ಇದೊಂದು ಮುಗ್ಧ ಪ್ರೇಮಿಯ ಕಥೆಯಾಗಿದ್ದು , ತ್ರಿಕೋನ ಪ್ರೇಮ ಕಥೆಯನ್ನು ಒಳಗೊಂಡಿದೆ. ನಾವು ಇಷ್ಟಪಡುವವರಿಗಿಂತ , ನಮ್ಮನ್ನು ಇಷ್ಟಪಡುವವರ ಪ್ರೀತಿ ಎಂಥದ್ದು ಎಂದು ಹೇಳುವ ಅಂಶವೂ ಈ ಚಿತ್ರದಲ್ಲಿ ಒಳಗೊಂಡಿದ್ದು ಪ್ರೀತಿ ಹಾಗೂ ಸ್ಫೂರ್ತಿಯ ಪ್ರೇಮ ಪ್ರಕರಣ ಪ್ರಮುಖವಾಗಿ ಕಾಣುತ್ತದೆ. ನಾಯಕನ ಜೀವನ ಹೇಗೆಲ್ಲಾ ತಿರುವುಗಳನ್ನು ಪಡೆದುಕೊಂಡು ಯಾವ ಹಂತಕ್ಕೆ ನಿಲ್ಲುತ್ತಾನೆ ಎಂಬ ಕಥಾ ಸಾರಾಂಶ ಈ ಚಿತ್ರದಲ್ಲಿದೆ.

ಇದೊಂದು ರೊಮ್ಯಾಂಟಿಕ್ ಪ್ರೇಮ ಕಥೆಯಾಗಿದ್ದು , ಲಾಕ್ ಡೌನ್ ನಂತರ ಕಾರ್ತಿಕ್ ವೆಂಕಟೇಶ್ ಅವರ ಸ್ಟುಡಿಯೊದಲ್ಲಿ ಕೆಲಸ ನಡೆಯುತ್ತಿರುವ 15ನೇ ಚಿತ್ರ ಇದಾಗಿದೆ. , ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದ ಸಂಪೂರ್ಣ ಜವಾಬ್ದಾರಿಯನ್ನು ಕಾರ್ತಿಕ್ ವೆಂಕಟೇಶ್ ಸ್ಟುಡಿಯೋ ವಹಿಸಿಕೊಂಡಿದ್ದು ,

ಎಡಿಟಿಂಗ್ , ಡಬ್ಬಿಂಗ್ , ರೀ -ರೆಕಾರ್ಡಿಂಗ್ , ಕ್ಯಾಮೆರಾ ಯೂನಿಟ್ , ಚಿತ್ರದ ಸಾಹಿತ್ಯ ಹಾಗೂ ಸಂಗೀತ ಒಳಗೊಂಡಂತೆ ಕಾರ್ತಿಕ್ ವೆಂಕಟೇಶ್ ತಂಡದೊಂದಿಗೆ ಕೈ ಜೋಡಿಸಿದ್ದಾರೆ. ಈ ನವಾಬ ಚಿತ್ರದ ಮೂಲಕ ನಾಯಕನಾಗಿ ವಿವೇಕ್ ಪಾದಾರ್ಪಣೆ ಮಾಡುತ್ತಿದ್ದಾರೆ.

ಇವರೊಂದಿಗೆ ಅಣ್ಣೇಶ್ , ಮೊನೀಶಾ.ಎನ್. ರಾಜ್ , ಕಾವ್ಯ , ಪವಿತ್ರ ನೀಲಕಂಠ ಸೇರಿದಂತೆ ಹಲವಾರು ಯುವ ಹಾಗೂ ಅನುಭವಿ ಕಲಾವಿದರು “ನವಾಬ” ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮನು ದಾಸಪ್ಪ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಮುರಳಿ ಪ್ರಸಾದ್ ಹಾಗೂ ಮಹಾದೇವ್ ಕಲಾ ನಿರ್ದೇಶನ ಮಾಡಿದ್ದಾರೆ. ಈ “ನವಾಬ” ಚಿತ್ರ ವಿಭಿನ್ನವಾಗಿ ಮೂಡಿ ಬರುತ್ತಿದ್ದು , ಚಿತ್ರ ತಂಡ ತನ್ನ ಕೆಲಸವನ್ನು ನಿರಂತರವಾಗಿ ಸಾಗಿಸಿದೆ.