ಐದೇ ದಿನದಲ್ಲಿ 6,000 ಟಿಕೆಟ್ ಮಾರಾಟ

ಕನ್ನಡ ರಾಜ್ಯೋತ್ಸವದ ದಿನ ಬಿಡುಗಡೆಗೆ ಸಿದ್ಧವಾಗಿರೋ ಸಿನಿಮಾ‌ ‘ಭ್ರಮೆ’. ಚಿತ್ರವು ‘ನಮ್ಮ‌ ಫ್ಲಿಕ್ಸ್’ ಎನ್ನುವ ಒಟಿಟಿ ಆ್ಯಪ್ ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಇದು ನಮ್ಮ ಫ್ಲಿಕ್ಸ್ ಮೂಲಕ ನೇರವಾಗಿ ಬಿಡುಗಡೆಯಾಗುತ್ತಿರುವ ಪ್ರಥಮ ಚಿತ್ರ. ನಿರ್ದೇಶಕ ಚರಣ್ ರಾಜ್ ಅವರು ಟಿಕೆಟ್ ಮಾರಾಟಕ್ಕಾಗಿ ವಿಶೇಷ ಯೋಜನೆ ಹಾಕಿಕೊಂಡಿದ್ದರು. ಅದರಲ್ಲಿ ತಾವು ಯಶಸ್ವಿಯಾಗಿರುವುದಾಗಿ ವಿಡಿಯೋ ಮೂಲಕ ಅವರು ಸಾಕ್ಷಿ ಸಮೇತ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಮಾತನಾಡಿರುವ ಅವರು “ನಾನು ಚರಣ್ ರಾಜ್, ‘ಭ್ರಮೆ’ ಚಿತ್ರದ ನಿರ್ದೇಶಕ. 50,000 ಮ್ಯಾನುವಲ್ ಟಿಕೆಟ್ ಪ್ರಿಂಟ್ ಮಾಡಿಸಿದ್ದೀವಿ. ಅದರಲ್ಲಿ 25,000 ಟಿಕೆಟ್ ಡಿಸ್ಟ್ರುಬ್ಯೂಶನ್ ಗೆ ಹೋಗಿದೆ. ಅದರಲ್ಲಿ 5 ದಿನದಲ್ಲಿ 6000 ಟಿಕೆಟ್ ಸೇಲ್ ಆಗಿದೆ. ನಿಮ್ಮ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು. ಟಿಕೆಟ್ ಇನ್ನು ವೈಟಿಂಗ್ ನಲ್ಲಿದೆ. ಟಿಕೆಟ್ ಬುಕ್ ಮಾಡದವರು ಬುಕ್ ಮಾಡಿ ತಗೊಳ್ಳಿ. ನವೆಂಬರ್ ಒಂದನೇ ತಾರೀಕು ಸಿನಿಮಾ ರಿಲೀಸ್ ಆಗುತ್ತೆ. ಕನ್ನಡ ಸಿನಿಮಾ. ಕನ್ನಡ ರಾಜ್ಯೋತ್ಸವ ದಂದು ಎಕ್ಸ್ ಕ್ಲ್ಯೂಸಿವ್ಲಿ ನಮ್ಮ ಆ್ಯಪ್ ನಮ್ಮಫ್ಲಿಕ್ಸ್ ನಲ್ಲಿ ರಿಲೀಸ್ ಆಗುತ್ತೆ.‌ ದಯವಿಟ್ಟು ಸಿನಿಮಾ‌‌ನೋಡಿ ಪ್ರೋತ್ಸಾಹಿಸಿ.” ಎಂದು ಹೇಳಿದ್ದಾರೆ.

ಮಾರಾಟವಾಗಿರುವ ಟಿಕೆಟ್‌ಗಳ ಖರೀದಿದಾರರನ್ನು ನೆನಪಿಸಿಕೊಂಡಿರುವ ನಿರ್ದೇಶಕರು ಹೆಚ್ ಪಿ ಪೆಟ್ರೋಲ್ ಬಂಕ್ ಮತ್ತು ವರ್ಗದವರು ನೂರು ಟಿಕೆಟ್, ಎಸ್ ಐ ಪಿ ಅಬಾಕಸ್ ಕರ್ನಾಟಕದವರು 200 ಟಿಕೆಟ್, ಶ್ರೀಕಾಂತ್ ನಕ್ಷ ಸ್ನೇಹಿತ 100 ಟಿಕೆಟ್, ಬಿಎಎಸ್ ಟಿ ಎ ಮೇಕೆ ಹಾಲು ಮತ್ತು ತಂಡದವರು 100 ಟಿಕೆಟ್, ಬ್ಲೂ ಹ್ಯೂಂಡೈ ಟೀಮ್ 100 ಟಿಕೆಟ್ ಖರೀದಿಸಿರುವುದಾಗಿ ತಿಳಿಸಿ ಧನ್ಯವಾದ ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!