ಕೆಲವೇ ದಿನಗಳ ಹಿಂದೆ ಅದ್ಧೂರಿಯಾಗಿ ನಡೆದಿತ್ತು ‘ಕಸ್ತೂರಿ ನಿವಾಸ’ ಮಾಧ್ಯಮಗೋಷ್ಠಿ. ಅದು ರಾಜ್ ಕುಮಾರ್ ಸಿನಿಮಾ ಶೀರ್ಷಿಕೆ ಎನ್ನುವ ಕಾರಣದಿಂದ ಮುಂದೆ ಅಭಿಮಾನಿಗಳಿಂದ ವಿರೋಧ ಬರುವ ಸಾಧ್ಯತೆಯ ಬಗ್ಗೆ ಅದೇ ವಿಚಾರಿಸಲಾಗಿತ್ತು. ಆದರೆ ಅದಕ್ಕೆ ನಿರ್ಮಾಪಕರ ಹೇಳಿಕೆ ಬೇರೆಯೇ ಆಗಿತ್ತು. ಚಿತ್ರದ ಹೆಸರು ಬರೀ ‘ಕಸ್ತೂರಿ ನಿವಾಸ’ ಎಂದು ಮಾತ್ರ ಅಲ್ಲ; ಬದಲಾಗಿ ‘ರಚಿತಾ ರಾಮ್ ಇನ್ ಕಸ್ತೂರಿ ನಿವಾಸ’ ಎಂದು ಸಮರ್ಥಿಸಲಾಗಿತ್ತು.
ಏನೇ ಸಮರ್ಥನೆ ಮಾಡಿದರೂ ಅಣ್ಣಾವ್ರ ಕಸ್ತೂರಿ ನಿವಾಸವನ್ನು ದಾಟಿ ಮತ್ತೊಂದು ಕಸ್ತೂರಿ ನಿವಾಸ ಎದ್ದು ನಿಲ್ಲಲು ಸಾಧ್ಯವೇ? ಈ ವಿಷಯಕ್ಕೆ ಬಂದರೆ ಮೊದಲು ಈ ಶೀರ್ಷಿಕೆ ಬೇಡ ಎಂದು ಹೇಳಿದ್ದೇ ನಿರ್ದೇಶಕ ದಿನೇಶ್ ಬಾಬು ಅವರಂತೆ! ಡಾ. ರಾಜ್ ಕುಮಾರ್ ವಿಚಾರದಲ್ಲಿ ಅಭಿಮಾನಿಗಳಿಗಿರುವ ಸೆಂಟಿಮೆಂಟ್ ಟಚ್ ಮಾಡುವುದು ಬೇಡ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಆದರೆ ನಿರ್ಮಾಪಕರು ಕೊಟ್ಟ ಸಮರ್ಥನೆ ತೀರ ವಿಚಿತ್ರವಾಗಿದೆ. ತಾವು ಹೆಸರು ರಿಜಿಸ್ಟರ್ ಮಾಡಿರುವುದೇ ‘ರಚಿತಾ ರಾಮ್ ಇನ್ ಕಸ್ತೂರಿ ನಿವಾಸ’ ಎಂದೇ ಎಂದು ಹೇಳಿದ್ದರು. ಆದರೆ ಸಾಮಾನ್ಯವಾಗಿ ಎಲ್ಲ ಸ್ಟಾರ್ ಕಲಾವಿದರ ಸಿನಿಮಾಗಳಿಗೂ ಹೇಳುವಂತೆ ಇದ್ದ ಸ್ಟಾರ್ ಇನ್ ಎನ್ನುವ ಪದವನ್ನು ಶೀರ್ಷಿಕೆಯಾಗಿ ಯಾರು ತಾನೇ ಸ್ವೀಕರಿಸುತ್ತಾರೆ? ಮಾತ್ರವಲ್ಲ, ಟೈಟಲ್ ಬರೆಯುವಾಗಲೂ ಕಸ್ತೂರಿ ನಿವಾಸ ಎನ್ನುವುದನ್ನು ಮಾತ್ರ ದೊಡ್ಡದಾಗಿ ಬರೆದಿಡಲಾಗಿತ್ತು.ಆದರೆ ಅದು ಕೊನೆಗೆ ‘ಕಸ್ತೂರಿ ಮಹಲ್’ ಅಂತ ಮಾಡಿದರು ನಿರ್ಮಾಪಕರು.
ಡೇಟ್ ಖಚಿತ ಮಾಡದೇ ಒಪ್ಪಿದ್ಯಾಕೆ ರಚಿತಾ?
ಅದೆಲ್ಲ ಬಿಡಿ! ರಚಿತಾ ರಾಮ್ ಅವರಿಗೆ ಎಲ್ಲಿ ಹೋಗಿತ್ತು ಬುದ್ಧಿ? ಚಿತ್ರದ ಹೆಸರೇ ನನ್ನ ಹೆಸರಲ್ಲಿದೆ ಎಂದು ಜಂಭ ಕೊಚ್ಚಿಕೊಂಡ ಹುಡುಗಿ ಚಿತ್ರದಲ್ಲಿ ಕೂಡ ರಚಿತಾ ರಾಮ್ ಹೆಸರಿನ ಪಾತ್ರ ಮಾಡುತ್ತಿದ್ದಾರ ಎನ್ನುವುದು ಕೂಡ ಗೊತ್ತಿರಲಿಲ್ಲವೇ? ಅದು ಬಿಡಿ; ಚಿತ್ರ ಒಪ್ಪುವಾಗಲೇ ಶೂಟಿಂಗ್ ದಿನಾಂಕ ಫಿಕ್ಸ್ ಮಾಡಲಾಗಿತ್ತು ತಾನೇ? ಆಗ ಇರದ ಕಾಲ್ಷೀಟ್ ಸಮಸ್ಯೆ ಆಮೇಲೇ ಬಂದಿದ್ದೇಕೆ? ಮಹೂರ್ತದಂದು ದಿನೇಶ್ ಬಾಬು ಅವರಂಥ ನಿರ್ದೇಶಕರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದೇ ಅದೃಷ್ಟ ಎಂದಾಕೆ ಅವರಿಗೂ ಕಾರಣ ಹೇಳದೆ ತಂಡದಿಂದ ಹೊರ ಬಂದಿದ್ದೇಕೆ? ಇದು ನಿರ್ಮಾಪಕರ ಜೊತೆ ನಡೆದಂಥ ತೆರೆಮರೆಯ ಕದನ ಎನ್ನುವುದು ಎಲ್ಲರಿಗೂ ಅರ್ಥವಾಗುವ ಸಂಗತಿ. ಆದರೆ ಯಾರೂ ಹೇಳಿಕೊಳ್ಳುತ್ತಿಲ್ಲ ಅಷ್ಟೇ.
Pingback: Buy Sex Toys Online