‘ಯುವರ್ ಲೈಫ್’ಗೆ ಸಮಂತ ಅಕ್ಕಿನೇನಿ ಅತಿಥಿ ಸಂಪಾದಕಿ

ಇಂದಿನ ಆಧುನಿಕ ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿದೆ. ಸೆಲಬ್ರೆಟಿಗಳಂತೂ ಸದಾ ಫಿಟ್ನೆಸ್ ಮಂತ್ರದಲ್ಲೇ ಮುಳುಗಿರುತ್ತಾರೆ, ತಾವು ಫಿಟ್ ಆಗಿದ್ದರೆ ಮಾತ್ರ ನಮಗೆ ಮನ್ನಣೆ ಅನ್ನುವ ನಾಯಕಿಯರು ಆರೋಗ್ಯಕರ ಬದುಕು ರೂಪಿಸಿಕೊಳ್ಳಲು ಜಿಮ್, ಯೋಗದ ಮೊರೆ ಹೋಗುತ್ತಾರೆ.

ಆರೋಗ್ಯ ಹಾಗೂ ಫಿಟ್ನೆಸ್‍ಗೆ ಹೆಚ್ಚು ಒತ್ತು ನೀಡುವ ಟಾಲಿವುಡ್‍ನ ಮೋಹಕ ತಾರೆ ಸಮಂತಾ ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮೆಗಾಸ್ಟಾರ್ ಕುಟುಂಬದ ಸೊಸೆ ನಟ ರಾಮ್‍ಚರಣ್‍ರ ಪತ್ನಿ ಉಪಾಸನ ಕಮಿನೇನಿ ಕೊನಿಡೇಲ ರೊಂದಿಗೆ ಸೇರಿದಂತೆ ಯುವರ್ ಲೈಫ್co.in ಎಂಬ ವೈಬ್‍ಸೈಟ್ ಅನ್ನು ಸಿದ್ಧಪಡಿಸಿ ಅದರ ಮೂಲಕ ಫಿಟ್‍ನೆಸ್‍ನ ಟಿಪ್ಸ್ ಕೊಡಲು ಹೊರಟಿದ್ದಾರೆ.

ಯುವರ್ ಲೈಫ್co.in ಗೆ ಉಪಾಸನ ವ್ಯವಸ್ಥಾಪಕ ನಿರ್ದೇಶಕರಾಗಿದ್ದು ಉತ್ತಮ ಆರೋಗ್ಯವನ್ನು ರೂಪಿಸಿಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ವೃತ್ತಿಪರ ವೈದ್ಯರು, ಆಹಾರ ತಜ್ಞರು, ಫೆಟ್ನೆಸ್ ತರಬೇತುದಾರರೇ ನೀಡುತ್ತಿರುವುದು ಮತ್ತೊಂದು ವಿಶೇಷ.

ಇಂದಿನ ಒತ್ತಡದ ಜೀವನದಲ್ಲಿ ಟೆನ್ಷನ್‍ನಿಂದ ಹೊರ ಬಂದು ಆರೋಗ್ಯವನ್ನು ಸದೃಢವಾಗಿಸಿಕೊಳ್ಳುವುದು ಹೇಗೆ? ಖಾಯಿಲೆಗಳೇ ಬರದಂತೆ ನಮ್ಮ ದೇಹವನ್ನು ಕಾಪಾಡಿಕೊಳ್ಳುವುದು ಎಂಬ ಬಗ್ಗೆಯೂ ಯುವರ್ ಲೈಫ್co.in ನಲ್ಲಿ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿಗಳು ಸಿಗಲಿದ್ದು ಜನರ ಉತ್ತಮ ಆರೋಗ್ಯವೇ ನಮ್ಮ ಮುಖ್ಯ ಉದ್ದೇಶ ಎಂದು ಉಪಾಸನ ಹೇಳಿದ್ದಾರೆ.

ಟಾಲಿವುಡ್‍ನ ನಂ.1 ಹೀರೋಯಿನ್ ಆಗಿರುವ ಸಮಂತಾ ಅಕ್ಕಿನೇನಿ ಅವರು ಮೊದಲಿನಿಂದ ಫಿಟ್‍ನೆಸ್ ಕಡೆ ಹೆಚ್ಚು ನೀಡುತ್ತಾ ಬಂದಿದ್ದು ಯುವರ್ ಲೈಫ್co.in ನಲ್ಲಿ ಮುಖ್ಯ ಅತಿಥಿ ಸಂಪಾದಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಲಾಕ್‍ಡೌನ್ ಸಮಯದಲ್ಲಿ ಕೃಷಿಯತ್ತ ಗಮನ ಹರಿಸಿದ್ದ ಸಮಂತಾ ಈಗ ಆರೋಗ್ಯದ ಟಿಪ್ಸ್ ಕೊಡಲು ಹೊರಟಿದ್ದಾರೆ. ಭಾರತೀಯ ಕಾರ್ಪೊರೇಟ್ ವಲಯದಲ್ಲಿ 14 ದಶಲಕ್ಷಕ್ಕೂ ಹೆಚ್ಚು ಆರೋಗ್ಯ ಸೇವಾ ಪೂರೈಕೆದಾರರು ಯುವರ್ ಲೈಫ್ ಅನ್ನು ಬೆಂಬಲಿಸುತ್ತಿರುವ ಜಾಲತಾಣಕ್ಕೆ ಅತಿಥಿ ಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿರುವುದು ತುಂಬಾ ಸಂತಸ ತಂದಿದೆ ಎಂದು ಹೇಳುವ ಸಮಂತಾಳ ಹೆಲ್ತ್ ಟಿಪ್ಸ್ ಅನ್ನು ಸಾರ್ವಜನಿಕರು ಪಾಲಿಸಿ ಆರೋಗ್ಯವಂತರಾಗಲಿ.

This Article Has 1 Comment
  1. Pingback: sexton dental clinic florence sc address

Leave a Reply

Your email address will not be published. Required fields are marked *

Translate »
error: Content is protected !!