ಜನರ ಮನ ಗೆದ್ದ “ಅದನೇನ್ ಕೇಳ್ತಿ”

ಸ್ಕೆಚ್ ಪೆನ್ಸಿಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹ್ಯಾರಿ ಅವರು ನಿರ್ಮಿಸಿರುವ , ನಾಗೇಂದ್ರ ಅರಸ್ ನಿರ್ದೇಶಿಸಿರುವ “ಅದನೇನ್ ಕೇಳ್ತಿ” ಚಿತ್ರ ಆಗಸ್ಟ್ ೨೨ ರಂದು ವಿ. ೪. ಸ್ಟ್ರೀಮಿಂಗ್ (V4stream) ಓ.ಟಿ.ಟಿ. ಮೂಲಕ ಬಿಡುಗಡೆಯಾಗಿ ಜನಮನ ಸೂರೆ ಗೊಂಡಿದೆ.

೧೬ ಸನ್ನಿವೇಶಗಳ ಚಿತ್ರೀಕರಣ ಕೇವಲ ನಾಲ್ಕು ವರೆ ದಿನಗಳಲ್ಲಿ ಮುಕ್ತಾಯವಾಗಿರುವುದು ವಿಶೇಷ. ಮನೋರಂಜನಾ ಆoಶ ಪ್ರಧಾನವಾಗಿರುವ ಈ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿರುವುದು ಇಡೀ ತಂಡಕ್ಕೆ ಸಂತಸ ತಂದಿದೆ ಎನ್ನುತ್ತಾರೆ ನಾಗೇಂದ್ರ ಅರಸ್. ನಿರ್ದೇಶಕರೆ ಕಥೆ ಬರದು ಸಂಕಲನ ಕಾರ್ಯವನ್ನು ನಿರ್ವಹಿಸಿದ್ದಾರೆ.

ಎಂ.ಬಿ ಅಳಿಕಟ್ಟಿ ಛಾಯಾಗ್ರಹಣ ಹಾಗೂ ಸೇನಾಪತಿ ಅವರ ಸಂಗೀತ ಈ ಚಿತ್ರಕ್ಕಿದೆ. ನಿರಂಜನ್ ದೇಶಪಾಂಡೆ, ಪ್ರವೀಣ್ ಕುಮಾರ್ (ಕಾಮಿಡಿ ಕಿಲಾಡಿಗಳು), ಅನಿಲ್ ಯಾದವ್, ಹ್ಯಾರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!