#ಲಾಸ್ಟ್_ಸೀನ್ ಆಲ್ಬಮ್ ಹಾಡಿಗೆ ಅದ್ಬುತ ಪ್ರತಿಕ್ರಿಯೆ

ವಿನಾಯಕ್ ಎನ್ ನಿರ್ದೇಶನದ ‘ಲಾಸ್ಟ್ ಸೀನ್’ ಎಂಬ ಪ್ಯಾನ್ ಇಂಡಿಯಾ ವಿಡಿಯೋ ಹಾಡು ಬಿಡುಗಡೆಯಾಗಿದ್ದು, ನೋಡುಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಿಂದ ಬಿಡುಗಡೆಯಾದ ಈ ವಿಡಿಯೋ ಹಾಡು ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಸಿದ್ದಗೊಂಡಿದೆ.
ಅತ್ಯಾಚಾರಕ್ಕೆ ಒಳಗಾದ ಹುಡುಗಿಯ ನೋವು, ಎಲ್ಲದಕ್ಕಿಂತ ಹೆಚ್ಚಾಗಿ ಅವಳ ಪ್ರೇಮಿಯಾದವನು ಯಾವ ರೀತಿ ವೇದನೆ ಪಡುತ್ತಾನೆ ಎಂಬುದನ್ನು ಈ ವಿಡಿಯೋ ಸಾಂಗ್​ ನಲ್ಲಿ ಹೇಳಲಾಗಿದೆ.
ಈ ಹಾಡನ್ನು ವಿನು ಐಡಿಯಾ ಪ್ರೊಡಕ್ಷನ್ಸ್​ ನಿರ್ಮಾಣ ಮಾಡಿದ್ದು, ಜುಬೇರ್​ ಮೊಹಮದ್​ ಸಂಗೀತ ನೀಡಿದ್ದಾರೆ. ಇನ್ನು ಈ ಹಾಡಿಗೆ ವಾಸುಕಿ ವೈಭವ್ ಕನ್ನಡದಲ್ಲಿ​ ದನಿಯಾಗಿದ್ದು, ಇತರೇ ಭಾಷೆಗಳಲ್ಲಿ ಜುಬೇರ್​ ಮೊಹಮದ್​ ಹಾಡಿದ್ದಾರೆ.
ಬೆಂಗಳೂರು, ಡಾಬಸಪೇಟೆ ಹಾಗೂ ಮಂಗಳೂರಲ್ಲಿ ಈ ಹಾಡನ್ನು ಚಿತ್ರೀಕರಣ ಮಾಡಲಾಗಿದ್ದು, ವಾಗೀಶ್​ ಆಯುಷ್​ ಹಾಗೂ ಸಂಗೀತಾ ಎಂಬ ನವ ಪ್ರತಿಭೆಗಳು ಅಭಿನಯಿಸಿದ್ದಾರೆ. ನಿರ್ದೇಶಕ ಎನ್ ವಿನಾಯಕ್ ರವರು ಈ ಹಿಂದೆ ‘ಯಶೋಮಾರ್ಗ ಡಾಕುಮೆಂಟರಿ, ‘ಮಿಸ್ಟರ್ ಬೀಜ’ ಎಂಬ ಕಿರುಚಿತ್ರ, ‘ಆಫ್ಟರ್ 8 ಪಿ.ಎಂ’, ‘Salute for solders’ ಎಂಬ ಆಲ್ಬಮ್ ಸಾಂಗ್, ‘K A 16’ ಎಂಬ ವಿಡಿಯೋ ಸೇರಿದಂತೆ ‘ಜನ್ ಧನ್’ ಹಾಗೂ ‘Inject 0.7’ ಚಿತ್ರಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದರು.
ಪ್ರೀತಿಯನ್ನು, ಪ್ರೀತಿಸಿದವರನ್ನು ಕಳೆದುಕೊಂಡವರ ನೋವು, ಪ್ರೀತಿ ಮಾಡಿ ಪ್ರೀತಿಯನ್ನು ಕಳೆದುಕೊಂಡವರಿಗೆ ಗೊತ್ತಿರುತ್ತದೆ. ಅದರ ಮಜಾ ಹಾಗೂ ಕಿಕ್ಕು ಅನುಭವಿಸಿದವರಿಗೆ ಗೊತ್ತು… ನೆನಪು ಯಾವತ್ತು ಅಮರ!!!
ಈ ವಿಡಿಯೋ ನಿಮ್ಮ ಮನಸ್ಸನ್ನು ಒಂದ್ಸಾರಿ ಕರಗಿಸಿ ಅಳು ತರಿಸಿ ಬಿಡುತ್ತದೆ.. ಮಿಸ್ ಮಾಡದೇ ನೋಡಿ.. ಕಾಮೆಂಟ್ ಮಾಡಿ, ಶೇರ್ ಮಾಡಿ..
ಸಾಂಗ್ 👉  https://youtu.be/HDvHzdP7I1Y
Be the first to comment

Leave a Reply

Your email address will not be published. Required fields are marked *

Translate »
error: Content is protected !!