಸಿಕೊಳ್ಳುತ್ತಿದ್ದು, ಈ ಪಾತ್ರಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನ ಮಾಡಿಕೊಂಡಿದ್ದಾರೆ. 90 ಕೆಜಿ ದಪ್ಪ ಇದ್ದ ಅಜಿತ್ ಜಯರಾಜ್ ಈ ಭಗತ್ ಸಿಂಗ್ ಪಾತ್ರಕ್ಕಾಗಿ 20ಕೆಜಿ ತೂಕ ಇಳಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರಂತೆ‌. ಈ ಚಿತ್ರದಲ್ಲಿ ಅಜಿತ್ ಜಯರಾಜ್ ಎರಡು ಶೇಡ್​ನಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಭಗತ್ ಸಿಂಗ್ ಅವತಾರದಲ್ಲಿ ಇರುವ ಕ್ರಾಂತಿ ವೀರ ಸಿನಿಮಾದ ಪೋಸ್ಟರ್​ನನ್ನ ಚಿತ್ರತಂಡ ರಿವೀಲ್ ಮಾಡಿದ

ಅಜಿತ್ ಅಲ್ಲದೇ ಪ್ರಮೋದ್ ಶೆಟ್ಟಿ, ಡಾ ನಾಗೇಂದ್ರ ಪ್ರಸಾದ್ , ಭವಾನಿ ಪ್ರಕಾಶ್, ಜಾನವಿ ಜ್ಯೋತಿ, ಧರ್ಮ, ಜ್ಯೋ ಸೈಮನ್, ನಿರಂಜನ್ ಹೀಗೆ ಸಾಕಷ್ಟು ತಾರ ಬಳಗ ಈ ಚಿತ್ರದಲ್ಲಿದೆ. ಆಲ್ ಮೋಸ್ಟ್ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್​​ನಲ್ಲಿರುವ ಕ್ರಾಂತಿ ವೀರ ಸಿನಿಮಾ, ಈ ವರ್ಷದ ಕೊನೆಯ ತಿಂಗಳಿನಲ್ಲಿ ರಿಲೀಸ್ ಆಗೋದಿಕ್ಕೆ ರೆಡಿಯಾಗುತ್ತಿದೆ.

ಈ ಚಿತ್ರದಲ್ಲಿ ಒಂಬತ್ತು ಹಾಡುಗಳಿದ್ದು, ನಿರ್ದೇಶಕ ಆದಾತ್ ಸೇರಿ, ಗೌಸ್ ಪೀರ್, ಯೋಗಿ ಈ ಸಿನಿಮಾ ಸಾಹಿತ್ಯ ಬರೆದಿದ್ದು, ಪ್ರತಾಪ್ ಸಂಗೀತ ನೀಡಿದ್ದಾರೆ. ಕೆ.ಎಂ ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ
ಚಂದ್ರಕಲಾ ರೋಥೋಡ್, ಪ್ರಶಾಂತ್ ಕಲ್ಲೂರು, ತ್ರಿವಿಕ್ರಮ್ ಸಪ್ಲೈಯಾ ಈ ಮೂರು ಜನ ನಿರ್ಮಾಪಕರು ಸೇರಿ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.

ನಿರ್ದೇಶಕ ಆದತ್ ಹೇಳುವ ಪ್ರಕಾರ ಈ ಸಿನಿಮಾ , ಕನ್ನಡ, ತೆಲುಗು ಹಾಗು ತಮಿಳು ಭಾಷೆಯಲ್ಲಿ ಮೂಡಿ ಬರಲಿದೆಯಂತೆ. ಮೊದಲು ನವೆಂಬರ್​ನಲ್ಲಿ ಹಲವು ಫಿಲ್ಮ್ ಫೆಸ್ಟಿವಲ್​ಗೆ ಕಳುಹಿಸೋಕ್ಕೆ ಪ್ಲಾನ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಕ್ರಾಂತಿ ವೀರ ಸಿನಿಮಾ‌ ಪೋಸ್ಟರ್ ಗಮನ ಸೆಳೆಯುತ್ತಿದ್ದು ಗೆಲ್ಲುವ ಸೂಚನೆ ಕಾಣುತ್ತಿದೆ‌.

This Article Has 1 Comment
  1. Pingback: ae

Leave a Reply

Your email address will not be published. Required fields are marked *

Translate »
error: Content is protected !!