‘ಮಾರ್ಗ’ ಚಿತ್ರಕ್ಕೆ ನಟ ಪುನೀತ್ ರಾಜಕುಮಾರ್ ಚಾಲನೆ

ನಟ ಚೇತನ್  ಮೂರು ವರ್ಷಗಳ ನಂತರ ಇದೀಗ ನಟ ಬಣ್ಣ ಹಚ್ಚುತ್ತಿದ್ದು ಆಕ್ಷನ್-ಥ್ರಿಲ್ಲರ್ ಮಾರ್ಗ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ದಿಯಾ ಖ್ಯಾತಿಯ ಖುಷಿ ಮತ್ತು ಏಕ್ ಲವ್ ಯಾ ಚಿತ್ರದ ನಾಯಕಿ ಗ್ರೀಷ್ಮಾ ನಾಣಯ್ಯ ಚೇತನ್ ಅವರಿಗೆ ಜೋಡಿಯಾಗಿದ್ದಾರೆ. ಚಿತ್ರದ ಮುಹೂರ್ತ ದೃಶ್ಯಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಂದು ಕ್ಲ್ಯಾಪ್ ಮಾಡಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಕತೆಯಾಗಿದ್ದು, ಚಿತ್ರಕ್ಕೆ `ಮಾರ್ಗ’ ಎಂದು ಹೆಸರಿಡಲಾಗಿದೆ.

ಮಾರ್ಗ ಮೋಹನ್ ನಿರ್ದೇಶನದ ಚೊಚ್ಚಲ ಚಿತ್ರವಿದು. ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಮೋಹನ್ ಇದೀಗ ನಿರ್ದೇಶಕನ ಕ್ಯಾಪ್ ದರಿಸಿದ್ದಾರೆ. “ಗಮ್ಯಸ್ಥಾನಕ್ಕಾಗಿ ಒಂದು ನಿರ್ದಿಷ್ಟ ಹಾದಿಯನ್ನು ನಾಯಕ ತೆಗೆದುಕೊಳ್ಳುತ್ತಾನೆ, ಈ ಮಾರ್ಗವು ಸರಿಯಾ ಅಥವಾ ತಪ್ಪಾ ಎಂಬುದೇ ಮಾರ್ಗ ಚಿತ್ರದ ಸಾರಾಂಶವಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಈ ಚಿತ್ರ ಕಮರ್ಶಿಯಲ್ ಎಲಿಮೆಂಟ್ಸ್ ಜೊತೆಗೆ ಸಾಮಾಜಿಕ ಸಂದೇಶವನ್ನು ಹೊಂದಿರುವ ಮನರಂಜನಾ ಚಿತ್ರವಾಗಿರಲಿದೆ.

ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಕಾಣಿಸಿಕೊಳ್ಳಲಿದ್ದಾರೆ ದಿಯಾ ನಾಯಕಿ ಕುಶಿ, ಮಾರ್ಗ ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದು ಎಸ್.ಕೆ.ರಾವ್ ಅವರ ಛಾಯಾಗ್ರಹಣವಿದೆ. ಸೆಪ್ಟೆಂಬರ್ ಎರಡನೇ ವಾರದಿಂದ ಶೂಟಿಂಗ್ ಪ್ರಾರಂಭಿಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.



 

This Article Has 2 Comments
  1. Pingback: solar panel Installation Milford City CT

  2. Pingback: ثبت نام در بت فوروارد

Leave a Reply

Your email address will not be published. Required fields are marked *

Translate »
error: Content is protected !!