ತೆರೆಮೇಲೆ ಬರ್ತಿದೆ ಮತ್ತೊಂದು ಸ್ನೇಹಿತರ ಕಥೆ
ದಿ, ಮಂಜುನಾಥನ ಗೆಳೆಯರು.. ಸದ್ಯ ಗಾಂಧಿನಗರದಲ್ಲಿ ಸದ್ದು ಮಾಡುತ್ತಿರುವ ಚಿತ್ರ, 802 ಬ್ಯಾನರ್ನ ಅಡಿಯ್ಲಲಿ ತಯಾರಾಗಿರುವ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಅರುಣ್ ಎನ್,ಡಿ. ಅರುಣ್ಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ ಆದ್ರೂ ಒಂದೆರಡು ಚಿತ್ರಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿದ ಅನಿಬವವಿದೆ, ಇದೇ ಅನುಭವದ ಮೇಲೆ ಜೊತೆಗೆ ಸಿನಿಮಾ ಮಾಡುವ ದೊಡ್ಡ ಆಸೆಯೊಂದಿಗೆ ಕೈಗೆತ್ತಿಕೊಂಡಿರುವ ಚಿತ್ರ ಈ ದಿವಂಗತ ಮಂಜುನಾಥನ ಗೆಳೆಯರು, ಈ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಇತ್ತಿಚಿಗಷ್ಟೇ ಅದ್ದೂರಿಯಾಗಿ ಬಿಡುಗಡೆಯಾಗಿದೆ.
ಸ್ನೇಹಿತರಾಗ್ಬೇಕು ಅಂದ್ರೆ ಇಂಥದ್ದೇ ಫಿಕ್ಸ್ ಜಾಗ ಬೇಕು, ರೂಲ್ಸ್ ಇರಬೇಕು, ನಿಯಮಗಳಿರಬೇಕು ಅಂತೇನಿಲ್ಲ ಕಣ್ರೀ, ಹಾಗಾಗಿಯೇ ಇಲ್ಲಿ ಐದು ಜನ ಚಿತ್ರದ ನಾಯಕರು ಚಿತ್ರದಲ್ಲಿ ಸ್ನೇಹಿತರಾಗೋದು ಒಂದು ಪೋಲೀಸ್ ಸ್ಟೆಷನ್ನಲ್ಲಿ. ದಿವಂಗತನಾದ ಸ್ನೇಹಿನೊಬ್ಬನ ವಿಚಾರವಾಗಿ ಐದು ಜನ ಪ್ರೇಂಡ್ಸ್ ಆಗ್ತಾರೆ, ರುದ್ರ ಪ್ರಯಾಗ್, ಶಂಕರ್ ಮೂರ್ತಿ, ರವಿ ಪೂಜಾರ್,ಮೋಹನ್ ದಾಸ್, ಸುಂಗಾರಿ ನಾಗರಾಜ್, ಇವರೇ ಐದು ಜನ ಇಂಜನಿಯರಿಂಗ್ ಕಾಲೇಜ್ ಹುಡುಗರು ಸ್ನೇಹಿತರಾಗ್ತಾರೆ.
ಇದೊಂದು ಪ್ರೆಂಡ್ಶಿಪ್ ಕಥೆಯಾದ್ರೂ ಸಾಕಷ್ಟು ತಿರುವುಗಳನ್ನ ಹೊಂದಿರೋ ಚಿತ್ರಕಥೆ, ಚಿತ್ರದಲ್ಲಿ ಕಾಮಿಡಿ, ಪ್ರೀತಿ, ಪ್ರೇಮ ಸಂಬಂಧಗಳ ಮಹತ್ವವನ್ನ ವಿವರಿಸಲು ಚಿತ್ರಕ್ಕೆ ತಕ್ಕಂತಹ ಕಥೆಯನ್ನ ಹೆಣೆದುಕೊಂಡಿದ್ದಾರೆ ನಿರ್ದೇಶಕ ಅರುಣ್. ಚಿತ್ರದ ಟೈಟಲ್ ಕೇಳಿದ್ರೆನೆ ಒಂಥರಾ ಡಿಪರೆಂಟ್ ಅನ್ನಿಸುತ್ತೆ, ಆದ್ರೆ ಚಿತ್ರತಂಡ ಹೇಳೋದು ಸಂಪೂರ್ಣ ಚಿತ್ರವೇ ಡಿಫರೆಂಟ್ ಆಗಿದೆ. ಖಂಡಿತ ಬೋರ್ ಹೊಡೆಯುವಂತ ಚಿತ್ರವಲ್ಲವಿದು ಎನ್ನುತ್ತಾರೆ, ಇನ್ನೂ ಚಿತ್ರದಲ್ಲಿ ನಾಯಕಿಯಾಗಿ ಶಿತಲ್ ಪಾಂಡ್ಯ, ಕಾಣಿಸಿಕೊಂಡಿದ್ದಾರೆ
ಚಿತ್ರದ ನಿರ್ದೇಶಕ ಅರುಣ್ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವಿನಯ್ ಕುಮಾರ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ಹಾಡುಗಳು ಕೂಡಾ ಕೇಳುಗರ ಮನಸ್ಸಿಗೆ ಮುದ ನೀಡುವಂತಿವೆ , ಐಶ್ವರ್ಯ ರಂಗರಾಜನ್,ಕಾರ್ತಿಕ್, ಮೆಹಬೂಬ್ ಸಾಬ್ ಚಿತ್ರದ ಹಾಡುಗಳಿಗೆ ಧನಿಯಾಗಿದ್ದಾರೆ. ಇನ್ನೂ ನಿರ್ದೇಶಕ ಅರುಣ್ ಮತ್ತು ಗೋಪಿ ಶೀಗೇಹಳ್ಳಿ ಹಾಡಿನ ಸಾಹಿತ್ಯವನ್ನ ಬರೆದಿದ್ದಾರೆ.
ಒಟ್ಟಿನಲ್ಲಿ ಗೆಲ್ಲಲೆಬೇಕೆಂಬ ಪಣ ತೊಟ್ಟು ತಯಾರಾಗುತ್ತಿರುವ ಚಿತ್ರಗಳು ಟೈಟಲ್ನಿಂದಲೋ, ಟ್ರೇಲರ್ ಮೂಲಕವೋ, ಹಾಡುಗಳ ಮೂಲಕವೋ ಸದ್ದು ಮಾಡುತ್ತಲೇ ಇರುತ್ತವೇ, ಅದೇ ಸಾಲಲ್ಲಿ ನಿಂತಿರುವ ಈ ದಿ, ಮಂಜುನಾಥನ ಗೆಳೆಯರು ಚಿತ್ರ ಕೂಡಾ ಸದ್ಯ ಟ್ರೇಲರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡ್ತಿದೆ, ಇನ್ನೆನು ಮುಂದಿನ ತಿಂಗಳು ಚಿತ್ರವನ್ನ ತೆರೆಗೆ ತರುವ ತಯಾರಿಯನ್ನೂ ಕೂಡಾ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ ತೆರೆಗೆ ಬಂದ ನಂತರ ಇನ್ನೂ ಹೇಗೆಲ್ಲಾ ಸದ್ದು ಮಾಡುತ್ತೆ ಅಂತಾ ಕಾದುನೋಡಬೇಕು.
Pingback: plumber Manns Harbor