ಮ್ಯೂಸಿಕ್ ಮೂಲಕ ಹೊಸ ಚಿತ್ರಕ್ಕೆ ಮುನ್ನುಡಿ

ನಿರ್ದೇಶಕ ರಾಜು ದೇವಸಂದ್ರ ನಿರ್ದೇಶನದ ನಾಲ್ಕನೆಯ ಚಿತ್ರದ ಶುಭಾರಂಭವು ಚಿತ್ರದ ಹಾಡಿನ ಸಂಗೀತ ಸಂಯೋಜನೆಯ ಮೂಲಕ ಶುರುವಾಗಿದೆ. ಇನ್ನೂ ಹೆಸರಿಟ್ಟಿಲ್ಲದ ಈ ಹೊಸ ಚಿತ್ರಕ್ಕೆ ಕನ್ನಡದ ಯುವ ಸಂಗೀತ ನಿರ್ದೇಶಕ ಆರವ್ ರಿಷಿಕ್ ಸಂಗೀತ ನಿರ್ದೇಶನದಲ್ಲಿ ಇತ್ತೀಚೆಗಷ್ಟೇ ಹಾಡಿನ ಸಿದ್ಧತೆ ನಡೆಯಿತು. ಆರವ್ ರಿಷಿಕ್ ಅವರಿಗೆ ಇದು ನಿರ್ದೇಶಕ ರಾಜು ದೇವಸಂದ್ರರ ನಿರ್ದೇಶನದಲ್ಲಿ ಮೂರನೆಯ ಚಿತ್ರವಾಗಿದೆ. ಮ್ಯೂಸಿಕ್ ಕಂಪೋಸಿಂಗ್‌ ಆರಂಭವು ಆರವ್ ಅವರ ರಾಗರಂಜಿನಿ ಸ್ಟುಡಿಯೋದಲ್ಲಿಯೇ ನೆರವೇರಿತು.

‘ಸ್ವಾರ್ಥ ರತ್ನ’ ನಾಯಕನ ಚಿತ್ರ

‘ಸ್ವಾರ್ಥ ರತ್ನ’ ಎನ್ನುವ ಚಿತ್ರದಲ್ಲಿ ನಾಯಕನಾಗಿ ನಟಿಸಿದ ಆದರ್ಶ ಗುಂಡುರಾಜ್
ಈ ಚಿತ್ರದ ನಾಯಕ. ಅದರಲ್ಲಿ ಮೋಹನ್ ಅವರ ಗಾಯನದ `ನಿನ್ನಯನಾ..’ ಹಾಡು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಅದರ ಬಳಿಕ ತಮಿಳಿನಲ್ಲಿ `ಕಾದಲ್ ಪೈತ್ಯಂ’ ಎನ್ನುವ ಸಿನಿಮಾ, ಹಿಂದಿಯಲ್ಲಿ `ಹೇ ದಿಲ್ ರಮ್ತಾ ಜೋಗಿ’ ಎನ್ನುವ ಚಿತ್ರಗಳಲ್ಲಿ ನಟಿಸಿರುವ ಆದರ್ಶ ಗುಂಡುರಾಜ್ ಇದೀಗ ರಾಜು ದೇವಸಂದ್ರ ನಿರ್ದೇಶನದ ಚಿತ್ರದ ಮೂಲಕ ಕನ್ನಡಕ್ಕೆ ಮರಳಿದ್ದಾರೆ. ತನ್ನ ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಡುವ ನಾಯಕ
ನಾಗಿ ಆದರ್ಶ್ ಕಾಣಿಸಿಕೊಳ್ಳಲಿದ್ದು, ಕತೆಯಲ್ಲಿ ಇವರಿಗೆ ಜೋಡಿಯಾಗಲಿರುವ ಹುಡುಗಿಯ ಆಯ್ಕೆ ಇನ್ನೂ ಆಗಿಲ್ಲ. ಆದರೆ ಕಣ್ಣು ಕಾಣದ ಹುಡುಗಿಯ ಪಾತ್ರವಾಗಿರುವುದು ಅಂಥದೊಂದು ಪಾತ್ರ ನಿಭಾಯಿಸಬಲ್ಲ ನಟಿಯ ಬಗ್ಗೆ ವಿಶೇಷ ನಿರೀಕ್ಷೆ ಮೂಡಿದೆ.

ಸ್ನೇಹಿತರ ಸಮಾಗಮ

ನಿರ್ದೇಶಕ ರಾಜು ದೇವಸಂದ್ರ ಅವರು ಎಲ್ಲರೊಂದಿಗೆ ತಮ್ಮ ಸ್ನೇಹವನ್ನು ಉಳಿಸಿಕೊಳ್ಳುವುದರಲ್ಲಿ ಹೆಸರಾದವರು. ಅದರ ಪರಿಣಾಮ ಎನ್ನುವಂತೆ ಆರಂಭ ಕಾಲದಿಂದ ಜತೆಯಾಗಿರುವ ತಂಡದ ಪ್ರಮುಖರನ್ನೇ ಈಗಲೂ ತಮ್ಮ ಚಿತ್ರದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಅದಕ್ಕೆ ದೊಡ್ಡ ಉದಾಹರಣೆ ಚಿತ್ರದ ನಿರ್ಮಾಪಕ ರಮೇಶ್ ಕೊಯಿರಾ ಅವರು. ಸುಮಾರು ಎರಡೂವರೆ ದಶಕದಿಂದ ಚಿತ್ರರಂಗದಲ್ಲಿರುವ ಅವರು ಈ ಚಿತ್ರದ ಛಾಯಾಗ್ರಾಹಕರೂ ಹೌದು. ಸಹಾಯಕ ಛಾಯಾಗ್ರಾಹಕರಾಗಿದ್ದ ದಿನಗಳಿಂದಲೇ ರಾಜು ದೇವಸಂದ್ರ ಅವರ ಸ್ನೇಹಿತರಾಗಿರುವ ರಮೇಶ್ ಕೊಯಿರಾ, ರಾಜು ಅವರ ಹಿಂದಿನ ಚಿತ್ರವಾದ `ಕತ್ತಲೆ ಕಾಡು’ ಸಿನಿಮಾಗೂ ಕ್ಯಾಮೆರಾಮ್ಯಾನ್ ಆಗಿದ್ದರು. ಸ್ನೇಹಿತನ ವೃತ್ತಿಪರತೆಯನ್ನು ಮೆಚ್ಚಿ ಇದೀಗ ತಮ್ಮ ಪ್ರೊಡಕ್ಷನ್ ನಲ್ಲೇ ಚಿತ್ರ ನಿರ್ದೇಶಿಸುವ ಅವಕಾಶ ನೀಡಿದ್ದಾರೆ. ಚಿತ್ರದಲ್ಲಿ ಅಜಯ್ ಗುಂಡುರಾಜ್ ಅವರ ಜತೆಗೆ ಖಳನಾಗಿ ನವೀನ್ ಶಕ್ತಿ, ಪ್ರದೀಪ್, ಪವನ್ ಕುಮಾರ್ ಕೊಲ್ಲೂರು, ಮಂಜು ಮಯೂರ್ ನಟಿಸುತ್ತಿದ್ದು ತಾರಾಗಣದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಕೆಜಿಎಫ್ ಖ್ಯಾತಿಯ ಖಳನಾಯಕ ವಿಕ್ರಂ ಮೋರ್ ಚಿತ್ರದ ನಾಲ್ಕು ಸಾಹಸ ಸಂಯೋಜನೆಗಳನ್ನು ನಿಭಾಯಿಸಲಿದ್ದಾರೆ. ಆರವ್ ರಿಷಿಕ್ ಸಂಗೀತದಲ್ಲಿ ಒಂದು ಪ್ರೇಮಗೀತೆ ಇದ್ದು ಅದನ್ನು ಪತ್ರಕರ್ತ ಮತ್ತು ಕವಿ, ಕಲಾವಿದ ಶಶಿಕರ ಪಾತೂರು ರಚಿಸಿದ್ದಾರೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!