ನಟ ರಮೇಶ್ ಅರವಿಂದ್ ರವರು ಅಭಿನಯಿಸಿರುವ ಶಿವಾಜಿ ಸುರತ್ಕಲ್ ಚಿತ್ರ ಇದೆ ವರ್ಷ ಫೆಬ್ರವರಿ 21 ರಂದು ಬಿಡುಗಡೆಯಾಗಿದ್ದು ಚಿತ್ರಮಂದಿರಗಳಲ್ಲಿ ಅಧ್ಭುತವಾದ ಪ್ರತಿಕ್ರಿಯೆ ಬಂದಿತ್ತು . ರಾಜ್ಯವಿಡೀ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಷೋ ಕಂಡಿತ್ತು. ಬಿಡುಗಡೆಯಾಗಿ ಮೂರು ವಾರದ ವರೆಗೂ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು ಲಾಕ್ಡೌನ್ ಇಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ನಿಲ್ಲಿಸಲಾಯಿತು.
ಈ ಚಿತ್ರಕ್ಕೆ ರಾಹುಲ್ ದ್ರಾವಿಡ್ ರವರು ಮೊದಲ ಪ್ರೇಕ್ಷಕರಾಗಿದ್ದು ವಿಶೇಷ. ಮಾಧ್ಯಮಗದಿಂದ ಒಳ್ಳೆ ವಿಮರ್ಶೆ ಪಡೆದ ಶಿವಾಜಿ ಸುರತ್ಕಲ್, ಪ್ರೇಕ್ಷಕರಿಂದ ಕೂಡ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಗೂಗಲ್ ನಲ್ಲಿ 96% , ಐ.ಎಂ.ಡಿ.ಬಿ ಯಲ್ಲಿ 8.3 ರೇಟಿಂಗ್ಸ್ ಈ ಚಿತ್ರಕ್ಕೆ ಸಿಕ್ಕಿತ್ತು.
ಈ ವರ್ಷ ಬಿಡುಗಡೆಯಾದ ಚಿತ್ರಗಳಲ್ಲಿ ಅತ್ಯಧಿಕ ಗಳಿಕೆ ಕಂಡ ಚಿತ್ರ ಎಂದು ಬುಕ್ ಮೈ ಶೋ ವೆಬ್ ಸೈಟ್ ನಲ್ಲಿ ಘೋಷಣೆಯಾಗಿದೆ. ಈ ಚಿತ್ರ ಲೊಕ್ಡೌನ್ ಸಮಯದಲ್ಲಿ ಮತ್ತೆ ಬಿಡುಗಡೆಯಾಗತ್ತೋ ಅಥವಾ ott ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆಯಾಗುತ್ತೋ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಇದೆ ತಿಂಗಳ ಆಗಸ್ಟ್ 7 ರಂದು zee5 ಎಂಬ OTT ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡಿಗರಲ್ಲದೆ ಕನ್ನಡೇತರರು ಕೂಡ ಈ ಚಿತ್ರವನ್ನು ನೋಡಬಹುದು. ಇದು ಒಂದು ಪತ್ತೆದಾರಿ ಚಿತ್ರವಾಗಿದ್ದು ಚಿತ್ರಮಂದಿರದಲ್ಲಿ ಸಿಕ್ಕ ಪ್ರತಿಕ್ರಿಯೆ ott ಪ್ಲಾಟ್ಫಾರ್ಮ್ ನಲ್ಲೂ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಚಿತ್ರತಂಡ ಇದೆ.
ಹಾಗೂ ಮುಂದಿನ ದಿನಗಳಲ್ಲಿ TELEVISION PREMIERE ವಿಚಾರವಾದ ಮಾಹಿತಿ ಚಿತ್ರದ ನಿರ್ದೇಶಕರು ತಿಳಿಸುತ್ತಾರೆ.
ಈ ಚಿತ್ರದ ಹಿಂದಿ ರಿಮೇಕ್ ರೈಟ್ಸ್ ಹಾಗೂ ಉತ್ತರ ಭಾರತದ ಎಲ್ಲ ಭಾಷೆಯ ಡಬ್ಬಿಂಗ್ ರೈಟ್ಸ್ ಅನ್ನು B4u movies ಅವರು ಪಡೆದುಕೊಂಡಿದ್ದು, ದಕ್ಷಿಣ ಭಾರತದ ಭಾಷೆಗಳಲ್ಲೂ ಕೂಡ ಡಬ್ಬಿಂಗ್ ಆಗುವ ಬಗ್ಗೆ ಇನ್ನು ಮಾತುಕತೆ ನಡೆಯುತ್ತಿದ್ದು ಇದರ ಬಗ್ಗೆ ಮಾಹಿತಿಯನ್ನು ಚಿತ್ರದ ನಿರ್ದೇಶಕರು ನೀಡಬೇಕಿದೆ.
ಈ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ರವರು ನಿರ್ಮಾಣ ಮಾಡಿದ್ದಾರೆ. ಆಕಾಶ್ ಶ್ರೀವತ್ಸ ರವರು ನಿರ್ದೇಶಿಸಿದ್ದು ಚಿತ್ರಕಥೆಯನ್ನು ಅಭಿಜಿತ್ ರಮೇಶ್ ಹಾಗೂ ಆಕಾಶ್ ಶ್ರೀವತ್ಸರವರು ಬರೆದಿದ್ದಾರೆ.
ಈ ಚಿತ್ರಕ್ಕೆ ಗುರುಪ್ರಸಾದ್ ಎಂ.ಜಿ ಛಾಯಾಗ್ರಹಣವಿದ್ದು ಜುಡಾ ಸ್ಯಾಂಡಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಆಕಾಶ್ ಶ್ರೀವತ್ಸ ರವರೆ ಸಂಕಲನಾಕಾರರಾಗಿದ್ದರೆ.
Pingback: binance website