ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಸಕ್ರಿಯ ಆಗಿರುವ ಸಮಂತಾ ಅಕ್ಕಿನೇನಿ ಅವರಿಗೆ ಬರೋಬ್ಬರಿ 12 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅಂದರೆ, 1.2 ಕೋಟಿ ಜನರು ಅವರ ಪೋಸ್ಟ್‌ಗಳನ್ನು ಹಿಂಬಾಲಿಸುತ್ತಿದ್ದಾರೆ. ತಮಗೆ ಇರುವ ಇಷ್ಟು ದೊಡ್ಡ ಅಭಿಮಾನಿ ಬಳಗವನ್ನು ಕಂಡ ಸಮಂತಾ ಸಹಜವಾಗಿಯೇ ಖುಷಿ ಆಗಿದ್ದಾರೆ. ಈ ಮೈಲಿಗಲ್ಲು ತಲುಪಿರುವುದಕ್ಕೆ ಅವರು ಹೊಸ ಫೋಟೋಶೂಟ್ ಮೂಲಕ ಸಂಭ್ರಮಿಸಿದ್ದಾರೆ.
ಯಾವಾಗಲೂ ಅಭಿಮಾನಿಗಳ ಜೊತೆ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳಲು ಸಮಂತಾ ಬಯಸುತ್ತಾರೆ. ಸಿನಿಮಾಗಳ ಬಗ್ಗೆ ಮಾಹಿತಿ ನೀಡುವುದು ಮಾತ್ರವಲ್ಲದೆ, ತಮ್ಮ ಸಾಕು ಪ್ರಾಣಿಗಳು, ಗಾಡರ್ನ್ ಕೆಲಸ, ಫ್ಯಾಮಿಲಿ ಜೊತೆ ಕಳೆದ ಖುಷಿಯ ಕ್ಷಣ… ಹೀಗೆ ಎಲ್ಲದರ ಬಗ್ಗೆಯೂ ಅವರು ಪೋಸ್ಟ್ ಮಾಡುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಅವರ ಫ್ಯಾನ್ಸ್ ಸಂಖ್ಯೆ ಹೆಚ್ಚಿದೆ. ಲಾಕ್‌ಡೌನ್‌ನಲ್ಲಿ ತಾವು ಮಾಡಿದ ಎಲ್ಲ ಪ್ರಯತ್ನಗಳ ಬಗ್ಗೆಯೂ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Pingback: Digital Transformation companies