ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ ‘ತ್ರಿಕೋನ’ ಚಿತ್ರದ ಮೋಷನ್ ಪೋಸ್ಟರ್ ಪೊಲೀಸ್ ಪ್ರಕ್ಕಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಜಶೇಖರ್ ಅವರು ನಿರ್ಮಿಸಿರುವ ‘ತ್ರಿಕೋನ` ಚಿತ್ರ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರ ನೀಡಿದೆ.. ಯಾವುದೇ ಕಟ್ ನೀಡದೆ, ಸೌಂಡ್ ಮ್ಯೂಟ್ ಸಹ ನೀಡದೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರ ನೀಡಿದೆ.
ವರಮಹಾಲಕ್ಷ್ಮೀ ಹಬ್ಬದಂದು ಈ ಚಿತ್ರದ ಮೋಷನ್ ಪೋಸ್ಟರ್ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆ ಮಾಡಲಾಯಿತು. ಚಲ್ ಚಲ್ ಚುಲಾ.. ಮೊದಲ ಬಾರಿಗೆ ಈ ವಿಚಿತ್ರವಾದ ಒಂದು ಪದವನ್ನು ಕೇಳಲಾಯಿತು. ಅದು ಬೇರೆಲ್ಲೂ ಅಲ್ಲ, ತ್ರಿಕೋನ ಚಿತ್ರದ ಮೋಷನ್ ಪೋಸ್ಟರ್ ನಲ್ಲಿ.
ತ್ರಿಕೋನ ಚಿತ್ರತಂಡವೂ ಚಿತ್ರದ ಪ್ರಚಾರ ಕಾರ್ಯದ ಭಾಗವಾಗಿ ಮೋಷನ್ ಪೋಸ್ಟರ್ ನ್ನು ಕನ್ನಡ ಸೇರಿದಂತೆ, ತ್ರಿಕೋನಂ ಎಂದು ತೆಲುಗಿನಲ್ಲಿ ಹಾಗೂ ಗೋಸುಲೋ ಎಂಬ ಹೆಸರಿನಿಂದ ತಮಿಳಿನಲ್ಲೂ ಬಿಡುಗಡೆ ಮಾಡಲಾಗಿದೆ, ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸೈ ಎನಿಸಿಕೊಂಡಿದೆ.
ಅದ್ಭುತವಾದ ಗ್ರಾಫಿಕ್ಸ್ ಹಾಗೂ ರಿರೇಕಾರ್ಡಿಂಗ್ ನೊಂದಿಗೆ ನೋಡುಗರಲ್ಲಿ ಕುತೂಹಲವನ್ನು ಕೆರಳಿಸುತ್ತದೆ. ಸುರೇಶ್ ಹೆಬ್ಳೀಕರ್, ಲಕ್ಷ್ಮಿ, ಅಚ್ಯುತ ಕುಮಾರ, ಸುಧಾರಾಣಿ ಹಾಗೂ ಸಾಧುಕೋಕಿಲರ ಮಧ್ಯದಲ್ಲೊಬ್ಬ ಆಜಾನುಬಾಹು ಪ್ರತ್ಯಕ್ಷನಾಗುವಾಗ ಮೇಲೆ ಹೇಳಿದ “ಚಲ್ ಚಲ್ ಚುಲಾ” ಎಂಬ ಪದವು ಬರಲು ಶುರುವಾಗುತ್ತೆ, ಈ ಪದವು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿಸಿದೆ, ಇದರಲ್ಲಿ ಬರುವ ಆಜಾನುಬಾಹುವನ್ನು ಕಣ್ತುಂಬಿಕೊಳ್ಳಲು ಯೂಟ್ಯೂಬ್ ನಲ್ಲಿ ಮೋಷನ್ ಪೋಸ್ಟರ್ ಲಭ್ಯವಿದೆ. ಅಂದಹಾಗೆ ಈ ಮೋಷನ್ ಪೋಸ್ಟರ್ ಕನ್ನಡ ಹಾಗೂ ತೆಲುಗಿಗಿಂತಲೂ ತಮಿಳಿನಲ್ಲಿ ಹೆಚ್ಚು ಸದ್ದು ಮಾಡಿದೆ.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ಮಾಪಕ ರಾಜಶೇಖರ್ ಅವರೆ ಕಥೆ ಬರೆದದ್ದು, 143 ಚಿತ್ರದ ಖ್ಯಾತಿಯ ಚಂದ್ರಕಾಂತ್ ನಿರ್ದೇಶನ ಮಾಡಿದ್ದಾರೆ…
ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳಲ್ಲಿ ವಿಭಿನ್ನ ಚಿತ್ರಕಥೆಯೊಂದಿಗೆ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಮೂರು ಭಾಷೆಗಳಲ್ಲಿ ಮೂರು ಬೇರೆ ಚಿತ್ರಕಥೆಯೊಂದಿಗೆ ನಿರ್ಮಾಣವಾಗಿರುವುದು ವಿಶೇಷ.
ನಿರ್ದೇಶಕರ ಹೊರತುಪಡಿಸಿ ಆಯಾ ಭಾಷೆಗಳಲ್ಲಿ ಅಲ್ಲಿನ ನುರಿತ ತಂತ್ರಜ್ಞರು ಕಾರ್ಯ ನಿರ್ವಹಿಸಿದ್ದಾರೆ..ಸುರೇಂದ್ರನಾಥ್ ಸಂಗೀತ ನಿರ್ದೇಶನ, ಶ್ರೀನಿವಾಸ್ ವೆನಕೋಟ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ ಹಾಗೂ ಜಾನಿ, ಚೇತನ್ ಡಿಸೋಜ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸುರೇಶ್ ಹೆಬ್ಳೀಕರ್, ಲಕ್ಷ್ಮೀ, ಅಚ್ಯುತ ಕುಮಾರ್, ಸುಧಾರಾಣಿ, ಸಾಧುಕೋಕಿಲ, ಭಜರಂಗಿ ಮಾರುತೇಶ್, ರಾಜವೀರ್, ಅದಿತಿ ರಾಜ್, ಹಾಸಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Pingback: DevOps
Pingback: Digital transformation